೨೪ ರಂದು ಕಣ್ವ ಮಠದ ಶ್ರೀಗಳ ಪುರ ಪ್ರವೇಶ ೨೫ ರಿಂದ ಶ್ರೀ ಶವಚಿದಂಬರ ವೀಣಾಸಪ್ತಾಹ.

ಕೊಪ್ಪಳ, ೨೩- ಕಣ್ವಮಠದ ಮಠಾದೀಶರಾದ ಶ್ರೀ ವಿಧ್ಯಾವಾರಿಧಿ ತೀರ್ಥ ಶ್ರೀಪಾದಂಗಳವರ ಕೊಪ್ಪಳ ಪುರಪ್ರವೇಶ ಹಾಗೂ ೫೬ನೇ ಶ್ರೀ ಶಿವ ಚಿಂದಬರ ನಾಮ ಅಖಂಡ ವೀಣಾ ಜಪ ಸಪ್ತಾಹ ಕಾರ್ಯಕ್ರಮ ಇಂದು ಶನಿವಾರ ೨೪-೧೦-೧೫ ರಿಂದ ೦೧-೧೧-೧೫ರ ವರೆಗೆ ಜರುಗಲಿದೆ. ಕೊಪ್ಪಳ ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಸಪ್ತಾಹ ಜರುಗಲಿದ್ದು. ಎಳುದಿನಗಳ ಕಾಲ ನಿರಂತರ ಜಪ,ಪ್ರವಚನ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಪುರ ಪ್ರವೇಶ : ಇಂದು ಶನಿವಾರ ೨೪ ರಂದು ಸಂಜೆ ೫ ಕ್ಕೆ ಶ್ರೀ ವಿಧ್ಯಾವಾರಿಧಿ ತೀರ್ಥರ ಪುರ ಪ್ರವೇಶ ಕಾರ್ಯಕ್ರಮ ಜರುಗಲಿದ್ದು ಅಲ್ಲದೆ ಕರ್ಕಿಹಳ್ಳಿ ಸಂತ ಶ್ರೇಷ್ಠ ಶ್ರೀ ಸುರೇಶ ಪಾಟೀಲ್ ಗುರು ಮಹಾರಾಜ ನೇತೃತ್ವದಲ್ಲಿ ಸರ್ವ ಸಂತರ ಆಗಮನವಾಗಲಿದೆ.ಕಿನ್ನಾಳ ರಸ್ತೆಯ ಗೋವಿಂದ ರಾಯನ ದೇವಸ್ಥಾನದಿಂದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದವರೆಗೆ ಭವ್ಯ ಮೇರವಣಿಗೆ ಜರುಗಲಿದೆ. ೫೬ ನೇ ಶ್ರೀಶಿವ ಚಿಂದಬರ ನಾಮ ಸಪ್ತಾಹ ೨೫ ರವಿವಾರದಿಂದ ೫೬ನೇ ಶ್ರೀ ಶಿವಚಿಂದಬರ ನಾಮ ಅಖಂಡ ವೀಣಾ ಜಪ ಸಪ್ತಾಹ ಜರುಗಲಿದ್ದು. ಅಂದು ಬೆಳಿಗ್ಗೆ ಧರ್ಮ ಧ್ವಜಾರೋಹಣ ಶ್ರೀಮಠದ ಸಂಸ್ಥಾನ ಪೀಠಪೂಜೆ ತೀರ್ಥ ಪ್ರಸಾದ ಜರುಗಲಿದೆ.

   

Leave a Reply