ದೇವದಾಸಿ ಪದ್ಧತಿ : ಮಾಹಿತಿದಾರರಿಗೆ ಬಹುಮಾನ

 ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಜಾರಿಗೊಳಿಸುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ, ಅಂತಹವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಅಲ್ಲದೆ, ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು.  ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಮನವಿ ಮಾಡಿಕೊಂಡಿದ್ದಾರೆ.
  ದೇವದಾಸಿ ಪದ್ದತಿ ಒಂದು ಅನಿಷ್ಟ ಪದ್ಧತಿಯಾಗಿದ್ದು, ಜಿಲ್ಲೆಯಲ್ಲಿ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ತೀವ್ರ ಪ್ರಯತ್ನ ಕೈಗೊಳ್ಳಲಾಗಿದ್ದು, ಆದಾಗ್ಯೂ ಜಿಲ್ಲೆಯಲ್ಲಿ ಇನ್ನೂ ಈ ಪದ್ಧತಿ ನಡೆಯುತ್ತಿರುವ ಬಗ್ಗೆ ಅನುಮಾನಗಳಿವೆ.  ದೇವದಾಸಿ ಪದ್ಧತಿ ಈ ಆಧುನಿಕ ಕಾಲದಲ್ಲಿಯೂ ಜಾರಿಯಲ್ಲಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ.  ದೇವದಾಸಿ ಪದ್ಧತಿಯಿಂದ ಹೆಣ್ಣು ಮಕ್ಕಳ ಜೀವನ ದಾರುಣ ಸ್ಥಿತಿಗೆ ತಲುಪುವುದಲ್ಲದೆ, ಇವರನ್ನು ಸಮಾಜದ ಕೆಲವು ಜನ ದುರುಪಯೋಗ ಪಡಿಸಿಕೊಳ್ಳುವುದರಿಂದ, ಇದರ ನಿರ್ಮೂಲನೆಗೆ ಎಲ್ಲರೂ ಕಟಿಬದ್ಧರಾಗಬೇಕಿದೆ.  ಇಂತಹ ಅನಿಷ್ಟ ಪದ್ಧತಿಯನ್ನು ತಡೆಗಟ್ಟುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.  ಕರ್ನಾಟಕ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಅನ್ವಯ ದೇವದಾಸಿ ಪದ್ಧತಿಯಲ್ಲಿ ತೊಡಗುವ ಹಾಗೂ ಸಹಕಾರ ನೀಡುವವರಿಗೆ ೫ ವರ್ಷಗಳವರೆಗಿನ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.  ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತವಿರುವ ಬಗ್ಗೆ ಅನುಮಾನಗಳಿವೆ.  ಈ ನಿಟ್ಟಿನಲ್ಲಿ ದೇವದಾಸಿ ಪದ್ದತಿಗೆ ಹೆಣ್ಣು ಮಕ್ಕಳನ್ನು ಬಳಸುವುದು ಅಥವಾ ದೇವದಾಸಿ ಪದ್ಧತಿ ಜಾರಿಗೊಳಿಸುವುದು ಕಂಡುಬಂದರೆ, ಸಾರ್ವಜನಿಕರು ಮಾಹಿತಿ ನೀಡುವಂತೆ ವಿನಂತಿಸಿಕೊಳ್ಳಲಾಗಿದೆ.   ಈ ಕುರಿತು ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.  ಅಲ್ಲದೆ ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು.  ಮಾಹಿತಿಯನ್ನು, ಜಿಲ್ಲಾಡಳಿತ ೦೮೫೩೯-೨೨೦೮೪೪, ಜಿಲ್ಲಾ ಪಂಚಾಯತ್ ೦೮೫೩೯-೨೨೦೦೦೨, ಸಾಂತ್ವನ ಕೇಂದ್ರ ೧೦೯೧, ಮಕ್ಕಳ ಸಹಾಯವಾಣಿ ೧೦೯೮, ಪೊಲೀಸ್ ಕಂಟ್ರೋಲ್ ೧೦೦, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ೦೮೫೩೯-೨೨೨೭೦೩, ಯೂನಿಸೆಫ್ ಕಛೇರಿ ೦೮೫೩೯-೨೨೫೦೦೬, ದೇವದಾಸಿ ಪುನರ್ವಸತಿ ಯೋಜನೆ ೦೮೫೩೯-೨೨೦೧೪೪ ಈ ಪೈಕಿ ಯಾವುದೇ ಒಂದು ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು  ಮನವಿ ಮಾಡಿಕೊಂಡಿದ್ದಾರೆ.
Please follow and like us:
error