ಜಾತ್ರೆ ನಿಮಿತ್ತ ಮುಂಗೈ ಕುಸ್ತಿ

ಕೊಪ್ಪಳ: ಗಂಗಾವತಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮೇ.೨೮ ರಂದು ನಡೆಯಲಿರುವ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ನಿಮಿತ್ತ ಮುಂಗೈ ಕುಸ್ತಿ ಆಟ ಆಯೋಜಿಸಲಾಗಿದೆ. 
ಗ್ರಾಮದಲ್ಲಿ ಮೇ.೨೮ ರಂದು ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ಮುಂಗೈ ಕುಸ್ತಿ ಆಟ ನಡೆಯಲಿದೆ. ಸಂಜೆ ಸುಮಾರು ೫ಕ್ಕೆ ದೇವಿ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ. ಉತ್ಸವ ಮೆರವಣಿಗೆಯಲ್ಲಿ ಡೊಳ್ಳು, ಭಜನೆ ಸೇರಿದಂತೆ ನಾನಾ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಜಾತ್ರೆ ನಿಮಿತ್ತ ಮೇ.೨೪ ರಂದು ದೇವಿ ಮೂರ್ತಿ ಪಟ್ಟಕ್ಕೆ ಕೂಡಿಸುವುದು, ಶೋಭಾಯಾತ್ರೆ, ಕುಂಕುಮಾರ್ಚನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಜಾತ್ರೆಗೆ ಗ್ರಾಮದ ಸುತ್ತಲಿನ ಭಕ್ತರು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು. ಮುಂಗೈ ಕುಸ್ತಿ ಆಟದಲ್ಲಿ ಆಸಕ್ತ ಪಟುಗಳು ಭಾಗವಹಿಸಬೇಕು ಎಂದು ದೇವಿ ಜಾತ್ರೆ ಮಹೋತ್ಸವ ಸಮಿತಿ ಮನವಿ ಮಾಡಿದೆ.  
    

Leave a Reply