ನಾಳೆ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಉದ್ಘಾಟನೆ

ಕುಷ್ಟಗಿ: ತಾಲೂಕಿನ ತಾವರಗೇರಾ ಗ್ರಾಮದ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜ.೨೮ ರಂದು ಬೆಳಗ್ಗೆ ೧೦ ಗಂಟೆಗೆ ಇಲ್ಲಿನ ಶ್ರೀವೀರಭದ್ರೇಶ್ವರ ದೇವಸ್ಥಾನದ ರಂಗ ಮಂದಿರದಲ್ಲಿ ಉಚಿತ ಕಣ್ಣಿನ  ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಗ್ರಾಮದ ಗಣ್ಯರಾದ ಶೇಖರಗೌಡ ಪೊಲೀಸ ಪಾಟೀಲ್ ಉದ್ಘಾಟಿಸುವರು. ಮುದೇನೂರ ಚಂದ್ರಶೇಖರ ಮಠದ ಅಭಿನವ ಚಂದ್ರಶೇಖರ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸುವರು. 
              ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಆಯೋಜಕ ಬಸವರಾಜ ಪಲ್ಲೇದ ಕಾರ್ಯಕ್ರಮದ ಅಧ್ಯಕ್ಷೆತೆವಹಿಸುವರು. ಹುಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ|| ವೆಂಕಟರಾಮ ಕಟ್ಟಿ, ಎಸ್.ಕೆ ದೇಸಾಯಿ ವ್ಯವಸ್ಥಾಪಕರು ಜಿಲ್ಲಾ ಅಂಧತ್ವ ನಿವಾರಣಾ ಸಂಘ, ತಾಲೂಕು ಪಂಚಾಯ್ತಿ ಸದಸ್ಯೆ ಸುವರ್ಣಮ್ಮ ಕುಂಬಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ಬಿಳೇಗುಡ್ಡ, ಜಿ. ಪಂ. ಮಾಜಿ ಸದಸ್ಯ ಶೇಖರಗೌಡ ಮಾಲಿಪಾಟೀಲ್,  ಗ್ರಾಮದ ಹಿರಿಯ ಗುರುಮೂರ್ತಿಸ್ವಾಮಿ ಹಿರೇಮಠ, ಗ್ರಾಮ ಪಂಚಾಯ್ತಿ ಸದಸ್ಯರಾದ ಮಲ್ಲಪ್ಪ ಜುಮಲಾಪೂರ, ಚಂದ್ರಶೇಖರ ನಾಲತ್ವಾಡ, ತಾಲೂಕು ಆರೋಗ್ಯ ಅಧಿಕಾರಿ ಡಾ|| ಆನಂದ ಗೋಟೂರ, ಡಾ|| ಚಂದ್ರಕಾಂತ ಮಂತಿ ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ತಾವರಗೇರಾ, ಕರಿಡೆಪ್ಪ ನಾಲತ್ವಾಡ ಗ್ರಾದ ಹಿರಿಯ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ವೆಂಕಟೇಶ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶಿಬಿರದ ವ್ಯವಸ್ಥಾಪಕ ಬಸವರಾಜ ಪಲ್ಲೇದ  ತಿಳಿಸಿದ್ದಾರೆ.

Leave a Reply