ಬಿಲ್ ಪಾವತಿಸದ್ದಕ್ಕೆ ಜಿಪಂ ಕಚೇರಿ ಜಪ್ತು

ಕೊಪ್ಪಳ : ಗುತ್ತಿಗೆದಾರರೊಬ್ಬರು ಕೆಲಸ ಪೂರ್ಣಗೊಳಿಸಿ ವರ್ಷಗಳೇ ಕಳೆದರೂ ಬಿಲ್ ಪಾವತಿಸದ ಜಿಪಂ ಇಂಜನಿಯರಿಂಗ್ ವಿಭಾಗದ ಕಚೇರಿಯನ್ನು ಕೋರ್ಟ್ ಆದೇಶದನ್ವಯ ಜಪ್ತು ಮಾಡಲಾಯಿತು.ರೆಹಮಾನ್ ಕಾಲಿಮಿರ್ಚಿ ಎನ್ನುವ ಗುತ್ತಿಗೆದಾರರು 2006ರಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಇದರ ಬಗ್ಗೆ ವಿಭಾಗದ ಅಧಿಕಾರಿಗಳು ವರದಿಯನ್ನೂ ಸಲ್ಲಿಸಿದ್ದಾರೆ ಆದರೂ ಬಿಲ್ ಪಾವತಿಯಾಗದ್ದರಿಂದ ಬೇಸತ್ತ ಅವರು ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯ ಬಾಕಿ ಬಿಲ್ ಬಡ್ಡಿ ಸಮೇತ ಪಾವತಿಸುವಂತೆ ಆದೇಶ ನೀಡಿತ್ತು. ಆದೇಶ ಬಂದು ಬಹಳ ದಿನಗಳೇ ಕಳೆದರೂ ಹಣ ಪಾವತಿ ಮಾಡಿರಲಿಲ್ಲ. ಆದ್ದರಿಂದ ನ್ಯಾಯಾಲಯ ಈಗ ಕಚೇರಿಯ ಜಪ್ತಿಗೆ ಆದೇಶ ನೀಡಿತ್ತು.

Leave a Reply