fbpx

ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಡಿಯಲ್ಲಿ ನಾಟಕ
ಗವಿಶ್ರೀ ಹವ್ಯಾಸಿ ಕಲಾಬಳಗ, ಕೊಪ್ಪಳ ಇವರಿಂದ  ಶ್ರೀ ಬಸವ ಜಯಂತಿ ಶತಮಾನೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವನ್ನು ದಿನಾಂಕ ೧೬-೦೨-೨೦೧೪ ರವಿವಾರ ಸಂಜೆ ೬ : ಗಂಟೆಗೆ ನಗರದ ಸಾಹಿತ್ಯಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು. ವಿಶೇಷ ಅತಿಥಿಗಳಾಗಿ   ಬಿ.ಎಸ್. ಪಾಟೀಲ, ಅಧ್ಯಕ್ಷರು ಶ್ರೀ ಶರಣ ಸಾಹಿತ್ಯ ಪರಿಷತ್ತು ಕೊಪ್ಪಳ, ಆಗವಿಸಲಿದ್ದು,  ಉದ್ಘಾಟಕರಾಗಿ ನಾಗರಾಜ ಜಮ್ಮನ್ನವರ ಅಧ್ಯಕ್ಷರು ರಾಜ್ಯ ಸರಕಾರಿ ನೌಕರರ ಸಂಘ ಕೊಪ್ಪಳ,ದ್ವೀಪ ಪ್ರಜ್ವಲನೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಟಿ. ಜನಾರ್ಧನ್ ನೆರವೇರಿಸಲಿದ್ದು, ಸಂಗಣ್ಣ ಕರಡಿಯವರು ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಗೈಯಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ವಹಿಸಲಿದ್ದಾರೆ, 
ಕೊಪ್ಪಳದ ಗಣ್ಯಮಾನ್ಯರು, ಸಾಹಿತಿಗಳು, ಕಲಾವಿದರು, ಜನಪ್ರತಿನಿಧಿಗಳು ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು, ಈ ನಾಟಕವು ಉಚಿತ ಪ್ರದರ್ಶನವಿದ್ದು, ಕವಲೂರಿನ ಕಲಾವಿದರಾದ ಬಸವರಾಜ ಹೆಸರೂರ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಅರಳಿದ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಧಾರವಾಡ ಹಾಗೂ ಕೊಪ್ಪಳದ ಅನುಭವಿ ಕಲಾವಿದರನ್ನೊಳಗೊಂಡು ಅರಳಿದ ಈ ಸುಂದರ ನಾಟಕವನ್ನು  ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಡಿ ಆನಂದಿಸಬೇಕೆಂದು ಅಧ್ಯಕ್ಷರಾದ ಗವಿಸಿದ್ದೇಶ ಹೆಚ್. ಹುಡೇಜಾಲಿ  ಕರೆ ನೀಡಿದ್ದಾರೆ. 
Please follow and like us:
error

Leave a Reply

error: Content is protected !!