ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಾಜರಾಗಲು ಸೂಚನೆ.

ಕೊಪ್ಪಳ, ಸೆ.೧೧ (ಕ
ವಾ)  ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ ಜಿಲ್ಲಾ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿರುವ ಶಿಕ್ಷಕರು ಸೆ.೧೪ ರಂದು ಬೆಳಿಗ್ಗೆ
೧೦.೩೦ ಗಂಟೆಗೆ ಗಂಗಾವತಿಯ ಸಿ.ಬಿ.ಎಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿರುವ ಕೊಪ್ಪಳ
ಜಿಲ್ಲಾ ಮಟ್ಟದ ಹಾಗೂ ಗಂಗಾವತಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ
ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಶಿಕ್ಷಕರ
ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಈ ಹಿಂದೆ ಸೆ.೦೫ ರಂದು
ಏರ್ಪಡಿಸಲಾಗಿತ್ತು. ಆದರೆ, ಅಂದು ಕರ್ನಾಟಕ ಬಂದ್ ಘೋಷಣೆಯಾದ ಹಿನ್ನೆಲೆಯಲ್ಲಿ
ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಈಗ ಅದೇ ಕಾರ್ಯಕ್ರಮವನ್ನು ಸೆ.೧೪ ರಂದು
ಬೆಳಿಗ್ಗೆ ೧೦.೩೦ ಗಂಟೆಗೆ ಗಂಗಾವತಿಯ ಸಿ.ಬಿ.ಎಸ್ ಕಲ್ಯಾಣ ಮಂಟಪದಲ್ಲಿ
ಏರ್ಪಡಿಸಲಾಗಿದೆ.  
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿರುವ
ಶಿಕ್ಷಕರ ವಿವರ ಇಂತಿದೆ.  ಪ್ರಾಥಮಿಕ ಶಾಲಾ ವಿಭಾಗದಲ್ಲಿ ದೇವರಡ್ಡಿ, ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆ, ಅಲ್ಲಾನಗರ, ತಾ.ಕೊಪ್ಪಳ, ಗುದ್ನೆಪ್ಪ, ಸ.ಹಿ.ಪ್ರಾ.ಶಾಲೆ,
ಕೊಟ್ನೆಕಲ್, ತಾ.ಗಂಗಾವತಿ, ಶಂಕರಪ್ಪ ರಾಠೋಡ್, ಸ.ಹಿ.ಪ್ರಾ.ಶಾಲೆ, ಮುದಟಗಿ,
ತಾ.ಕುಷ್ಟಗಿ, ಲಿಂಗಪ್ಪ ಹಡಪದ, ಸ.ಹಿ.ಪ್ರಾ.ಶಾಲೆ, ಲಿಂಗನಬಂಡಿ, ತಾ.ಯಲಬುರ್ಗಾ ಇವರು
ಆಯ್ಕೆಗೊಂಡಿದ್ದಾರೆ. 
    ಪ್ರೌಢ ಶಾಲಾ ವಿಭಾಗದಲ್ಲಿ ನಾಗನಗೌಡ ಪಾಟೀಲ್, ಸರ್ಕಾರಿ
ಪದವಿ ಪೂರ್ವ ಕಾಲೇಜು, ಕಾತರಕಿ ಗುಡ್ಲಾನೂರು, ತಾ.ಕೊಪ್ಪಳ, ಅರುಣಾ ಎಂ.ಮಣ್ಣೂರು,
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗಂಗಾವತಿ, ಬಸವರಾಜ ಮಡಿವಾಳರ, ಸರ್ಕಾರಿ ಪದವಿ
ಪೂರ್ವ ಕಾಲೇಜು, ಕುಷ್ಟಗಿ, ಸಿದ್ಧನಗೌಡ ಪಾಟೀಲ, ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ,
ಕುಕನೂರು, ತಾ.ಯಲಬುರ್ಗಾ ಇವರು ಆಯ್ಕೆಗೊಂಡಿದ್ದು, ಪ್ರಶಸ್ತಿಗೆ ಆಯ್ಕೆಯಾಗಿರುವ
ಶಿಕ್ಷಕರುಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ
ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿದ್ಯುತ್ ಮಗ್ಗ ಸ್ಥಾಪನೆಗೆ ಸಹಾಯಧನ ಅರ್ಜಿ ಆಹ್ವಾನ.
ಕೊಪ್ಪಳ,
ಸೆ.೧೧ (ಕ ವಾ) ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ವಿಶೇಷ ಘಟಕ
ಯೋಜನೆ, ಗಿರಿಜನ ಉಪಯೋಜನೆಯಡಿ ಕೈಮಗ್ಗ ನೇಕಾರರು, ವಿದ್ಯುತ್ ಮಗ್ಗ ನೇಕಾರಿಕೆಗೆ
ಪರಿವರ್ತನೆಗೊಳ್ಳಲು ಹಾಗೂ ಕೂಲಿ ವಿದ್ಯುತ್ ಮಗ್ಗ ನೇಕಾರರು ಸ್ವಂತ ವಿದ್ಯುತ್ ಮಗ್ಗ ಘಟಕ
ಸ್ಥಾಪಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಶೇಕಡಾ ೯೦ ರಷ್ಟು
ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಈ
ಯೋಜನೆಯಡಿ ಘಟಕ ವೆಚ್ಚ, ಜಕಾರ್ಡ್ ಅಳವಡಿಸುವುದು ಸೇರಿದಂತೆ ಒಟ್ಟು ೩.೦೦ ಲಕ್ಷ
ರೂ.ಗಳವರೆಗೆ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲಿಚ್ಛಿಸುವ ಫಲಾನುಭವಿಯು ಘಟಕ
ವೆಚ್ಚದ ಶೇಕಡಾ ೧೦ ರಷ್ಟು ವಂತಿಕೆ ಭರಿಸಲು ಫಲಾನುಭವಿ ಆರ್ಥಿಕವಾಗಿ ಸಮರ್ಥರಾಗಿರಬೇಕು
ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಮಂಜೂರಾತಿ ಪಡೆಯಬೇಕು. ವಿದ್ಯುತ್ ಘಟಕ
ಸ್ಥಾಪನೆಗೆ ಸ್ವಂತ ಅಥವಾ ಲೀಸ್ ಮೇಲೆ ಪಡೆದ ಜಾಗೆಯನ್ನು ಹೊಂದಿರಬೇಕು. ಅಲ್ಲದೆ, ಅದಕ್ಕೆ
ಅವಶ್ಯಕ ಪರವಾನಿಗೆ ಮತ್ತು ವಿದ್ಯುತ್ ಮಂಜೂರಾತಿ ಪಡೆದಿರಬೇಕು.
     ಅರ್ಜಿ
ಸಲ್ಲಿಸಲು ಸೆ.೨೬ ಕೊನೆ ದಿನಾಂಕವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ
ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ, ದೂರವಾಣಿ ಸಂ : ೦೮೫೩೯-೨೩೦೦೬೯
ಕ್ಕೆ ಸಂಪರ್ಕಿಸಬಹುದು.

Please follow and like us:
error