ಶಾಸಕರಿಗೆ ಸನ್ಮಾನ.

ಕೊಪ್ಪಳ-೧೬, ನಗರದ ಪ್ರವಾಸಿಮಂದಿರದಲ್ಲಿ ಕೊಪ್ಪಳನಗರ ಆಟೋ ಚಾಲಕರ ಸಂಘದ ನೂತನ ಕಾರ್ಯಕಾರಣಿ ಅಧ್ಯಕ್ಷರು, ಸದಸ್ಯರು ಕೊಪ್ಪಳ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರಿಗೆ ಸನ್ಮಾನಿಸಿ ಕೆಲವು ಬೇಡಿಕೆಗಳನ್ನು ಸಲ್ಲಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಆಟೋ ಚಾಲಕ ಸಂಘದ ಕಟ್ಟಡಕ್ಕೆ ನಿವೇಶನ ನೀಡಿ ತಮ್ಮ ಅನುದಾನದಲ್ಲಿ ನಿರ್ಮಾಣ
ಮಾಡಿಕೊಡಲು ಭರವಸೆ ನೀಡಿದರು. ನಗರದ ಎಲ್ಲಾ ಆಟೋ ಚಾಲಕರಿಗೆ ಆಶ್ರಯ ಯೋಜನೆಯಡಿಯಲ್ಲಿ
ನಿವೇಶನಗಳನ್ನು ನೀಡಿ ಆಟೋ ಚಾಲಕರ ಕಾಲೋನಿ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನಮಾಡಿ
ನನ್ನ ಅಧಿಕಾರದ ಅವದಿಯಲ್ಲಿ ನಿವೇಶನ ಒದಗಿಸುವೇನೆಂದ ವಾಗ್ದಾನ ಮಾಡಿದರು.

Please follow and like us:
error