೯ ಲೇಔಟಗಳಲ್ಲಿ ಅಕ್ರಮ ನ್ಯಾಯಾಂಗ ತನಿಖೆಗೆ ಆಗ್ರಹ

ಸರ್ವೇ ನಂ ೪೩೮ ರ ಜಾಗೆಯಲ್ಲಿ ವಾಸಿಸುವ ಕೊಳಗೆರಿ ನಿವಾಸಿಗಳ ಹಕ್ಕುಗಳನ್ನು ರಕ್ಷಣೆ ಮಾಡುವ ಕುರಿತು 
ಮುಖ್ಯ  ಮಂತ್ರಿಗಳಿಗೆ ತಹಶಿಲ್ದಾರರು ಕೊಪ್ಪಳ ಇವರ ಮುಖಾಂತರ ಮನವಿ 

ಆಶ್ರಯ ನಿವಾಸಿಗಳ ಒಕ್ಕೂಟ ಈ ಪತ್ರದ ಮೂಲಕ ವಿನಂತಿಸುವುದೆನೆಂದರೆ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ ಅನೆಕ ಮನವಿ ಪತ್ರಗಳ ವಿಷಯವನ್ನು ತಾವು ಗಮನಿಸಿದ್ದೀರೆಂದು ಬಾವಿಸಿದ್ದೇವೆ. ಕೊಪ್ಪಳ ನಗರದ ಬಹದ್ದೂರ ಬಂಡಿ ರಸ್ತೆಯ ೪೩೮ ರ ಜಾಗೆಯಲ್ಲಿ ವಾಸಿಸುವ ೨೪೯ ಕುಟುಂಬಗಳಿಗೆ ನಗರಸಭೇ ೨೦೦೬ ರಲ್ಲಿ ಹಕ್ಕುಪತ್ರ ನೀಡಿದೆ. ಈ ದಾಖಲಾತಿ ಹೊಂದಿದ ನಿವಾಸಿಗಳು ಸ್ವಂತ ಹಣ ಖರ್ಚು ಮಾಡಿ ಹೆಚ್ಚಿನ ಪ್ರಮಾಣದ ಸಿಮೆಂಟ್, ಕಬ್ಬಿಣ ಇತರೆ ದಾಖಲಾತಿ ಹೊಂದಿದ ನಿವಾಸಿಗಳು ಸ್ವಂತ ಹಣ ಖರ್ಚು ಮಾಡಿ ಹೆಚ್ಚಿನ ಪ್ರಮಾಣದ ಸಿಮೇಂಟ್ ಕಬ್ಬಿಣ ಇತರೆ ಕಟ್ಟಡ ಸಾಮಗ್ರಿಗಳನ್ನು ಖರಿದಿಸಿ ಮನೆಗಳನ್ನು ಭದ್ರವಾಗಿ ನಿರ್ಮಿಸಿಕೊಂಡಿದ್ದಾರೆ. ಇದನ್ನು ಸಹಿಸದ ಕೆಲವು ರಾಜಕೀಯ ವ್ಯಕ್ತಿಗಳು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿ ಗೊಂದಲ ಉಂಟು ಮಾಡಿದರು, ಸ.ನಂ. ೪೩೮ ರ ಬಡಾವಣೆ ಸೇರಿದಂತೆ ಕೊಪ್ಪಳ ನಗರದ ೯ ಬಡಾವಣೆಗಳಲ್ಲಿ ಅನರ್ಹ ಫಲಾನುಭವಿಗಳು ನಿವೇಶನ ಪಡೆದುಕೊಂಡಿದ್ದಾರೆಂಬ ದೂರನ್ನಾದರಿಸಿ ಅಂದಿನ ಮಾನ್ಯ ಸಹಾಯಕ ಆಯುಕ್ತರಾದ ಶ್ರೀಮತಿ ಗಂಗುಬಾಯಿ ಮಾನ್ಕರ ಅವರು ೯ ಬಡಾವಣೆಗಳಲ್ಲಿ ನಿವೇಶನಗಳ ಹಕ್ಕನ್ನು ರದ್ದುಗೊಳಿಸಬೇಕೆಂದು ಸರಕಾರಕಲ್ಕೆ ವರದಿ ಸಲ್ಲಿದ್ದರು. ಆದರೆ ರಾಜಕೀಯ ದುರುದ್ದೆಸದಿಂದ ೮ ಬಡಾವಣೆಗಳ ನಿವೇಶನಗಳ  ತಂಟೆಗೆ ಹೋಗದೆ ಸ.ನಂ ೪೩೮ ರ ಬಡಾವಣೆಗಳ ಮನೆಗಳಲ್ಲಿ ವಾಸಿಸುವ ನಿವಾಸಿಗಳು ಮನೆ ಖಾಲಿ ಮಾಡಬೇಕೆಂದು ನಗರಸಭೇ ಪೌರಾಯುಕ್ತರು ದಿ: ೧೭-೧೧-೨೦೧೨ ರಂದು ದ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದರಿಂದ ದಿಕ್ಕು ತೋಚದಂತಾದ ೨೪೯ ಮನೆಗಳ ನಿವಾಸಿಗಳು ದಿ: ೧೯-೧೧-೨೦೧೨ ರಿಂದ ತಾವು ವಾಸವಾಗಿರುವ ಬಡಾವಣೆಯ ಮಧ್ಯಯೇ ಅನೇಕ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ದಿಷ್ಠ ಧರಣಿ ಹೋರಾಟ ಹಮ್ಮಿಕೊಂಡು ಸತತ ೬೦ ದಿನಗಳ ವರೆಗೆ ಹೋರಾಟ ನಡೆಸಲಾಯಿತು. 
ಅನೇಕ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಧರಣಿ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದ್ದಾರೆ. ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು (ಉಪವಿಭಾಗ ಗದಗ) ಪ್ರತಿಯೊಂದು ಮನೆಗೆ ೧೬೨೦೦  ರೂ ಹಣವನನು ಸ್ಲಂ ಬೋರ್ಡಗೆ ಜಮಾ ಮಾಡಲು ಕಳೆದ ಡಿಸೆಂಬರ್ ೧೮ ರಿಂದ ಜನೆವರಿ ೩ ೨೦೧೩ ರಲ್ಲಿ ಪ್ರಕಟಣೆ ಹೊರಡಿಸಿದ ಪ್ರಕಾರ ೨೪೯ ನಿವಾಸಿಗಳು ಡಿಡಿ ಮೂಲಕ ಹಣ ಜಮಾ ಮಾಡಿದ್ದಾರೆ. 
ಸ್ಲಂ- ಬೋರ್ಡ ವತಿಯಿಂದ ನಿರ್ಮಿಸಿದ ೨೪೯ ಮನೆಗಳನ್ನು ಹಕ್ಕು ಪತ್ರ ಹೊಂದಿದ ಅರ್ಹ ಫಲಾನುಭವಿಗಳಿಗೆ ಮಂಜೂರಿ ಮಾಡಲು (ಪುನಃ ಆಯ್ಕೆ ಮಾಡಲು) ದಯಾಳುಗಳಾದ ತಾವುಗಳು, ಜಿಲ್ಲಾಡಳಿತ ಮತ್ತು ಸ್ಲಂ ಬೊರ್ಡ ಅದಿಕಾರಿಗಳಿಗೆ ಸೂಕ್ತ ನಿದೆಶನ ನೀಡಬೆಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೆವೆ. ಇದರಲ್ಲಿ ಕೆಲವರು ಅನರ್ಹರಿದ್ದರೆ ಅಂತವರನ್ನು ಆಯ್ಕೆಯಿಂದ ಕೈಬಿಟ್ಟರೆ ನಮ್ಮದೇನು ತಕರಾರು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ೬೦ ಸಿಬಗಳಿಂದ ಮುಂದುವರೆಸಿದ ಧರಣಿ ಹೋರಾಟವನ್ನು ಇಂದು ೧೫-೦೧-೨೦೧೩ ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತವೆ. ನಮ್ಮ ಬೆಡೊಕೆಗಳಲ್ಲಿ ವ್ಯತ್ಯಾಸವಾದರೆ ಪುನಃ ಅನಿವಾರ್ಯವಾಗಿ ಉಪವಾಸ ಸತ್ಯಾಗ್ರಹ ಇತೆರೆ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಇದಕಲ್ಕೆಲ್ಲ ಅವಕಾಶ ಕೊಡದೆ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುತ್ತಿರೆನ್ನುವ ಭರವಸೆ ಹೊಂದಿದ್ದೆವೆ. 
ಹಕ್ಕೋತ್ತಾಯಗಳು: 
೧. ೬೦ ದಿನಗಳೆಂದ ನಡೆಸ ಧರಣಿ ಹೋರಾಟದ ಎಲ್ಲಾ ಬೇಡಿಕೆಗಳನ್ನು  ಶೀಘ್ರ್ತಗತಿ ಯಲ್ಲಿ ಈಡೇರಿಸಬೆಕು.
೨. ಕೊಪ್ಪಳ ನಗರದ ಸರ್ವೆ ನಂ ೪೩೮ ರ ೨೪೯ ನಮನೆಗಳಲ್ಲಿ ೭ ವರ್ಷಗಳಿಂದ ವಾಸವಾಗಿರುವ ಹಕ್ಕು ಪತ್ರ ಪಡೆದ ಅರ್ಹ ಪಲಾನುಭವಿಗಳಿಗೆ ಮನೆಗಳನ್ನು ಮುಂಚೂಣಿ (ಪುನರ ಆಯ್ಕೆಮಾಡಬೇಕು)
೩. ನಗರದ ೯ ಲೇಔಟಗಳಲ್ಲಿ ಅಕ್ರಮವನನು ಕೂಡಲೇ ನ್ಯಾಯಾಂಗ ತನಿಕೆ ಮಾಡಬೇಕು. 
೪. ನಗರದ ಸ್ಲಂ ಆಶ್ರಯ ಬಡಾವಣೆಗಳಲ್ಲಿ ಮೂಲಬೂತ ಸೌಕರ್ಯಗಳನ್ನು ಒದಗಿಸಬೇಕು. 
೫. ಸರ್ವೆ ನಂ ೪೩೮ ರ ೨೪೯ ಮನೆಗಳನ್ನು ೫೦೦ ಪ್ಲಾಟ, ಟ್ಯಾಂಕ ಪೀಲ್ಟರ ಬೆಡ್ ವಿಜಯನಗರ ಮತ್ತು ಅಲೆಮಾರಿಗಳ ಪುನರವಸತಿ ಕಾಲೋನಿ ಸೆರಿದಂತೆ ಇತರೆ ಮಾರ್ಡಗಲ ಫಲಾನುಭವಿಗಳನ್ನು ಒಕ್ಕಲೆಬ್ಬಿಸಬಾರದು. 
Please follow and like us:
error