fbpx

ದೇಶದಲ್ಲಿರುವ ವಿದೇಶಿ ಗುಳ್ಳೆ ನರಿಗಳನ್ನು ಒಡಿಸಲು ಕ್ವಿಟ್ ಇಂಡಿಯಾ ಚಳುವಳಿ ಅಗತ್ಯ.

ಕೊಪ್ಪಳ- ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕಗಳು ಕಳೆದಿದ್ದರೂ ಇನ್ನೂ ಅಸಮಾನತೆ, ಭ್ರಷ್ಟಾಚಾರ, ಬಹಿಷ್ಕಾರ, ದೌರ್ಜನ್ಯ, ಶಿಕ್ಷಣದ ಅಸಮಾನತೆ ಇನ್ನೂ ದೇಶದಲ್ಲಿ ಜೀವಂತ ಇವೆ, ಇವನ್ನು ರಕ್ಷಸಿಕೊಂಡು ಬರುತ್ತಿರುವ ದೇಶದಲ್ಲಿರುವ ಗುಳ್ಳೆ ನರಿಗಳನ್ನು ಓಡಿಸಲು ಕ್ವಿಟ್ ಇಂಡಿಯಾ ಚಳುವಳಿ ಮಾದರಿ ಹೋರಾಟ ಅಗತ್ಯ ವೆಂದು ಎಸ್.ಎಫ್.ಐ ರಾಜ್ಯಕಾರ್ಯದರ್ಶಿ ಗುರುರಾಜ್ ದೇಸಾಯಿ ಹೇಳಿದರು.  ಕೊಪ್ಪಳದಲ್ಲಿ ಎಸ್.ಎಫ್.ಐ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಸವಿನೆನಪಿಗಾಗಿ ಅಸಮಾನತೆ ತೊಲಗಲಿ, ಸಮಾನತೆ ಉಳಿಯಲಿ ದುಂಡುಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ೩೭೧ (e) ಕಲಂ ಹೆಸರಿನಲ್ಲಿ ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ ಹೊರತು ಅದರಲ್ಲಿರುವ ದೋಷವನ್ನು ಸರಪಡಿಸುತ್ತಿಲ್ಲ. ರೈತರು ಬೆಳದಿರುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು ನಮ್ಮ ಪ್ರಧಾನಿ ಮೋದಿಯವರು ವಿದೇಶಗಳನ್ನು ಸುತ್ತಾಡಿದ ಪರೀಣಾಮ ಉನ್ನತ ಶಿಕ್ಷಣವನ್ನು ವಿದೇಶಕ್ಕೆ ಮಾರಲು ಹೊರಟಿದ್ದಾರೆ. ಡಬ್ಲ್ಯೂ.ಟಿ.ಒ ಒಪ್ಪಂದಕ್ಕೆ ಭಾರತ ಸರಕಾರ ಸಹಿ ಹಾಕಿದರೆ ವಿದೇಶಿಗರು ನಮ್ಮ ಶಿಕ್ಷಣದ ಮೇಲೆ ದಾಳಿ ನಡೆಸುತ್ತಾರೆ. ಇಲ್ಲಿಯ ಪ್ರತಿಭಗಳ ಪಲಾಯನ ಇನ್ನಷ್ಟು ಹೆಚ್ಚಾಗುತ್ತದೆ. ಶಿಕ್ಷಕ ಮತ್ತು ಉಪನ್ಯಾಸಕರ ಅರ್ಹತೆ, ನೇಮಕಾತಿ ವೇತನ ಮತ್ತು ವಿದ್ಯಾರ್ಥಿಗಳ ಶುಲ್ಕ ನಿಗದಿ ಎಲ್ಲವನ್ನೂ ಡಬ್ಲ್ಯೂ.ಟಿ.ಒ ವಹಿಸಿಕೊಳ್ಳುತ್ತದೆ. ಆ ಮೂಲಕ ಉನ್ನತ ಶಿಕ್ಷಣ ಬಡವರ ಕೈಗೆಟುಕದಂತಾಗುತ್ತದೆ. ನಮ್ಮ ಶಿಕ್ಷಣ ಕ್ಷೇತ್ರವು ಈ ನವ ಉದಾರೀಕರಣದ ಹೊಡೆತದಿಂದ ಪಾರು ಮಾಡಲು ಕ್ವಿಟ್ ಇಂಡಿಯಾ ಮಾದರಿಯ ಹೋರಾಟ ನಡೆಸಬೇಕಿದೆ ಎಂದರು.  ಹಿರಿಯ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರ ಆಶಯಗಳನ್ನು ನಾವಿನ್ನು ನನಸಾಗಿಸಿಲ್ಲ. ಹೈ.ಕ ಭಾಗದಲ್ಲಿ ಪ್ರಾದೇಶಿಕ ಅಸಮಾನತೆ ಹೆಚ್ಚಾಗುತ್ತಿದ್ದು ಅದನ್ನು ಸರಿ ಮಾಡಲು ರಾಜಕಾರಣಿಗಳು ಇಚ್ಚಾಶಕ್ತಿ ತೋರುತ್ತಿಲ್ಲ. ಬಹುಷಃ ಬ್ರೀಟೀಷರ ಅನುವಂಷೀಯತೆ ಅವರಲ್ಲಿದ್ದ ಕಾರಣ ದೇಶದಲ್ಲಿ ನ ಅಸಮಾನತೆ ನಿವಾರಣೆಯಾಗುತ್ತಿಲ್ಲವೆಂದು ವಿಷಾದ ವ್ಯಕ್ತ ಪಡಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ದೌರ್ಜನ್ಯ, ಬಹಿಷ್ಕಾರ, ದೇವದಾಸಿ ಪದ್ದತಿ ಇನ್ನೂ ಜೀವಂತ ಇದ್ದು ಜನರ ಬದುಕನ್ನು ಕಿತ್ತು ತಿನ್ನುತ್ತಿದೆ. ಶಿಕ್ಷಣ ಕ್ಷೇತ್ರ ಮಾರಟದ ಕ್ಷೇತ್ರವಾದ್ದರಿಂದ ವ್ಯಾಪಕ ಬ್ರಷ್ಟಾಚಾರಗಳು ನಡೆಯುತ್ತಿವೆ. ದೇಶದ ಅಭೀವೃದ್ದಿಗೆ ಹಿನ್ನಡೆಯಾಗಿರುವ ಅಸಮಾನತೆಯನ್ನು ನಿವಾರಿಸಲು ಬಲಿಷ್ಟ ಹೋರಾಟ ನಡೆಯಬೇಕು. ವಿದ್ಯಾರ್ಥಿಗಳು ಸಮಾಜದ ಏಳ್ಗೆಗಾಗಿ ನೇತೃತ್ವವನ್ನು ವಹಿಸಿಕೊಳ್ಳಬೇಕೆಂದು ಕರೆ ನೀಡಿದರು. ನಿವೃತ್ತ ಪ್ರಾಚಾರ್ಯ ಮಹಾಂತೇಶ್ ಮಲ್ಲನಗೌಡರ ಮಾತನಾಡಿ ನಮ್ಮಲ್ಲಿರುವ ಭಯವನ್ನು ಹೋಗಲಾಡಿಸಿ ದೈರ್ಯದಿಂದ ಸಮಾಜದ ಪ್ರಗತಿಗೆ ದುಡಿದರೆ ದೇಶ ಒಡೆಯುವ ದ್ರೋಹಿಗಳನ್ನು ಹಿಸುಕಲು ಸಾಧ್ಯ ಅದಕ್ಕಾಗಿ ಐಕ್ಯತೆಯ ಚಳುವಳಿ ಅಗತ್ಯವೆಂದು ಹೇಳಿದರು. ಪ್ರಗತಿಪರ ಚಿಂತಕರಾದ ಬಸವರಾಜ್ ಶೀಲವಂತರ, ಸುಂಕಪ್ಪಗದಗ್, ಶಿಕ್ಷಕರಾದ ಶರಣಗೌಡ, ಕರಿಂ ಸಾಬ್, ನಾಗರಾಜ್ ಬಾಳಪ್ಪ ಹುಲಿಹೈದರ್, ಪ್ರಕಾಶ್ ಸೇರಿದಂತೆ ಅನೇಕರು ಮಾತನಾಡಿದರು. ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅಮರೇಶ್ ಕಡಗದ್ ಅಧ್ಯಕ್ಷತೆ ವಹಿಸಿದ್ದರು. ಗ್ಯಾನೇಶ್ ಕಡಗದ್, ದುರಗೇಶ್ ಡಗ್ಗಿ, ಅಮರೇಶ್ ಕುರಿ, ಮರಿನಾಗ್, ಉಮೇಶ್ ರಾಠೋಡ್, ಮಂಜುನಾಥ್, ರವಿ, ವಿರೇಶ್ ಕುದ್ರಿಮೋತಿ, ಸಿದ್ದು, ರಮೇಶ್ ನಾಯಕ್ ಸೇರಿದಂತೆ ಅನೇಕರಿದ್ದರು.
Please follow and like us:
error

Leave a Reply

error: Content is protected !!