ಮಾನವೀಯತೆ ಇಲ್ಲದಿದ್ದರೆ ಬದುಕು ವ್ಯರ್ಥ ಮುಸ್ತಫಾ ಕಮಾಲ್.

ಕೊಪ್ಪಳ,ಡಿ.೨೦ ಆ ಸೃಷ್ಟಿಕರ್ತನು ಪ್ರತಿಯೊಬ್ಬ ಮನುಷ್ಯನಲ್ಲಿ ಮಾನವೀಯತೆ ಗುಣ ಆ ಮನುಷ್ಯನಲ್ಲಿ ಸೇರಿಸಿ ಜೀವನ ಸಾಗಿಸಲು ಹುಟ್ಟಿಸಿರುತ್ತಾನೆ ಆದರೆ ಆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಏನೇಲ್ಲ ಮಾಡಬಾರದನ್ನು ಕೆಲಸಗಳನ್ನು ಮಾಡಿ ತನ್ನ ಜೀವನ ವ್ಯರ್ಥ ಮಾಡಿಕೊಳ್ಳುತ್ತಾನೆ ಇಂತಹ ವ್ಯಕ್ತಿಗೆ ಮೊಕ್ಷ ದೊರೆಯುವುದಿಲ್ಲ ಮನಷ್ಯನ ಜೀವನದಲ್ಲಿ ಮಾನವೀಯತೆ ಇಲ್ಲದಿಂದರೆ ಬದುಕೆ ವ್ಯರ್ಥ ಎಂದು ಕೊಪ್ಪಳ ಜಿಲ್ಲಾ ವಕ್ಪ್ ಸಲಹಾ ಮಂಡಳಿಯ ಅಧ್ಯಕ್ಷ ಹಾಫಿಜ್ ಮೌಲಾನ ಮಹ್ಮದ್ ಮುಸ್ತಫಾ ಪಾಷಾ ಕಮಾಲ್ ಖಾದ್ರಿ-ವ-ತಸ್ಕೀನಿ ಹೇಳಿದರು.
ಅವರು ಶನಿವಾರ ರಾತ್ರಿ ನಗರದ ಗಡಿಯಾರ ಕಂಬದ ಬಳಿ ಜವಾಹರ ರಸ್ತೆಯಲ್ಲಿ ಹಜ್ರತ್ ಖ್ವಾಜಾ ಗರೀಬ್‌ನವಾಜ್ ಸಮಾಜಸೇವಾ ಯುವಕಸಂಘ (ರಿ) ದಿಡ್ಡಿಕೇರಾ, ಕೊಪ್ಪಳ ಇವರ ವತಿಯಿಂದ ಏರ್ಪಡಿಸಿದ ಜಷ್ನೆ ಈದ್ ಮೀಲಾದೆ ಮುಸ್ತಫಾ (ಸ) ಪೈಗಂಬರ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಬಹಿರಂಗ ಸಾರ್ವಜನಿಕರ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ಪ್ರವಾದಿ ಮಹ್ಮದ್ ಪೈಗಂಬರವರು ಇಡೀ ಮಾನವ ಕುಲಕ್ಕೆ ಸಂದೇಶ ನಿರ್ವಾಹಕರಾಗಿದ್ದರು ಸೃಷ್ಠಿಕರ್ತನ ಸಂದೇಶ ಜನತೆಗೆ ತಲುಪಿಸುವಂತಹ ಕೆಲಸ ಮಾಡುವುದರ ಜೊತೆಗೆ ಆ ಸೃಷ್ಠಿಕರ್ತನ ಆರಾಧನೆಗೆ ಜನರಲ್ಲಿ ತಿಳುವಳಿಕೆ ನೀಡಿದರು. ಮನುಷ್ಯ ಮಾನವೀತೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಬೇಧ-ಭಾವ ಮಾಡದೆ ಸಹೋದರತ್ವ ಭಾವನೆ ಬೆಳೆಸಿಕೊಂಡು ಜೀವನ ಸಾಗಿಸಬೇಕು ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದ ಅವರು ಪ್ರವಾದಿ ಪೈಗಂಬರವರ ಜಯಂತಿ ದಿನದಂದು ಎಲ್ಲಾರೊಂದಿಗೆ ಕೂಡಿಕೊಂಡು ಸೌಹಾರ್ದತೆಯುತವಾಗಿ ಶಾಂತಿಯುತವಾಗಿ ಆಚರಿಸಬೇಕು ಏಕೆಂದರೆ ಅವರು ಶಾಂತಿಯ ಸಂದೇಶ ನೀಡಿದ್ದಾರೆ. ಅವರ ಆದರ್ಶ ಮತ್ತು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಯಾಯಿಗಳಾದ ನಾವು ಜೀವನ ಸಾಗಿಸುವ ಈ ದೇಶದ ಮಣ್ಣಿನ ಋಣ ತೀರಿಸುವಂತಹ ಕೆಲಸ ಮಾಡಿ ದೇಶದ ಉತ್ತಮ ಪ್ರಜೆಗಳಾಗಬೇಕು ದೇಶ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುವುದರ ಬಗ್ಗೆ ಚಿಂತಿಸುವ ಅದನ್ನೆ
ಪ್ರವಾದಿ ಮಹ್ಮದ್ ಪೈಗಂಬರವರ ಅಭಿಲಾಶೆಯಾಗಿತು. ನೀನು ಜೀವಿಸುವ ಭೂಮಿಯ ಋಣ ತೀರಿಸುವಂತಹ
ಕೆಲಸ ಎಂದು  ಕೊಪ್ಪಳ ಜಿಲ್ಲಾ ವಕ್ಪ್ ಸಲಹಾ ಮಂಡಳಿಯ ಅಧ್ಯಕ್ಷ ಹಾಫಿಜ್ ಮೌಲಾನ ಮಹ್ಮದ್
ಮುಸ್ತಫಾ ಪಾಷಾ ಕಮಾಲ್ ಖಾದ್ರಿ-ವ-ತಸ್ಕೀನಿ ಹೇಳಿದರು.  ಸಮಾರಂಭದ ಸಾನಿಧ್ಯವನ್ನು
ಜಾನಶೀನ್ ವ ಗದ್ದಿನಶೀನೆ ತಸ್ಕೀನುಲ್ ಮಷಾಯಿಕ್, ಹಜ್ರತ್ ಮಹ್ಮದ್ ನೂರುಲ್ಲಾ ತಹಸೀನ್
ಖಾದ್ರಿ, ತಸ್ಕೀನಿರವರು ವಹಿಸಿದ್ದರು. ಖಲೀಫಾ ಹಜ್ರತ ತಸ್ಕೀನುಲ್ ಮಷಾಯಿಖ್ ಮುಹಮ್ಮದ್
ನಜೀರ್ ಅಹ್ಮದ್ ಖಾದ್ರಿ ತಸ್ಕೀನಿ ಮತ್ತು ಮೌಲ್ವಿ ಹುಸೇನ್ ಖಾದ್ರಿ ರವರು ಪ್ರವಾದಿ
ಮಹ್ಮದ್ ಪೈಗಂಬರವರ ಜೀವನ ಚರಿತ್ರೆ ಕುರಿತು ವಿಶೇಷ ಪ್ರವಚನ ನೀಡಿದರು.  ಮೌಲಾನಾ
ಅಸದುಲ್ಲಾ ಖಾದ್ರಿ ಮತ್ತು ನಾಸೀರ್ ಅಹ್ಮದ್ ಖಾದ್ರಿ, ಮೊಹಿಯುದ್ದೀನ ಖಾದ್ರಿ ಮತ್ತಿತರರು
ವೇಧಿಕೆ ಮೇಲೆ ಉಪಸ್ಥಿತರಿದ್ದು ಮುಖ್ಯ ಅತಿಥಿಗಳಾಗಿ ಕಾಂಗ್ರೇಸ್ ಮುಖಂಡರಾದ ಕೆ.ಎಂ
ಸೈಯದ್ ಅಹ್ಮಜದ್ ಪಟೇಲ್ ಇಬ್ರಾಹಿಂ ಅಡೆವಾಲೆ ಯುವ ನಾಯಕ ಕೆ. ವಾಸುದೇವು ಜೆಡಿಎಸ್
ಜಿಲ್ಲಾಧ್ಯಕ್ಷ ಪ್ರದೀಪ ಗೌಡ ಮಾಲಿಪಾಟೀಲ್ ಜೆಡಿಎಸ್ ನಾಯಕ್ ವೀರೇಶ ಮಹಾಂತಯ್ಯನಮಠ
ನಗರಸಭೆ ಸದಸ್ಯ ಖಾಜಾವಲಿ ಬನ್ನಿಕೊಪ್ಪ ಎಂ.ಎ ಸಾದಿಕ್‌ಶೇಖ್ ಮಾನವೀ ಪಾಶಾ ಮಕ್ಬುಲ್ ಸಾಬ್
ಮನಿಯಾರ ದಿಡ್ಡೀಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Related posts

Leave a Comment