೨೬ರಂದು ವಿದ್ಯಾ ವಿಕಾಸ ಶಾಲೆಯ ೨೨ನೇ ವಾಷಿಕೋತ್ಸವ

ಕೊಪ್ಪಳ,ಜ,೨೧: ಭಾಗ್ಯನಗರದ ವಿದ್ಯಾ ವಿಕಾಸ ಪ್ರೌಢ ಶಾಲೆಯ ೨೨ನೇ ವಾರ್ಷಿಕೋತ್ಸವ ಇದೇ  ೨೬ ಸೋಮವಾರ ರಂದು ಸಂಜೆ ೫ಕ್ಕೆ ಜರುಗಲಿದೆ ಸಮಾರಂಭದ ಉದ್ಘಾಟಕರಾಗಿ ಸಂಸದ ಸಂಗಣ್ಣ ಕರಡಿ ಆಗಮಿಸುವರು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು.
     ವಿಧಾನ ಪರಿಷತ್ ಸದಸ್ಯೆ ಹಾಲಪ್ಪ ಆಚಾರ್, ಲೇಬಗೇರಾ ಕ್ಷೇತ್ರದ ಜಿ.ಪಂ.ಸದಸ್ಯೆ ವನಿತಾ ಗಡಾದ, ಮಾಜಿ ಜಿ.ಪಂ.ಸದಸ್ಯ ಹೆಚ್.ಎಲ್.ಹಿರೇಗೌಡ್ರ, ಭಾಗ್ಯನಗರ ತಾ.ಪಂ ಸದಸ್ಯರುಗಳಾದ ದಾನಪ್ಪ ಕವಲೂರ್, ಶ್ರೀನಿವಾಸ್ ಹ್ಯಾಟಿ, ಭಾಗ್ಯನಗರ ಗ್ರಾ.ಪಂ.ಅಧ್ಯಕ್ಷ ಹೊನ್ನೂರುಸಾಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ಯಾಮಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ್, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಿಮಠ ಮುತಾಂದವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರೆಂದು ಮುಖ್ಯೋಪಾಧ್ಯಾಯ ವಾದಿರಾಜ್ ದೇಸಾಯಿ ತಿಳಿಸಿದ್ದಾರೆ.

Related posts

Leave a Comment