೧೨ ರಂದು ಗುಡ್ಡದ ಶ್ರೀ ಅಂದಿಗಾಲೇಶ್ವರ (ಆಂಜನೇಯ) ಜಾತ್ರಾ ಮಹೋತ್ಸವ.

ಕೊಪ್ಪಳ – ತಾಲೂಕಿನ ಅಗಳಕೇರಾ ಗ್ರಾಮದ ಗುಡ್ಡದ ಶ್ರೀ ಅಂದಿಗಾಲೇಶ್ವರ (ಆಂಜನೇಯ) ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಈ ಜಾತ್ರಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಮ.ನಿ.ಪ.ಸ್ವ. ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಟಣಕನಕಲ್ಲನ ಕಾಲಜ್ಞಾನಿ ಬ್ರಹ್ಮ ಸದ್ಗುರು ಶ್ರೀ ಶರಣಬಸವ ಮಹಾಸ್ವಾಮಿಗಳು ಮತ್ತು ನಗರಗಡ್ಡಿಮಠದ ಶ್ರೀ ಶಾಂತಲಿಂಗೇಶ್ವರ ಸ್ವಾಮಿಗಳು, ಶ್ರೀ ಮಹಾಂತ ವಿದ್ಯಾದಾಸ್ ಜಿ ಮಹರಾಜ ಸ್ವಾಮಿಗಳು, ಆಗ

ಮಿಸಲಿದ್ದಾರೆ. ಅತಿಥಿಗಳಾಗಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಆಗಮಿಸಲಿದ್ದಾರೆ. ಜಾತ್ರಾ ನಿಮಿತ್ಯ ಗುಡ್ಡದ ಶ್ರೀ ಅಂದಿಗಾಲೇಶ್ವರ (ಆಂಜನೇಯ) ದೇವಸ್ಥಾನಕ್ಕೆ ನೂತನವಾಗಿ ೬೦೦ ಮೆಟ್ಟಿಲುಗಳನು ನಿರ್ಮಿಸಲಾಗಿದೆ. ಮತ್ತು ದಿನಾಂಕ ೧೦ ರಿಂಧ ೧೨ ನೇ ತಾರಿಕಿನ ವರೆಗೆ ಬೆಟ್ಟದಲ್ಲಿ ಬೆಳಕಿನ ವ್ಯವಸ್ಥೆ ಇರುತ್ತದೆ.

Please follow and like us:

Leave a Reply