ಗ್ರಾಹಕರು ತಮ್ಮ ಹಕ್ಕಿನ ಬಗ್ಗೆ ತಿಳಿದುಕೊಳ್ಳುವದು ಅವಶ್ಯ – ಬಿ.ದಶರಥ.

ಕೊಪ್ಪಳ-15/ ಗ್ರಾಹಕರು ಅನೇಕ ರೀತಿಯಲ್ಲಿ ಇಂಧಿನ ಆಧುನಿಕ ಯುಗದಲ್ಲಿ ಮೋಸಹೋಗುತ್ತಿರುವದು ವಿಪರ್ಯಾಸವಾಗಿದೆ , ಆದ್ದರಿಂದ ಯಾವುದೇ ಗ್ರಾಹಕರು ಮೋಸಹೋಗದೆ ತಮ್ಮ ಹಕ್ಕಿನ ಬಗ್ಗೆ ತಿಳಿದುಕೊಳ್ಳುವದು ಅವಶ್ಯ ಇದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ  ಕೊಪ್ಪಳ ಇವರು ಹೇಳಿದರು.
ಅವರು ಸಮೀಪದ ವದಗನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳಿ, ದಕ್ಷಿಣ ಭಾರತಿ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ೨೦೧೫-೧೬ ನೇ ಸಾಲಿನ  ಏರ್ಪಡಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕುರಿತು ಕಾನೂನು ನೆರವು ಶಿಬಿರ ದ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ಗ್ರಾಹಕರು ಯಾವುದೇ ಪ್ರತಿಯೊಂದು ವಸ್ತುಗಳನ್ನು ಕೊಂಡಾಗಲು ಆ ವಸ್ತುವಿನ ಮೊತ್ತವನ್ನು ನೀಡಿದ ಬಿಲ್‌ನ್ನು ತಪ್ಪದೆ ತಗೆದುಕೊಳ್ಳಬೇಕು ಅಂದಾಗ ತಮಗೆ ಅನ್ಯಾಯವಾದಗ ನ್ಯಾಯ ಸಿಗಲು ಸಾಧ್ಯ ಎಂದ ಅವರು ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ಬಡವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ  ಉಚಿತವಾದ ಕಾನೂನು ಅನ್ನು ಅವರಿಗೆ ಕಲ್ಪಿಸಲಾಗಿದೆ ಎಂದರು.
ನಂತರ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದ ಎನ್‌ಎಸ್‌ಎಸ್ ಅಧಿಕಾರಿ ಬಸವರಾಜ ಎಸ್,ಎಂ ಮಾತನಾಡಿ ಹಳ್ಳಿಗರು ಕಾನೂನು ಬಗ್ಗೆ ತಿಳಿದುಕೊಳ್ಳಬೇಕು ಎಂದರು ಯಾವುದೇ ರೀತಿ ನೀವು ದೂರು ಕೊಡಲು ಹೋದಾಗ ಅಧಿಕಾರಿಗಳು ನಿರಾಕರಿಸಿದಾಗ ನೀವುಗಳು ಠಾಣೆಯ ಮುಂದೆ ಪೋಲಿಸ್ ದೂರು ಪೆಟ್ಟಿಗೆ ಎಂದು ಇರುತ್ತದೆ ಅದರಲ್ಲಿ ನಿಮ್ಮ ದೂರನ್ನು ಸಲ್ಲಿಸಬೇಕು ಅದರಿಂದ ನ್ಯಾಯ ಸಿಗಲು ಸಾಧ್ಯ ಎಂದರು.ಅಲ್ಲಿಯು ಕೂಡ ನಿಮಗೆ ದೂರು ನೀಡಲು ಸಾಧ್ಯವಾಗದೆ ಇದ್ದರೆ ನ್ಯಾಯಲಯದಲ್ಲಿಯು ಕೂಡ ದೂರ
ಪೆಟ್ಟಿಗೆ ಇದ್ದು ಅಲ್ಲಿ ನೀವು ದೂರು ಸಲ್ಲಿಸಿದರೆ ನ್ಯಾಯ ಸಿಗುತ್ತದೆ ಆದ್ದರಿಂದ
ಕಾನೂನು ನೆರವು ಶಿಬಿರದ ಉಪಯೋಗವನ್ನು ಸದಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕಿ ಉಷಾದೇವಿ ಹಿರಡಮಠ ವಹಿಸಿಕೊಂಡು ಮಾತನಾಡಿದರು .ಕಾಲೇಜಿನ ಪ್ರಧಾನ ಕಾರ್ಯಕರ್ಶಿ ಕೆ.ಎಸ್.ಕೊಡತಗೇರಿ ಜನಸಾಮನ್ಯರಿಗಾಗಿ ಕಾನೂನು ಎಂಬವದರ ಬಗ್ಗೆ ಉಪನ್ಯಾಸ ನೀಡಿದರು.ಅದೇ ರೀತಿ ಕಾಲೇಜಿನ ವಿದ್ಯಾರ್ಥಿ ರಾಜೇಂದ್ರ ಪ್ರಸಾದ ಗ್ರಾಹಕರ ರಕ್ಷಣಾ ವೇದಿಕೆ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ಬಸವರಾಜ ಅಳ್ಳೊಳ್ಳಿ,ವಿದ್ಯಾರ್ಥಿಗಳಾದ ಉಮೇಶ ಉಪ್ಪಾರ,ರಾಕೇಶ ಪಾನಘಂಟಿ,ಮಾಹಂತೇಶ ಭೀಮನಗೌಡ್ರ,ಗಂಗನಗೌಡ ಭರಮಗೌಡ್ರ,ಕುಮಾರಿ ಅಶ್ವಿನಿ ಜಾಧವ,ಪ್ರಿಯದರ್ಶನಿ ,ರೇಖಾ ನಿಲಪ್ಪಮವರ,ಪ್ರಭುಗೌಡ ಪಾಟೀಲ,ದ್ಯಾಮಣ್ಣ,ರವಿ ಸೇರಿದಂತೆ ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಹೆಚ್.ಎಂ, ಮಾಡಿದರು ಪ್ರಾರ್ಥನೆಯನ್ನು ಕುಮಾರಿ ಮಾಹಲಕ್ಷ್ಮೀ ಕುರಗೋಡ ಹಾಗೂ ಸಂಘಡಿಗರು ನೆರವೆರಿಸಿದರು,ಸ್ವಾಗತವನ್ನು ಮಂಜುನಾಥ ಅರಕೇರಿ ಮಾಡಿದರು,ವಂದಾನರ್ಪಣೆಯನ್ನು ಮಲ್ಲಿಕಾರ್ಜುನ ಬನ್ನಿಕೊಪ್ಪ ಮಾಡಿದರು.

Please follow and like us:
error