ನನ್ನ ವಜಾ ಅಸಿಂಧು: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

ಕರ್ನಾಟಕ ರಕ್ಷಣಾ ವೇದಿಕೆ ಆಂತರಿಕ ಭಿನ್ನಮತ 
ಮೈಸೂರು, ಡಿ.13: ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರ ಬೆಂಬಲ ನನಗಿದೆ. ಸಂಘಟನೆಯ ಕಾರ್ಯದರ್ಶಿ ಜಯದೇವ ಪ್ರಸನ್ನ ಮಾನಸಿಕ ರೋಗಿ. ಆದ್ದರಿಂದಲೇ ಈ ಹೇಳಿಕೆ ನೀಡಿದ್ದಾರೆ. ಆತನ ಹೇಳಿಕೆ ಅಸಿಂಧು ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತೀರುಗೇಟು ನೀಡಿದ್ದಾರೆ.
ಕರವೇ ಆಂತರಿಕ ಭಿನ್ನಮತ ಈಗ ಬೀದಿಗೆ ಬಿದ್ದಿದೆ. ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರ ವಿರುದ್ಧ, ಸಂಘಟನೆಯ ಕಾರ್ಯದರ್ಶಿಯಾಗಿ ರುವ ಕೋಲಾರ ಮೂಲದ ಜಯದೇವ ಪ್ರಸನ್ನ ತಿರುಗಿ ಬಿದ್ದಿದ್ದು, ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರಸನ್ನ, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿ ಸಂಘಟನೆ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿರುವುದಾಗಿ ಹೇಳಿಕೆ ನೀಡಿದ್ದರು.
ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ನಾರಾಯಣಗೌಡ, ಏಕಾಂಗಿಯಾಗಿ ಪತ್ರಿಕಾಗೋಷ್ಠಿ ನಡೆಸಿರುವ ಜಯದೇವ ಪ್ರಸನ್ನ ತನ್ನ ಪರ ಸಂಘಟನೆಯ ಯಾವೊಬ್ಬ ಪದಾಧಿಕಾ ರಿಯೂ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಇಂಥ ಹೇಳಿಕೆ ನೀಡುವ ಮೂಲಕ ತಾನೊಬ್ಬ ಮಾನಸಿಕ ರೋಗಿ ಎಂಬುದನ್ನು ಅವರೇ ಪ್ರದರ್ಶಿ ಸಿದ್ದಾರೆ ಎಂದು ತಿರುಗೇಟು ನೀಡಿದರು.
ಕನ್ನಡ ನಾಡು ನುಡಿಯ ಪರವಾದ ಧೋರಣೆ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುವುದೇ ಕರವೇ ಮುಖ್ಯ ಗುರಿ. ಆದ್ದರಿಂದ ಜಯದೇವ ಪ್ರಸನ್ನ ಮಾಡಿರುವ ಆರೋಪ ಶುದ್ಧ ಸುಳ್ಳು. ಬದಲಿಗೆ ಜಯದೇವ ವಿರುದ್ಧವೇ ಸಂಘಟನೆ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಆದ್ದರಿಂದ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲು ತೀರ್ಮಾನಿ ಸುತ್ತಿದ್ದೇವು. ಅಷ್ಟರಲ್ಲಿ ಗೊಂದಲ ಮೂಡಿಸಲು ಇಂಥ ಹೇಳಿಕೆ ನೀಡಿದ್ದಾರೆ ಎಂದು ನಾರಾಯಣ ಗೌಡ ಹರಿಹಾಯ್ದರು.
ಮೈಸೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಕರವೇ ಸಂಘಟನೆ ಪದಾಧಿಕಾರಿಗಳ ತುರ್ತು ಸಭೆ ನಡೆಸಿದ ನಾರಾಯಣ ಗೌಡ, ಉದ್ಧಟತನದ ಹೇಳಿಕೆ ನೀಡಿರುವ ಜಯದೇವ ಪ್ರಸನ್ನರನ್ನು ಸಂಘಟನೆ ಯಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದಾರೆ. ಜತೆಗೆ ಮುಂಬರುವ ದಿನಗಳಲ್ಲಿ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳವ ವೇಳೆ ಅವರ ಪೂರ್ವಾಪರ ವಿಚಾರಿಸಿಕೊಂಡು ಸೇರಿಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಎರಡನೆ ಬಾರಿ ಅಪಸ್ವರ: ಈ ಹಿಂದೆ ಕರವೇ ಅಧ್ಯಕ್ಷ ನಾರಾಯುಣಗೌಡರ ವಿರುದ್ಧ ಪ್ರಮೀಣ್ ಶೆಟ್ಟಿ ಸಿಡಿದೆದ್ದು ಕರವೇ ಎರಡು ವಿಭಾಗವಾಗಿತ್ತು. ಈಗ ಮತ್ತೆ ಕರವೇ ಇಬ್ಭಾಗದತ್ತ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ
Please follow and like us:
error