ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಸೈ.ವಜೀರ್ ಅಹ್ಮದ್

ಕೊಪ್ಪಳ,ಫೆ,: ಮತೀಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಅಬಿವೃದ್ಧಿಗಾಗಿ ಸರ್ಕಾರದ ಅಲ್ಪಸಂಖ್ಯಾರತ ಅಭಿವೃದ್ಧಿ ನಿಗಮದ ವತಿಯಿಂದ ಸರ್ಕಾರ ಸಾಕಷ್ಟು ಸೌಲಭ್ಯ ವದಗಿಸಿದೆ ಇದರ ಸದುಪಯೋಗ ಪಡೆದುಕೊಳ್ಳುವುದರ ಮೂಲಕ ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಕೆಎಂಡಿಸಿ ಆಡಳಿತಾಧಿಕಾರಿ ಸ್ಯಯದ್ ವಜೀರ ಅಹ್ಮದ್ ಕರೆನೀಡಿದರು.
   ಅವರು ರವಿವಾರ ಇಲ್ಲಿನ ವಾಲ್ಮೀಕಿಭವನದಲ್ಲಿ ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರ ಶಾಖೆವತಿಯಿಂದ ಏರ್ಪಡಿಸಿದ ಅಲ್ಪಸಂಖ್ಯಾತರಿಗೆ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು ಸರ್ಕಾರ ಅಲ್ಪಸಂಖ್ಯಾತರ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ ಬಡ ಕುಟುಂಬದ ಪಾಲಕರು ಸರ್ಕಾರದ ಈ ಸೌಲಭ್ಯ ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕೆಂದರು.
      ಮುಂದುವರೆದು ಮಾತನಾಡಿದ ಅವರು ಯಾವುದೇ ಪದವಿ ಸೇರಿದಂತೆ ವೃತ್ತಿಪರ ಕೊರ್ಸಗಳಿಗಾಗಿ ಸಾಲ ಸೌಲಭ್ಯ ನೀಡಲು ನಿಗಮ ಮುಂದಾಗಿದೆ. ನಿಗದಿತ ಅರ್ಜಿ ನಮೋನೆಯಲ್ಲಿ ತಮ್ಮ ಮಕ್ಕಳ ಸಂಪೂರ್ಣ ಮಾಹಿತಿ ನೀಡಿ ಇದರ ಸದುಪಯೋಗ ಪಡೆದುಕೊಂಡು  ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಹೇಳಿದ ಅವರು ಸಮಾಜದ ವಿವಿಧ ಸಂಘಟನೆಗಳು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಕೆಲಸಮಾಡಬೇಕೆಂದು ಕೆಎಂಡಿಸಿ ಆಡಳಿತಾಧಿಕಾರಿ ಸ್ಯಯದ್ ವಜೀರ ಅಹ್ಮದ್ ಕರೆನೀಡಿದರು.
   ಸಮಾರಂಭದ ಸಾನಿಧ್ಯವನ್ನು ಮುಫ್ತಿ ಮೊಹಮ್ಮದ್ ನಜೀರ ಅಹಮ್ಮದ್ ಖಾದ್ರಿ-ವ-ತಸ್ಕೀನಿ ರವರು ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಪಾಲ್ಗೊಂಡು ಮಾತನಾಡಿದರು.
 ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಲಿಮುದಿನ್, ಹಿರಿಯ ನಿವಾಸಿ ಎಂ.ಎ.ಮಾಜೀದ್ ಸಿದ್ದಿಖಿ(ನಿಸಾರ್ ಸಾಬ್) ಅಲ್ಲದೆ ಕೆಎಂಡಿಸಿ ಕೊಪ್ಪಳ ಜಿಲ್ಲಾ ಶಾಖೆಯ ವ್ಯವಸ್ಥಾಪಕ ಜಾಖಿರ್ ಹುಸೇನ್ ಕುಕನೂರ ಮತ್ತಿತರರು ಪಾಲ್ಗೊಂಡಿದ್ದು ಅಲ್ಪಸಂಖ್ಯಾತ ವರ್ಗದ ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Please follow and like us:
error