ಕ.ಸಾ.ಪ.ಚುನಾವಣೆ ಸೋಮವಾರ ರಾಜಶೇಖರ ಅಂಗಡಿ ನಾಮಪತ್ರ ಸಲ್ಲಿಕೆ.

ಕೊಪ್ಪಳ ,ಜ.೨೩ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಾಜಶೇಖರ ಅಂಗಡಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ನಗರದ ವಾಲ್ಮೀಕಿ ಭವನದ ಹತ್ತಿರ ಕ.ಸಾ.ಪ.ಆಜೀವ ಸದಸ್ಯರು  ಸಮಾವೇಶಗೊಂಡು ಅಲ್ಲಿಂದ ಸಾಹಿತ್ಯ ಭವನ ಮಾರ್ಗವಾಗಿ ಪಾದಯಾತ್ರೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ೧೨ ಗಂಟೆಗೆ ನಾಮಪತ್ರ ಸಲ್ಲಿಸಲು ಉದ್ದೇಶಿಸಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ರಾಜಶೇಖರ ಅಂಗಡಿಯವರಿಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದರೂ ಅನಿವಾರ್ಯ ಕಾರಣಗಳಿಂದ ಕೆಲವೇ ಮತಗಳ ಅಂತರದಿಂದ ಪರಾಭವಗೊಳ್ಳುವಂತಾಯಿತು. ಕ್ರಿಯಾಶೀಲ ಸಂಘಟಕರಾಗಿರುವ ರಾಜಶೇಖರ ಅಂಗಡಿ ಎರಡು ಅವಧಿಗಳಿಗೆ ಕೊಪ್ಪಳ ತಾಲ್ಲೂಕು ಕ.ಸಾ.ಪ.ಅಧ್ಯಕ್ಷರಾಗಿ , ಒಂದು ಬಾರಿ ಜಿಲ್ಲಾ ಗೌರವ ಕೋಶಾಧ್ಯಕ್ಷನಾಗಿ ಮಾಡಿರುವ ಕಾರ್ಯಗಳು ಜನಮಾನಸದಲ್ಲಿ ಗಟ್ಟಿಯಾಗಿ ಉಳಿದಿವೆ, ನೇರ ನಡೆ,ನುಡಿಯ ರಾಜಶೇಖರ ಅಂಗಡಿ ಗಂಗಾವತಿಯಲ್ಲಿ   ಜರುಗಿದ ೭೮ ನೇ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಅವರು ದುಡಿದ ಪರಿ ಜಿಲ್ಲೆಯ ಕ.ಸಾ.ಪ.ಆಜೀವ ಸದಸ್ಯರಿಗೆ ತಿಳಿದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಈವರೆಗೆ ಜಿಲ್ಲಾ ಕೇಂದ್ರದಲ್ಲಿ ನೆಲೆಸಿರುವ ಅಭ್ಯರ್ಥಿಗಳು ಅಧ್ಯಕ್ಷರಾಗಿಲ್ಲ. ಈ ಬಾರಿ ಆ ಕೊರತೆಯನ್ನು ನೀಗಿಸಲು ರಾಜಶೇಖರ ಅಂಗಡಿಯವರನ್ನು ಎಲ್ಲ ತಾಲ್ಲೂಕುಗಳ ಆಜೀವ ಸದಸ್ಯರು ಸಭೆ ಸೇರಿ ಸರ್ವಾನುಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.
Please follow and like us:
error