ಎರಡು ದಿನದ ರಾಷ್ಟ್ರೀಯ ಸಮ್ಮೇಳನ

:

ಕೊಪ್ಪಳದ ಗವಿಸಿದ್ದೇಶ್ವರ  ಆಯುರ್ವೇದ  ಕಾಲೇಜ್
ಸ್ನಾತಕೊತ್ತರ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಎರಡು ದಿನದ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ರಾಷ್ಟ್ರಮಟ್ಟದ ಆಯುರ್ವೇದಿಕ ಕಾಲೇಜಿನ ವೈದ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಅಂಡಾಶಯ ಗ್ರಂಥಿ ರೋಗದ  ಸಮಸ್ಯೆಯಿಂದ ಸಂತಾನ ಶಕ್ತಿ ಕ್ಷಿಣಿಸುವುದು, ಸ್ತ್ರೀ ರೋಗ ಸಂಬಂಧಿತ
ಸಮಸ್ಯೆಗಳ ಕುರಿತು  ಈ ವಿಚಾರ
ಸಂಕಿರಣ ಹಮ್ಮಿಕೊಳ್ಳಲಾಗಿದೆ.  ಈ ಸಂದರ್ಭದಲ್ಲಿ ವಿವಿಧ ವಿಭಾಗದ ನುರಿತತ ವೈದ್ಯರು ಸೆಮಿನಾರುಗಳಲ್ಲಿ ಭಾಗಹಿಸಿದ್ದಾರೆ.   ವೈದ್ಯರು ಸಾಮಾಜಿಕ ಕಾಳಜಿಯಿಂದ ಗ್ರಾಮೀಣ
ಪ್ರದೇಶದಲ್ಲಿಯೂ ಸೇವೆ ಸಲ್ಲಸಿದರೆ ಆಯುಷ್ ವಿಭಾಗಕ್ಕೆ   ನೆರವಾಗುತ್ತದೆ ಎಂದು  ಕಾರ್ಯಕ್ರಮ  ಉದ್ಘಾಟಿಸಿದ ಆಯುಷ್ ವಿಭಾಗದ ನಿರ್ದೇಶಕ
ವಿನಾಯಕ ಗೋಗಿ ಹೇಳಿದರು.  ಮೊದಲ ಬಾರಿಗೆ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿರುವ  ಈ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯುತ್ತಿದ್ದು
ವೈದ್ಯರ ಪ್ರಶಂಸೆಗೆ ಪಾತ್ರವಾಗಿದೆ. 

Leave a Reply