ಹಿಂದೂ ಮುಸ್ಲಿಮ್ ಸಾಮರಸ್ಯದ ಕುದ್ರಿಮೋತಿ ಮೊಹರಂ.

ಕೊಪ್ಪಳ-22- ಮೊಹರಂ ಉತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದ ಪ್ರಸಿದ್ಧ ಹಜರತ್ ಹುಸೇನಿ ಆಲಂ (ರ) ದರ್ಗಾದ ಮೊಹರಂ ಉತ್ಸವವು ಹಿಂದೂ ಮುಸ್ಲಿಂರ ಭಾವೈಕ್ಯತೆಯ ಬೆಸುಗೆ ಮತ್ತು ಹೈದಯ ಸಮ್ಮಿಲನದ ಸಂಕೆತವಾಗಿದೆ. ಶತಮಾನಗಳಿಂದಲೂ ತನ್ನದೇ ವೈಶಿಷ್ಟ್ಯ ಮತ್ತು ಗುರುತರವಾದ ಭವ್ಯ ಪರಂಪರೆಯನ್ನು ಕನ್ನಡ ನಾಡಿನಲ್ಲಿ ಗ್ರಾಮೀಣ ಸಾಂಸ್ಕೃತಿಕ ಜಾನಪದ ಸಿರಿಯ

ವೈಭವದೊಂದಿಗೆ ಸಾರುತ್ತಾ ಬಂದಿದೆ ಅಸಂಖ್ಯಾತ ಭಕ್ತಾಧಿಗಳ ಶ್ರದ್ದಾ ಅಭಿಮಾನ, ಪವಿತ್ರ ಭಕ್ತಿಯ ದ್ಯೊತಕವಾಗಿದೆ ದೇಶದ ನಾನಾ ಮೂಲೆಗಳಿಂದ ಅಲೆಮಾರಿ, ಬುಡಕಟ್ಟು, ಬುಡ್ಗ, ಜಂಗಮರು, ಮೂಲಜಂಗಮರು, ಸುಡುಗಾಡ ಸಿದ್ದರು, ಹಾವಾಡಿಗರು, ಪರ್ವತ ಮಲ್ಲಯ್ಯನವರು, ಜಾತಿಗಾರರು, ಗೊಂದಲಿಗರು, ಶಂಧೂಳ, ಮುಂತಾದ ಜನಾಂಗದವರು ಪರಸ್ಪರ ಮುಖಾ-ಮುಖಿ ಕೂಡುವಿಕೆಯ ಹೈದಯ ಸ್ಪರ್ಶಿ  ಕ್ಷೇತ್ರದ ಈ ದೃಶ್ಯ ಸರ್ವಜನಾಂಗದ ಶಾಂತಿಯ ತೋಟ ವೆಂಬಂತೆ ಮಾತೃ ಗ್ರಾಮ ಇದಾಗಿದೆ. ಗ್ರಾಮದ ಸಮಸ್ತ  ದೈವದವರು ಯಾವುದೇ ಬೇಧ-ಭಾವ  ಕಿಂಚಿತ್ತು ತೋರದೆ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಎಲ್ಲರಿಗೂ ಸ್ವಾಗತಿಸಿ ಸಹಿಷ್ಣತಾ ಭಾವದ ಕೋಟೆಯಾಗಿ ಹೃದಯಾಭಿಮಾನದ ಅನನ್ಯ ಭಕ್ತಿಯಿಂದ ವೈಭವಯುತವಾಗಿ ಮಡಿಯುಡಿಯಿಂದ ಹೆಜ್ಜೆಮೇಳಗಳೊಂದಿಗೆ ವಿಜೃಂಭಣೆಯಿಂದ  ನಡೆಯುತ್ತಾ ತನ್ನ ಇತಿಹಾಸವನ್ನು ಸಾರುತ್ತಿದೆ. ದಿ: ೨೩ ಖತಲ್ ರಾತ್ರಿ ದಿ:೨೪ ಶಹದತ್ (ಕರ್ಬಲಾ) ದೇವರು ಹೊಳೆಗೆ ಹೋಗುವುದು, ದಿ:೨೬ ಜಿಯಾರತ್ ದಿ: ೦೨-೧೧-೨೦೧೫ ರಂದು ಹತ್ತುದಿನದ ವಿಶೇಷವಾಗಿ ಜಿಯಾರತ್ ಆಚರಿಸಲಾಗುತ್ತದೆ ಒಟ್ಟಿನಲ್ಲಿ   ದಿನಾಂಕ: ೧೪-೧೦-೨೦೧೫ ರಿಂದ ೦೨-೧೧-೨೦೧೫ ರವರಗೆ ನಡೆಯುವ ಈ ಮೊಹರಂ ಉತ್ಸವದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಬಕ್ತಾಧಿಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಡಾ. ಹುಸೇಬಾಷಾಸಾಬ್ ಮಕಾಂದಾರ ತಿಳಿಸಿದ್ದಾರೆ.

Please follow and like us:
error