You are here
Home > Koppal News > ಪತ್ರಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಹಾಗೂ ಡಿಕೆಶಿ ವಜಾಕ್ಕೆ ಆಗ್ರಹ

ಪತ್ರಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಹಾಗೂ ಡಿಕೆಶಿ ವಜಾಕ್ಕೆ ಆಗ್ರಹ

 ಪತ್ರಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಹಾಗೂ ಡಿಕೆಶಿ ವಜಾಕ್ಕೆ ಆಗ್ರಹಿಸಿ ಕೊಪ್ಪಳ ಮೀಡಿಯಾ ಕ್ಲಬ್‌ವತಿಯಿಂದ  ಇಂದು ರಾಜ್ಯಪಾಲರಿಗೆ  ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು. 
ಕಾಂಗ್ರೆಸ್ ಪಕ್ಷದ ವರಿಷ್ಠ ಹಾಗೂ ಇಂಧನ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ ವಿರುದ್ದ ಟಿವಿ೯ ಸುದ್ದಿ ವಾಹಿನಿ ಕುಟುಕು ಕಾರ್ಯಾಚರಣೆಗೆ ಮುಂದಾಗಿತ್ತು. ಅವರ ಇಲಾಖೆಯಲ್ಲಿ ಅನೇಕ ಅವ್ಯವಹಾರಗಳು ಅವ್ಯಾಹತವಾಗಿ  ನಡೆಯುತ್ತಿದೆ ಎಂಬ ಆರೋಪದ ಮೇಲೆ ಈ ಕಾರ‍್ಯಾಚರಣೆಯನ್ನು ನಡೆಸಲಾಗಿತ್ತು.  ಆದರೆ ಕುಟುಕು ಕಾರ್ಯಾಚರಣೆಗೆ ತೆರಳಿದ ಸುದ್ದಿಯವಾಹಿನಿಯ ಮೇಲೆ ಕಾನೂನಿಗೆ  ವಿರೋದವಾಗಿ ಹಲ್ಲೆ ಮಾಡಲಾಗಿದೆ. ಆದರಲ್ಲೂ ಮಹಿಳಾ ಪ್ರತಿನಿಧಿಯ ಮೇಲೂ ಹಲ್ಲೆ ಮಾಡಲಾಗಿದ್ದು ಅಸಭ್ಯವಾಗಿ ವರ್ತಿಸಲಾಗಿದೆ. ಕಾನೂನಿಗೆ ವಿರೋಧವಾಗಿ ಸಚಿವರು ತಮ್ಮ ಪ್ರಭಾವನ್ನು ಬಳಸಿಕೊಂಡು ಟಿವಿ೯ ವರದಿಗಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ.  ಇವೆಲ್ಲವೂ ಕಾನೂನಿನ ವಿರುದ್ದ ಹಾಗೂ ಸಚಿವರ ಪ್ರಭಾವವಾಗಿದ್ದು ಕೂಡಲೇ ಅವರ ಮೇಲೆ ದಾಖಲಿಸಲಾಗಿರುವ ಪ್ರಕರಣವನ್ನು ವಜಾಗೊಳಿಸಬೇಕು ಅಲ್ಲದೇ ಸಚಿವ ಡಿ.ಕೆ.ಶಿವಕುಮಾರರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ ಅಳವಂಡಿ, ವಿಠ್ಠಪ್ಪ ಗೋರಂಟ್ಲಿ, ಶರಣಪ್ಪ ಬಾಚಲಾಪೂರ, ದೇವು ನಾಗನೂರ, ಶ್ರೀಪಾದ ಆಯಾಚಿತ್, ಬಸವರಾಜ್ ಕರುಗಲ್, ಮೌನೇಶ ಬಡಿಗೇರ್, ಗಂಗಾಧರ್ ಬಂಡಿಹಾಳ, ಅಶೋಕ ಕುಮಾರ,ದತ್ತಪ್ಪ ಕಮ್ಮಾರ, ಸಿರಾಜ್ ಬಿಸರಳ್ಳಿ, ದೊಡ್ಡೇಶ ಯಲಿಗಾರ, ಶಿವರಾಜ್ ನುಗಡೋಣಿ,  ಸಮೀರ್ ಪಾಟೀಲ್, ಮಾರುತಿ, ಶಂಕರ ಕೊಪ್ಪದ,  ಮಂಜುನಾಥ ಶಿರಸಂಗಿ, ಬಸವರಾಜ ಮರಡೂರ, ಭರ

ತ್ ಕಂದಕೂರ,ಪರಮೇಶ ರಡ್ಡಿ, ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Top