ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಗ್ರಾ.ಪಂ.ನೌಕಕರಿಂದ ಅನಿರ್ದಿಷ್ಟಾವಧಿ ಧರಣಿ

ನೌಕರರ ಸೇವೆ ಹಿರಿತನ ಕಸಿದುಕೊಂಡಿರುವ ಸರಕಾರದ ತಪ್ಪು ನಿರ್ಧಾರ ಹಾಗೂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಮಂಗಳವಾರದಿಂದ ತಾ.ಪಂ. ಕಛೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿಯನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ತಾಲೂಕ ಸಮತಿ ವತಿಯಿಂದ ಪ್ರಾರಂಭಿಸಲಾಗಿದೆ.

 ಕರ್ನಾಟಕ ರಾಜ್ಯದಲ್ಲಿ ೧೯೯೪ ರಿಂದ ನೇಮಕಗೊಂಡ ನೌಕರರನ್ನು ಜಿಲ್ಲಾ ಪಂಚಾಯತ ಪೂರ್ವನಾಮೋದನೆ ಪಡೆಯದೇ ಇರುವುದರಿಂದ ಸುಪ್ರೀಂ ಕೋರ್ಟಿನ ಆದೇಶದನ್ವಯ ಅಕ್ರಮಗೊಂಡ ನೇಮಕಾತಿಯೆಂದು ಸರ್ಕಾರ ಆದೇಶ ಹೊರಡಿಸಿದ್ದು ಇದರಿಂದಾಗಿ ರಾಜ್ಯದಲ್ಲಿ ೪೦ ಸಾವಿರದಷ್ಟು ನೌಕರರು ಅತಂತ್ರ ಸ್ಥಿತಿಯಲ್ಲಿ ಕೆಲಸ ರ್ನಿಹಿಸುವ ಸ್ಥಿತಿ ಬಂದಿತ್ತು. ಇದನ್ನು ನಮ್ಮ ರಾಜ್ಯ ಸಂಘಟನೆಯ ನೇತೃತ್ವದಲ್ಲಿ ಹೋರಾಟವನ್ನು ನಡೆಸುವದರಿಂದ ಸರ್ಕಾರ ಅದನ್ನು ಪುನರ ಪರಿಶೀಲಿಸಿ ಹಿಂದೆ ನೀಡಿದ ಆದೇಶವನ್ನು ವಾಪಸ್ಸು ಪಡೆದು ಅನುಮೋದನೆ ನೀಡಲು ಆದೇಶವನ್ನು ಹೊರಡಿಸಿದ್ದನ್ನು ನಾವು ಸ್ವಾಗತಿಸುತ್ತೇವೆ.
ಆದರೆ ಇದೇ ಸಂದರ್ಭದಲ್ಲಿ ಸರ್ಕಾರವು ಒಂದು ತಪ್ಪು ನಿರ್ಧಾರವನ್ನು ಮಾಡಿ, ಅನುಮೋದನೆ ಪಡೆದ ದಿನಾಂಕದಿಂದ ಸೇವೆಗೆ ಪರಿಗಣಿಸಲು ಸೂಚಿಸುವುದರಿಂದ ನೌಕರರ ಸೇವಾ ಹಿರಿತನವನ್ನು ಕಸಿದು ಕೊಂಡತಾಗಿದೆ. ಈಗಾಗಲೇ ೨೦ ವರ್ಷ ಸೇವೆ ಸಲ್ಲಿಸಿದ ನೌಕರರು ತಮ್ಮ ಸೇವೆಯನ್ನು ಕಳೆದುಕೊಳ್ಳುವದರಿಂದ ಅವರಿಗೆ ಬಡ್ತಿ ಅಥವಾ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಇದನ್ನು ಪುನರ್ ಪರಿಶೀಲಿಸಿ ಸೇವೆಗೆ ಸೇರಿದ ದಿನಾಂಕದಿಂದ ಪರಿಗಣಿಸಲು ನಾವು ಒತ್ತಾಯಿಸುತ್ತೇವೆ.
ಈಗಾಗಲೇ ಸರ್ಕಾರ ಕನಿಷ್ಠ ವೇತನ ಆದೇಶ ನೀಡಿದರು.  ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಕನಿಷ್ಠ ವೇತನ ನೀಡುತ್ತಿಲ್ಲ. ಈಗ ಅತ್ಯಂತ ಕಡಿಮೆ ಸಂಬಳ ನೀಡುತ್ತಿದ್ದು ಅದು ಕೂಡ ಪ್ರತಿ ತಿಂಗಳು ದೊರೆಯುತ್ತಿಲ್ಲ ೧೮ ರಿಂದ ೨೦ ತಿಂಗಳವರೆಗೆ ತಾಲೂಕಿನ ಕೆಲವೊಂದು ಗ್ರಾಮ ಪಂಚಾಯತಗಳಲ್ಲಿ ವೇತನ ನೀಡಿಲ್ಲ. ಸರ್ಕಾರ ನೀಡುತ್ತಿರುವ ಶಾಸನಬದ್ಧ  ಅನುದಾನ ವೇತನಕ್ಕಾಗಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಹೀಗಾಗಿ ನೌಕರರು ವರ್ಷವಿಡಿ ವೇತನವಿಲ್ಲದೇ ಪರದಾಡುವಂತಾಗಿದೆ. ಆದರಿಂದ ಎಮ್.ಎಸ್. ಸ್ವಾಮಿ ವರದಿಯಂತೆ ವೇತನಕ್ಕಾಗಿ ಸರ್ಕಾರ ೪೦೭ ಕೋಟಿ ರೂಪಾಯಿ ಅನುದಾನ ನೀಡಲು ಒತ್ತಾಯಿಸುತ್ತೇವೆ.
ಇವತ್ತಿನವರೆಗೂ ಗ್ರಾಮ ಪಂಚಾಯತಗಳಲ್ಲಿ ಗಣಕ ಯಂತ್ರ ಸಹಾಯಕರ ಹುದ್ದೆ ಸೃಷ್ಠಿಯಾಗಿರಲಿಲ್ಲ. ಈಗ ಸೃಷ್ಠಿಯಾಗಿದ್ದು ಈ ಹಿಂದೆ ಕೆಲಸ ನಿರ್ವಹಿಸಿದ  ಗಣಕಯಂತ್ರ ಸಹಾಯಕರನ್ನು ೩ ವರ್ಷ ಸೇವೆ ಸಲ್ಲಿಸಿದವರನ್ನು ಈಗ ಸೃಷ್ಠಿಯಾದ ಹೊಸ ಹುದ್ದೆಗೆ ನೇಮಕ ಮಾಡಿಕೊಳ್ಳಲು ಒತ್ತಾಯಿಸುತ್ತೇವೆ. 
ಎಮ್.ಎಸ್. ಸ್ವಾಮಿ ವರದಿಯಂತೆ ೧೫ ಶಿಪಾರಸ್ಸುಗಳನ್ನು ಸರ್ಕಾರ ಜಾರಿಗೆ ಮಾಡಲು ಮುಂದಾಗಬೇಕೆಂದು ಒತ್ತಾಯಿಸಿ ತಾಲೂಕ ಪಂಚಾಯತ ಮುಂದೆ ದಿನಾಂಕ ೨೪-೦೨-೨೦೧೫ ರಿಂದ ಅನಿರ್ಧಿಷ್ಟ ಹೋರಾಟವನ್ನು ಮಾಡಲು ತಿರ್ಮಾನಿಸಲಾಗಿದೆ.
ಕಾರಣ ತಾವುಗಳು ನಮ್ಮ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ವಿನಯಪೂರ್ವಕವಾಗಿ ಒತ್ತಾಯಿಸುತ್ತೇವೆ.
ಬೇಡಿಕೆಗಳು :
೧) ಎಲ್ಲಾ ಗ್ರಾಮ ಪಂಚಾಯತ ನೌಕರರಿಗೆ ಪ್ರತಿ ತಿಂಗಳು ವೇತನವನ್ನು ಕಡ್ಡಾಯವಾಗಿ ಪಾವತಿಸಬೇಕು.
೨) ಸರ್ಕಾರದ ಆದೇಶ ೧೦-೦೯-೨೦೧೪  ರಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯಿಂದ ಇನ್ನು ಬಾಕಿ ಇರುವ ಎಲ್ಲಾ ನೌಕರರ ಪ್ರಸ್ತಾವನೆಯನ್ನು ತರಿಸಿಕೊಂಡು ಎಲ್ಲರಿಗೂ ಏಕಕಾಲಕ್ಕೆ ಅನುಮೋದನೆ ನೀಡಬೇಕು.
೩) ಸರ್ಕಾರ ಹೊರಡಿಸಿದ ೧೦-೦೯-೨೦೧೪ ಆದೇಶವನ್ನು ತಿದ್ದುಪಡಿ ಮಾಡಿ ಸೇವೆ ಸೇರಿದ ದಿನಾಂಕವನ್ನು ಪರಿಗಣಿಸಲು ನಿರ್ದೇಶನ ನೀಡಬೇಕು.
೪) ೧೦-೦೯-೨೦೧೪ ರ ಸರ್ಕಾರದ ಆದೇಶದಂತೆ ೩ ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಗಣಕಯಂತ್ರ ಸಹಾಯಕರನ್ನು ಕ್ಲರ್ಕ್/ಕಂ. ಗಣಕಯಂತ್ರ ಸಹಾಯಕರೆಂದು ಸೆಕ್ಷನ್ ೧೧೩ ರ ಪ್ರಕಾರ ನೇಮಕಮಾಡಿಕೊಂಡು ಅನುಮೋದನೆ ನೀಡಬೇಕು.
೫) ಎಲ್ಲಾ ನೌಕರರಿಗೂ ಭವಿಷ್ಯ ನಿಧಿ ಯೋಜನೆ ಜಾರಿಗೆ ತರಬೇಕು.
೬) ಸರ್ಕಾರ ನಿಗದಿ ಪಡಿಸಿದ ಕನಿಷ್ಟ ವೇತನ ಹಾಗೂ ತುಟ್ಟಿ ಭತ್ಯೆ ನೀಡಬೇಕು.
೭) ಗ್ರಾಮ ಪಂಚಾಯತಿಗಳಲ್ಲಿ ನೌಕರರ ವೇತನ ಖಾತೆ ಪ್ರಾರಂಭವಾಗಬೇಕು.
೮) ಎಸ್.ಎಸ್.ಎಲ್.ಸಿ. ಪಾಸಾದ ವಾಟರಮನ್‌ಗೆ ಅಥವಾ ಇನ್ನಿತರ ಸಿಬ್ಬಂದಿಗೆ ವಸೂಲಿ ಸಹಾಯಕ ಹುದ್ದೆಗೆ ಭಡ್ತಿ ನೀಡಬೇಕು.
೯) ಹಲಗೇರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯು ಸಿಬ್ಬಂದಿ ವೇತನ ವಿಳಂಬ ಮಾಡಿದ್ದು ಕೂಡಲೇ ಸಿಬ್ಬಂದಿ ವೇತನ ಪಾವತಿಯಾಗಬೇಕು.
೧೦) ಗುಳದಳ್ಳಿ ಪರಿಚಾರಕನನ್ನು ಕೆಲಸದಿಂದ ಮುಕ್ತಿಗೊಳಿಸಿ ಪಿಂಚಣಿ ಸೌಲಭ್ಯ ಓದಗಿಸಬೇಕು.
೧೧) ಬಗನಾಳ ಪರಿಚಾರಕನನ್ನು ಕೆಲಸದಿಂದ ಮುಕ್ತಿಗೊಳಿಸಿ ಪಿಂಚಣಿ ಸೌಲಭ್ಯ ಓದಗಿಸಬೇಕು.
ಈ ಎಲ್ಲಾ ಬೇಡಿಕೆಗಳನ್ನು ಶೀಘ್ರವೇ ಪರಿಹರಿಸುವಂತೆ ಸಂಘದ ತಾಲೂಕ ಅಧ್ಯಕ್ಷ ಗೋವಿಂದಪ್ಪ ಪೂಜಾರ, ಕಾರ್ಯದರ್ಶಿ ದೇವಪ್ಪ ಓಜನಹಳ್ಳಿ, ಜಿಲ್ಲಾ ಸಂಚಾಲಕ ಗೌಸಸಾಬ ನದಾಫ್ ಒತ್ತಾಯಿಸಿದ್ದಾರೆ. ಧರಣಿ ವಿವಿಧ ಗ್ರಾ.ಪಂ.ಗಳ ನೌಕರರ ಪಾಲ್ಗೊಂಡಿದ್ದರು.
Please follow and like us:
error