fbpx

ಕಸಾಪ ವಿವಿಧ ದತ್ತಿನಿಧಿ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಮಾ.: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2014 ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

     ಮಲ್ಲಿಕಾ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಅತ್ಯುತ್ತಮ ಲೇಖಕಿಯರ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. ಹಿರಿಯ-ಕಿರಿಯ ಲೇಖಕಿಯರು ಎಂಬ ವ್ಯತ್ಯಾಸವಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಸ್ವತಂತ್ರ ಅಥವಾ ಅನುವಾದಿತ ಕೃತಿಯಾದರೂ ಆಗಬಹುದು,


     ಅಂತರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಮಹಿಳೆಯರ ಅತ್ಯುತ್ತಮ ಕೃತಿಗೆ ರೂ.500/- ಬಹುಮಾನವನ್ನು ನೀಡಲಾಗುವುದು, ಸ್ವತಂತ್ರ ಕೃತಿಯಾಗಿರಬೇಕು, ಅನುವಾದ ಕೃತಿಗಳನ್ನಾಗಲಿ, ಪುನರ್ ಮುದ್ರಣಗೊಂಡ ಕೃತಿಗಳನ್ನಾಗಲೀ ಪರಿಗಣಿಸುವುದಿಲ್ಲ.


     ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಲೇಖಕಿ ಒಬ್ಬರ ಮಹತ್ವದ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.


     ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಅತ್ಯುತ್ತಮ ಮಹಿಳಾ ಸಾಹಿತ್ಯದ (ಮಹಿಳೆಯರನ್ನು ಕುರಿತು ಅಥವಾ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚಿತವಾದ) ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.


     ನೀಲಗಂಗಾ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಮಹಿಳೆಯರ ಪ್ರಬಂಧ, ಕವನ, ಕಾವ್ಯ ಮತ್ತು ಸಮಕಾಲಿನ ಮೌಲಿಕ ವಿಚಾರವುಳ್ಳ ಗ್ರಂಥಕ್ಕೆ ರೂ.500/- ಬಹುಮಾನ ನೀಡಲಾಗುವುದು.


     ಕೆ.ಎಸ್.ಭಾರತಿ ರಾಜಾರಾಮ್ ಮಧ್ಯಸ್ಥ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಮಹಿಳೆಯರ ಅತ್ಯುತ್ತಮ ಕಾದಂಬರಿಗೆ ರೂ.500/- ಬಹುಮಾನ ನೀಡಲಾಗುವುದು. ಕೃತಿ ಸ್ವತಂತ್ರವಾಗಿರಬೇಕು, ಅನುವಾದವಾಗಿರಬಾರದು.


     ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಉದಯೋನ್ಮುಖ ಮಹಿಳಾ ಬರಹಗಾರರ ಅತ್ಯುತ್ತಮ ಕೃತಿಗೆ ರೂ.250/- ಬಹುಮಾನ ನೀಡಲಾಗುವುದು.


     ಗೌರಮ್ಮ ಹಾರ್ನಹಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿ : 2014 ರಲ್ಲಿ ಲೇಖಕಿಯರಿಂದ ರಚಿತವಾದ ಯಾವುದೇ ಪ್ರಕಾರದ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು.


     ಎಚ್.ಕರಿಯಣ್ಣ ದತ್ತಿ ಪ್ರಶಸ್ತಿ : 2014 ರಲ್ಲಿ ಲೇಖಕಿಯರಿಂದ ರಚಿತವಾಗಿರುವ ಮಕ್ಕಳ ಪುಸ್ತಕಕ್ಕೆ ರೂ.500/- ಬಹುಮಾನ ನೀಡಲಾಗುವುದು. ಈ ಎಲ್ಲಾ ದತ್ತಿ ಸ್ಪರ್ಧೆಗೆ ಮಹಿಳೆಯರು ಬರೆದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು.

     ಡಾ|| ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಶ್ರೇಷ್ಠ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು.

     ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಹರಿದಾಸ ಸಾಹಿತ್ಯ ಕುರಿತ ಕೃತಿಗೆ ರೂ.250/- ಬಹುಮಾನ ನೀಡಲಾಗುವುದು.


     ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ : (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ-ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) 2014 ರಲ್ಲಿ ಪ್ರಕಟವಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರು ಬರೆದಿರುವ ಅತ್ಯುತ್ತಮ ಮಕ್ಕಳ ಪುಸ್ತಕಕ್ಕೆ ರೂ.250/- ಬಹುಮಾನ ನೀಡಲಾಗುವುದು. (ಪುಸ್ತಕ 15 ವರ್ಷ ವಯಸ್ಸಿನ ಒಳಗಿರುವ ಮಕ್ಕಳು ಓದುವಂತಹ ಕೃತಿ ಯಾಗಿರಬೇಕು).


     ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಉದಯೋನ್ಮುಖ ಬರಹಗಾರರ ಅತ್ಯುತ್ತಮ ಚೊಚ್ಚಲ ಪದ್ಯಕೃತಿ ಒಂದಕ್ಕೆ ರೂ.500/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರು ಬೇಕಾದರು ಭಾಗವಹಿಸಬಹುದು.


     ರತ್ನಾಕರವರ್ಣಿ-ಮುದ್ದಣ್ಣ-ಅನಾಮಿಕ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಅತ್ಯುತ್ತಮ ಗದ್ಯಕೃತಿ ಒಂದಕ್ಕೆ ಹಾಗೂ ಅತ್ಯುತ್ತಮ ಪದ್ಯಕೃತಿ ಒಂದಕ್ಕೆ ತಲಾ 500/-ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.


     ಪಿ.ಶಾಂತಿಲಾಲ್ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಜೈನ ಸಾಹಿತ್ಯ ಕುರಿತ ಯಾವುದೇ ಪ್ರಕಾರದ ಕನ್ನಡ ಪುಸ್ತಕಕ್ಕೆ ರೂ.500/- ಬಹುಮಾನ ನೀಡಲಾಗುವುದು.


     ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾಗಿರುವ ಅತ್ಯುತ್ತಮವಾದ ಜಾನಪದ ಸಾಹಿತ್ಯ ಕೃತಿ ಒಂದಕ್ಕೆ ರೂ.500/- ಬಹುಮಾನ ನೀಡಲಾಗುವುದು.


     ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಪ್ರಾಚೀನ ಸಂಪಾದಿತ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.


     ಕುಂಬಾಸ್ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಕನ್ನಡ ಹಾಸ್ಯ ಸಾಹಿತ್ಯ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. (ಹಾಸ್ಯ ಸಾಹಿತ್ಯದ ಬಗ್ಗೆ ಬರೆದಿರುವ ಪುಸ್ತಕ, ಲೇಖನ, ಚುಟುಕು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ಬರೆದು ಕಳುಹಿಸುವುದು).


     ಪ್ರೊ|| ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಅತ್ಯುತ್ತಮ ಚೊಚ್ಚಲ ಕವನ ಸಂಕಲನಕ್ಕೆ ರೂ.500/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.


     ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ರೂ.1000/- ಬಹುಮಾನ ನೀಡಲಾಗುವುದು. ಉದಯೋನ್ಮುಖ ಬರಹಗಾರರು, ಬರಹಗಾರ್ತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.


     ಸಿಸು ಸಂಗಮೇಶ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.


      ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಉತ್ತಮ ಸಾಹಿತ್ಯ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. (ರಾಯಚೂರು ಜಿಲ್ಲೆಯ ಬರಹಗಾರರಿಗೆ ಮಾತ್ರ ಸೀಮಿತ).


     ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನ ಕೃತಿಗೆ ರೂ.500/- ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾರುಬೇಕಾದರು ಭಾಗವಹಿಸಬಹುದು.


     ಡಾ|| ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಉತ್ತಮ ಕವನ ಸಂಕಲನ ಒಂದಕ್ಕೆ ರೂ.1000/- ಬಹುಮಾನ ನೀಡಲಾಗುವುದು ಬೆಳಗಾವಿ ಜಿಲ್ಲೆಯ ಬರಹಗಾರರಿಗೆ ಮಾತ್ರ ಅವಕಾಶ.


     ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಯಾವುದೇ ಜೈನ ಸಾಹಿತ್ಯ ಧರ್ಮಕ್ಕೆ ಸಂಬಂಧಪಟ್ಟ ಕೃತಿಗೆ ಬಹುಮಾನ, ಬಹುಮಾನದ ಮೊತ್ತ ರೂ. 7,500/.


     ವಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ದತ್ತಿ ಪ್ರಶಸ್ತಿ (ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ ಲೇಖಕ ಲೇಖಕಿಯರಿಗೆ ಮಾತ್ರ ಅವಕಾಶ) : 2014 ರಲ್ಲಿ ಪ್ರಕಟವಾದ ಸಣ್ಣಕತೆ, ಕಾದಂಬರಿ, ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ ಹೀಗೆ ಐದು ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು. ಒಂದೊಂದು ಪ್ರಕಾರದ ಪುಸ್ತಕಕ್ಕೆ ತಲಾ ರೂ.500/- ಬಹುಮಾನ ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಾಗಲಕೋಟೆಯ ಜಿಲ್ಲಾಧ್ಯಕ್ಷರು ನಡೆಸುತ್ತಾರೆ.


     ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ :  2014 ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿ ಕೃತಿಗೆ ರೂ.5,000/- ಬಹುಮಾನ ನೀಡಲಾಗುವುದು, 2014 ರಲ್ಲಿ ಪ್ರಕಟವಾದ ಸಣ್ಣಕಥಾ ಸಂಕಲನಗಳನ್ನು ಸ್ಪರ್ಧೆಗೆ ಕಳುಹಿಸಬಹುದು ರೂ.3,000/- ಬಹುಮಾನ ನೀಡಲಾಗುವುದು, 2014 ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ ರೂ.2,000/- ಬಹುಮಾನ ನೀಡಲಾಗುವುದು, 2014 ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳು, ವೈಚಾರಿಕ ಲೇಖನಗಳು ಕೃತಿಗೆ ರೂ.2000/- ಬಹುಮಾನ ನೀಡಲಾಗುವುದು,


     ಡಿ.ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ಯಾವುದೇ ಪ್ರಕಾರದ ಹಾಸ್ಯ ಸಾಹಿತ್ಯ ಕೃತಿಗೆ ರೂ.5000/- ಬಹುಮಾನ ನೀಡಲಾಗುವುದು.


     ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ನಾಟಕ ಪ್ರಕಾರಕ್ಕೆ ರೂ.1000/- ಬಹುಮಾನ ನೀಡಲಾಗುವುದು.


     ಡಾ.ಎ.ಎಸ್.ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ಪ್ರಶಸ್ತಿ : ಮನೋವಿಜ್ಞಾನ ಸಾಹಿತ್ಯ ಕೃತಿಗೆ ರೂ.5,000/- ಬಹುಮಾನ ನೀಡಲಾಗುವುದು.


     ನಾ.ಕು. ಗಣೇಶ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಥಮ ಕವನ ಸಂಕಲನಕ್ಕೆ ರೂ.1,000/- ಬಹುಮಾನ ನೀಡಲಾಗುವುದು.


      ಬೀಳಗಿಯಲ್ಲಿ ನಡೆದ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸವಿನೆನಪು ದತ್ತಿ ಪ್ರಶಸ್ತಿ : ಬೀಳಗಿ ತಾಲ್ಲೂಕಿನ ಲೇಖಕರಿಂದ 2014 ರಲ್ಲಿ ಪ್ರಕಟವಾದ  ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರದ ಕೃತಿಗಳನ್ನು ಆಹ್ವಾನಿಸಿ, ಕೇವಲ ಒಂದು ಅತ್ಯುತ್ತಮ ಕೃತಿಗೆ ರೂ.5,000/- ಗಳ ಬಹುಮಾನ ನೀಡಲಾಗುವುದು.


     ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ : 2014 ರಲ್ಲಿ ಪ್ರಕಟವಾದ ವಿಜ್ಞಾನ ತಂತ್ರಜ್ಞಾನ ಪ್ರಕಾರಗಳಾದ ವೈದ್ಯಕೀಯ ಶಾಸ್ತ್ರ, ಯಂತ್ರಶಾಸ್ತ್ರ, ವಿದ್ಯನ್ಮಾನ ಶಾಸ್ತ್ರದಲ್ಲಿ ಕನ್ನಡದಲ್ಲಿ ರಚಿತವಾದ ಆ ವರ್ಷದ ಶ್ರೇಷ್ಠ ಕೃತಿಗಳಿಗೆ ರೂ.10,000/- ಗಳ ಬಹುಮಾನ ನೀಡಲಾಗುವುದು.


     ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸ ರಾವ್ ದತ್ತಿನಿಧಿ : 2014ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕ್ಷೇತ್ರದ ಗದ್ಯ ಪ್ರಕಾರದ ಕಥೆಗೆ ಸಂಬಂಧಿಸಿದಂತೆ ಕನಿಷ್ಠ 65 ಪುಟಗಳುಳ್ಳ ಪುಸ್ತಕಕ್ಕೆ ರೂ.2000/- ಬಹುಮಾನ ನೀಡಲಾಗುವುದು. 


     ಪಳಕಳ ಸೀತಾರಾಮಭಟ್ಟ ದತ್ತಿನಿಧಿ : 2014ರಲ್ಲಿ ಪ್ರಕಟವಾದ ಮಕ್ಕಳ ಸಾಹಿತ್ಯ ಕೃತಿಗೆ ರೂ.2000/- ಬಹುಮಾನ ನೀಡಲಾಗುವುದು. 


     ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 560018 ಇವರಿಗೆ ಏ.30 ರೊಳಗಾಗಿ ತಲುಪಿಸಬೇಕು, ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ, ಬಹುಮಾನದ ಬಗ್ಗೆ ಪರಿಷತ್ತ ನೇಮಿಸುವ ತೀರ್ಪುಗಾರರು ನೀಡುವ ಶಿಫಾರಸ್ಸನ್ನು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ, ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ, ಒಂದಕ್ಕಿಂತ ಹೆಚ್ಚು ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ, ಪಿ.ಎಚ್.ಡಿ. ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ, ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ಸೂಚಿಸಬೇಕು.  ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸಬೇಕು.


     ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: ಸ್ವ-ವಿಳಾಸದ ಸ್ಟಾಂಪ್ ಹಚ್ಚಿದ ಲಕೊಟೆ ಇಟ್ಟು ಪತ್ರ ಬರೆಯಬಹುದಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ

Please follow and like us:
error

Leave a Reply

error: Content is protected !!