You are here
Home > Koppal News > ಹ್ಯಾಟಿ ಗ್ರಾಮದ ಪಂಚಾಕ್ಷರಿಗೆ ಕಾಯಕ ಕಲಿ ಪ್ರಶಸ್ತಿ

ಹ್ಯಾಟಿ ಗ್ರಾಮದ ಪಂಚಾಕ್ಷರಿಗೆ ಕಾಯಕ ಕಲಿ ಪ್ರಶಸ್ತಿ

 ಇತ್ತೀ

ಚಿಗೆ ಬೆಂಗಳೂರಿನ ರವಿಂದ್ರಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗುರು ಬಸವಣ್ಣನವರ ೮೧೯ ನೇ ಲಿಂಗೈಕ್ಯ ಸಂಸ್ಮರಣೆ ಸಮಾರಂಭದಲ್ಲಿ  ಕೊಪ್ಪಳ ತಾಲುಕಿ ಹ್ಯಾಟಿ ಗ್ರಾಮದ ಪಂಚಾಕ್ಷರಿ ಹಿರೇಮಠ ಅವರಿಗೆ ಕಾಯಕ ಕಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಕೊಪ್ಪಳ ತಾಲುಕಿ ಹ್ಯಾಟಿ ಗ್ರಾಮದ ಪಂಚಾಕ್ಷರಿ ಹಿರೇಮಠ ಚಿಕ್ಕಂದಿನಿಂದಲೂ ಬಸವಣ್ಣನವರ ಆಧ್ಯಾತ್ಮ ಚಿಂತನೆಗಳತ್ತ ಒಲವು ಹೊಂದಿದ್ದು, ಅವರ ಹೆಸರಿನಲ್ಲಿ ಸದಾ ಒಂದಿಲ್ಲೊಂದು ಸಮಾಜ ತಿದ್ದುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರ ಫಲವೆ ಇಂದು ಕಾಯಕ ಕಲಿ ಪ್ರಶಸಿ ಅವರನ್ನು ಹುಡುಕಿಕೊಂಡು ಬಂದಿದೆ. 
ಈ ಸಂದರ್ಭದಲ್ಲಿ ಶಿವಶರಣೆ ಮಾತೆ ಮಹಾದೇವಿ ಸಮಾಜ ಕಲ್ಯಾಣ ಸಚಿವರಾದ ಹೆಚ್. ಆಂಜನಯ್ಯ, ನಿವೃತ್ತ ಐ.ಪಿ.ಎಸ್ ಅದಿಕಾರಿ ಶಂಕರ್ ಬಿದರಿ ಉಪಸ್ಥಿತರಿದ್ದರು ಎಂದು ಶಿವಯ್ಯ ಹಿರೇಮಠ ತಿಳಿಸಿದ್ದಾರೆ

Leave a Reply

Top