ಮಂಗಳೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕೊಪ್ಪಳ : ಯಲಬುರ್ಗಾ ತಾಲುಕಿನ ಮಂಗಳೂರು ಗ್ರಾಮದಲ್ಲಿ ದಿನಾಂಕ ೧೯-೦೧-೨೦೧೫ ರಂದು ವಂದೇಮಾತರಂ ಯುವ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ (ರಿ) ಕದ್ರಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 
ಸುಜಾತ ಬಂಡ್ರಕಲ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರಗಡ್ಡಿ ಮಠದ ಶ್ರೀ. ಮ.ನಿ.ಪ್ರ. ಶಾಂತಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಜಿ. ಪಂ ಸದಸ್ಯ ಅಶೋಕ ತೋಟದ ವಹಿಸಿದ್ದರು, ಮೂಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತ ಸದಸ್ಯೆ ಶ್ರೀಮತಿ ಸುಮಂಗಲಾ ಅಂಬಳೆಪ್ಪಾ ಉಪ್ಪಾರ, ಗ್ರಾಮ ಪಂಚಾಯತಿ ಅಧ್ಯಕ್ಷಿಣಿ ಶ್ರೀಮತಿ ಶಾಂತಾ ಬಸವರಾಜ ಗುಡಸಲಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೋರನೂರ ಕೊಟ್ರಪ್ಪ, ಉಪನ್ಯಾಸಕರಾದ ಆರ್.ಎಸ್. ಸರಗಣಾಚಾರ, ಶರಣಪ್ಪ ಉಮಚಗಿ, ಎಮ್.ಎನ್. ಹುಕುಮ್ಮನಾಳಮಠ, ಮಂಗಳೇಶ್ವರ ಯುವಸಂಘದ ಅಧ್ಯಕ್ಷ ಮಂಗಳೇಶ ಯತ್ನಟ್ಟಿ, ವಂದೇಮಾತರಂ ಯುವ ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ರಾಕೇಶ ಕಾಂಬ್ಳೆಕರ್, ಶಿವಕುಮಾರ ಹಳ್ಳಿಗುಡಿ, ಗ್ರಾಮ ಪಂಚಾಯತ ಭಿವೃದ್ಧಿ ಅಧಿಕಾರಿ ಅನಂತರಾವ್ ದೇಸಾಯಿ, ಸಾಹಿತಿ ನೀಲಪ್ಪ ವಕ್ರ ಮುಂತಾದವರು ಉಪಸ್ಥಿತರಿದ್ದರು. 
ಸುಜಾತ ಬಂಡ್ರಕಲ್ ಅವರ ಸುಗಮ ಸಂಗೀತ ನೆರೆದಿದ್ದ ಜನಮನ ತಣಿಸಿತು. ವಿಜಯ ಕದ್ರಳ್ಳಿ ನಿರೂಪಿಸಿದರು. ಮಾಬುಸಾಬ್ ಗೋಡೆಕರ್ ವಂದಿಸಿದರು. 

Leave a Reply