ಹಾಫೀಜ್‌ಸಾಬ ಮತ್ತು ಮೌಲಾನಾರಿಗೆ ಸೈಯದ್ ಪೌಂಡೇಷನ್‌ನಿಂದ ಸನ್ಮಾನ
ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ದಿನಾಂಕ ೨೫-೮-೨೦೧೧ರಂದು ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರಿಂದ ಕೊಪ್ಪಳ ತಾಲೂಕಿನ ಎಲ್ಲಾ ಮಸ್ಜಿದ್‌ನ ಹಾಫಿಜ್ ಗಳಿಗೆ ಸನ್ಮಾನ ಸಮಾರಂಭ ಮದ್ಯಾಹ್ನ ೩ ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಮೌಲಾನಾ ಬಕ್ಷಿ ನಕ್ಷಬಂದೆ ಉಲ್ ಖಾದ್ರಿಯವರು ವಹಿಸಿಕೊಂಡಿದ್ದರು. ಕೊಪ್ಪಳದ ಇತಿಹಾಸದಲ್ಲಿಯೇ ಇಲ್ಲಿಯವರೆಗೆ ಯಾರೂ ಈ ತರಹದ ಹಾಫೀಜ್ ರವರಿಗೆ ಸನ್ಮಾನ ಮಾಡುವ ಕಾರ್‍ಯಕ್ರಮ ಮಾಡಿರಲಿಲ್ಲ. ಈ ದಿನ ಸೈಯದ್ ಪೌಂಡೇಷನ್ ಅಧ್ಯಕ್ಷರಾದ ಕೆ.ಎಂ.ಸಯ್ಯದ್ ಹಾಗೂ ಅಭಿಮಾನಿ ಬಳಗದವರು ಮೊದಲಬಾರಿಗೆ ಈ ಕಾರ್‍ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಸೈಯದ್ ಪೌಂಡೇಷನ್ ನ ಸಮಾಜಸೇವೆ ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿದರು.
೫೦ಕ್ಕೂ ಹೆಚ್ಚು ಹಾಫೀಜ್ ಮತ್ತು ಮೌಲಾನಾರವರಿಗೆ ಟ್ರಸ್ಟ್ ವತಿಯಿಂದ ಸನ್ಮಾನ ಹಮ್ಮಿಕೊಳ್ಳಲಾಯಿತು.
ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ, ಡಾ.ಮಲ್ಲಿಕಾರ್ಜುನ ರಾಂಪೂರಿ, ವೆಂಕನಗೌಡ ಹೊರತಟ್ನಾಳ, ನಗರಸಭೆ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್, ಸದಸ್ಯರಾದ ಜಾಕೀರ್ ಹುಸೇನ್ ಕಿಲ್ಲೇದಾರ, ಇಂದಿರಾ ಭಾವಿಕಟ್ಟಿ, ವಿಜಯ ಶಾಸ್ತ್ರಿ, ವಾಯಿದ್ ಸೋಂಪೂರ್,ಶಾಮೀದಸಾಬ, ಅಕ್ತರ ಫಾರೂಖಿ,ನವಾಜ್ ಸಾಬ, ಸೈಯದ್ ಅಭಿಮಾನಿ ಬಳಗದ ಅಧ್ಯಕ್ಷ ಸೈಯದ್ ಹಜ್ರತ್ ಖಾದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸ್ವಾಗತವನ್ನು ಹಾಫೀಜ್ ಜಮಾಲುದ್ದೀನ್ ಮೌಲಾನಾ, ಹಾಫೀಜ್ ಮೊಹಿದ್ದಿನ್ ಖಾದ್ರಿ ಕಾರ್‍ಯಕ್ರಮ ನಡೆಸಿಕೊಟ್ಟರು. ಹಾಫೀಜ್ ಮುಫ್ತಿ ನಜೀರ್ ಅಹ್ಮದ್‌ರು ವಂದಿಸಿದರು.

Leave a Reply