fbpx

ಮರುಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ: ಖಂಡನೆ

 ಮರುಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ) ಹಾಗೂ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಖಂಡಿಸಿದೆ. 
ಈ  ಕುರಿತು ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಪದಾಧಿಕಾರಿಗಳು ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದ ದಲಿತರ ಕೇರಿಗೆ ಭೇಟಿ ನೀಡಿ,  ಗುರುವಾರ ನಡೆದ ಘರ್ಷಣೆಯಲ್ಲಿ ದಲಿತರಿಗೆ ಸೇರಿದ ನಾಲ್ಕು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು,  ೬ ಜನ ದಲಿತರಿಗೆ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರ ೬೦ ದಲಿತ ಕುಟುಂಬಗಳಿದ್ದು, ಕ್ಷೌವರ ನೆಪದಲ್ಲಿ ಸ್ವಾಮಿ ಮತ್ತು ಇಳಿಗ ಜನಾಂಗದವರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳು ಮರಿ ಎನ್ನದೇ ಸುಮಾರು ೩೦ ಜನರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಸರ್ವರ್ಣಿಯರ ೬೭ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಹ ಕೇವಲ ೫೬ ಜನರನ್ನು ದಸ್ತಗಿರಿ ಮಾಡಿದ್ದು ಇನ್ನುಳಿದವರ ದಸ್ತಗಿರಿಗೆ ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ಇದಕ್ಕೆಲ್ಲಾ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೂಲ ಕಾರಣ. ಕೂಡಲೇ ಈ ಕುರಿತು ಪೊಲೀಸರು ಎಚ್ಛೇತ್ತು ಆರೋಪಿತರನ್ನು ಬಂಧಿಸಿ ನಮ್ಮವರ ಮೇಲಾದ ಕೇಸುಗಳನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವೆಂದು ದಸಂಸ ಮುಖಂಡ ಗುಲಬರ್ಗಾ ವಿಭಾಗೀಯ ಉಪಾಧ್ಯಕ್ಷ ಮರಿಯಪ್ಪ ಯತ್ನಟ್ಟಿ, ವಿಭಾಗೀಯ ಕಾರ್ಯದರ್ಶಿ ಪ್ರಕಾಶ ಪೂಜಾರ, ಜಿಲ್ಲಾಧ್ಯಕ್ಷ ಲಕ್ಷ್ಮಣ ವೈ. ಮಾದಿನೂರು ಮತ್ತು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಮರಿಯಪ್ಪ ಎನ್. ದದೇಗಲ್, ಖಜಾಂಚಿ ಪಕೀರಪ್ಪ ಕೆ. ದೊಡ್ಡಮನಿ, ಪ್ರ. ಕಾಯದರ್ಶಿ ದುರುಗಪ್ಪ ಹಲ್ಲಾನಗರ, ಉಪಾಧ್ಯಕ್ಷ ನಿಂಗಪ್ಪ ಕಾಮನೂರು, ತಾಲೂಕ ಪ್ರ. ಕಾಯದರ್ಶಿ ಸಿದ್ದಪ್ಪ ಹೆಚ್. ಲೆಂಕಿ ಕಾಮನೂರು ಪ್ರಕಟಣೆಯಲ್ಲಿ ತಿಳಿದ್ದಾರೆ.
Please follow and like us:
error

Leave a Reply

error: Content is protected !!