ಗಂಗಾವತಿ : ಉದ್ಯೋಗಖಾತ್ರಿಯಡಿ ಸಮರ್ಪಕ ಕೆಲಸ ನೀಡಲು ಸೂಚನೆ

 : ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ವರ್ಷಕ್ಕೆ ಕನಿಷ್ಟ ೧೦೦ ದಿನಗಳ ಕೂಲಿ ಕೆಲಸವನ್ನು ಸಮರ್ಪಕವಾಗಿ ನೀಡುವ ಕುರಿತು ಗಂಗಾವತಿ ತಾಲೂಕಿನ ಎಲ್ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
  ಗಂಗಾವತಿಯ ತಾಲೂಕ ಪಂಚಾಯತ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಏರ್ಪಡಿಸಲಾದ ಕಾರ್ಯಾಗಾರದಲ್ಲಿ ಗ್ರಾ.ಪಂ.ಅಧ್ಯಕ್ಷರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಕಾಯಕ ಬಂಧುಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಐಇಸಿ ಚಟುವಟಿಕೆಯ ಯೋಜನೆ ಕುರಿತು ಸೂಕ್ತ ತರಬೇತಿ ನೀಡಲಾಯಿತು.  ಕಾಯಕ ಬಂಧುಗಳು ಗ್ರಾ.ಪಂ. ಸಹಯೋಗದೊಂದಿಗೆ ಕೂಲಿಕಾರರಿಗೆ ಈ ಯೋಜನೆಯ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡಿ ನಮೂನೆ-೬ ನ್ನು ಅವರಿಂದ ಪಡೆದು ೧ ಆರ್ಥಿಕ ವರ್ಷದಲ್ಲಿ ೧೦೦ ದಿನ ಕೂಲಿಯನ್ನು ನೀಡುವ ವಿವರವಾದ ಮಾಹಿತಿಯನ್ನು ಸಹಾಯಕ ನಿರ್ದೇಶಕ ಮಹಾಬಳೇಶ್ವರ ವಡ್ಡಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿ ಚಂದ್ರಹಾಸ ಗೋಕರ್ಣಕರ ಅವರು ನೀಡಿದರು.  ಅಧ್ಯಕ್ಷತೆಯನ್ನು ತಾಲೂಕ ಯೋಜನಾಧಿಕಾರಿ ತಿಪ್ಪೇರುದ್ರಸ್ವಾಮಿ ಅವರು ವಹಿಸಿದ್ದರು. ತಾಲೂಕ ಐಇಸಿ ಸಂಯೋಜಕ ಕೃಷ್ಣನಾಯಕ ಹಾಗೂ ಎಂಜಿಎನ್‌ಆರ್‌ಇಜಿಎ ಸಿಬ್ಬಂದಿಗಳು ನಿರ್ವಹಿಸಿದರು. ಕಾರ್ಯಾಗಾರದಲ್ಲಿ ಗಂಗಾವತಿ ತಾಲೂಕಿನ ೩೮ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾಯಕ ಬಂಧುಗಳು, ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು. 

Leave a Reply