ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು – ವೈಜನಾಥ ಪಾಟೀಲ

 ಉದ್ಯೋಗ ಮತ್ತು ಶಿಕ್ಷಣದಲ್ಲ್ಲಿ ಮೀಸಲಾತಿ ಅನ್ವಯವಾಗುವ ಕಲಮ್ ೩೭೧ ಜಾರಿಗೆ ಬಂದಿದ್ದರೂ ಸರ್ಕಾರದ ನಿರ್ಲಕ್ಷದಿಂದ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲವೆಂದು ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ ವಿಷಾಧ ವ್ಯಕ್ತಪಡಿಸಿದರು. ಅವರು ಗವಿಮಠದಲ್ಲಿ ನಡೆದ ೫೩ ನೆ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಮಾತನಾಡಿ  ಈ ಭಾಗದಲ್ಲಿ ಸರ್ಕಾರಿ  ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ೨೦ ಸಾವಿರಕ್ಕಿಂತಲೂ ಖಾಲಿ ಹುದ್ಧೆಗಳಿದ್ದೂ ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಬೇಕು. ಸರ್ಕಾರಿ  ಅನುದಾನಿತ ಸಂಸ್ಥೆಗಳಲ್ಲಿ  ಹಳೆಯ ದಿನಾಂಕಗಳ  ನೋಟಿಫಿಕೇಷನ್ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇದು ನಿಲ್ಲಬೇಕು. ಇದರಿಂದಾಗಿ ಈ ಭಾಗದ ಜನರಿಗೆ ಅನ್ಯಾಯವಾಗುತ್ತದೆ.  ಕೃಷ್ಣಾ  ಬಿ ಸ್ಕಿಮ್ ನಲ್ಲಿ  ಪ್ರತಿಶತ ೫೦ ರಷ್ಟು  ನೀರು ನಮಗೆ ಸಿಗಬೇಕು. ಆಲಮಟ್ಟ ಆಣೆಕಟ್ಟ ಎತ್ತರ ಹೆಚ್ಚಿಸಬೇಕು.   ನ್ಯಾಯಮೂರ್ತಿ  ಬಚಾವತ್ ಆಯೋಗದಂತೆ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದರೂ  ಆ ಅನ್ಯಾಯವನ್ನು ಸರಿಪಡಿಸಿಲ್ಲ.  ಈ ಎಲ್ಲ ಅವ್ಯವಸ್ಥೆ ಕಂಡು ಸುಮ್ಮನೆ ಇರಲಿಕ್ಕಾಗುವದಿಲ್ಲ . ಮತ್ತೊಂದು ಹೋರಾಟ ಮಾಡುವ ಅನಿವಾರ್ಯತೆ ಇದೆಯೆಂದರು. ಅಧ್ಯಕ್ಷತೆಯನ್ನು ಬೆಂಗಳೂರಿನ ಪತ್ರಕರ್ತ  ಗಂಗಾಧರ ಕುಷ್ಟಗಿ ಹಾಗೂ ಸಾನಿಧ್ಯವನ್ನು  ಹೊಸಳ್ಳಿಯ ಶ್ರೀ.ಮ.ನಿ.ಪ್ರ. ಬೂದೀಶ್ವರ ಮಹಾಸ್ವಾಮಿಗಳು ವಹಿಸಿ ಮಾತನಡಿದರು.  ಶ್ರೀ ಮಲ್ಲಿಕಾರ್ಜುನ ವಿ. ನಿಡಗುಂದಿ ಸಾ.ಓಜನಳ್ಳಿ  ಹಾಗೂ ಗವಿಮಠದ ಸಂಗೀತ  ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.   ಗುರುನಗೌಡ್ರ ಪಾಟೀಲ ಮತ್ತು ಮಕ್ಕಳಿಂದ ಕಾರ್ಯಕ್ರiದ ಭಕ್ತಿಸೇವೆ ಜರುಗಿತು.     

Leave a Reply