You are here
Home > Koppal News > ಆನೆಗೊಂದಿ ಉತ್ಸವ ಏ. ೧೧ ರ ಸಾಂಸ್ಕೃತಿಕ ಕಾರ್ಯಕ್ರಮಗಳು

ಆನೆಗೊಂದಿ ಉತ್ಸವ ಏ. ೧೧ ರ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೊಪ್ಪಳ   : ಸುವರ್ಣಯುಗವೆಂದೇ ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಭವ್ಯ ಇತಿಹಾಸವನ್ನು ಮೆಲುಕು ಹಾಕುವ ರೀತಿಯಲ್ಲಿ ಈ ಬಾರಿ ಅದ್ಧೂರಿ ಆನೆಗೊಂದಿ ಉತ್ಸವವನ್ನು ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಏರ್ಪಡಿಸಲಾಗಿದೆ.
  ಏ. ೧೧ ರಂದು ಸಂಜೆ ೫ ಗಂಟೆಗೆ ಆನೆಗೊಂದಿ ಉತ್ಸವದ ಮುಖ್ಯ ವೇದಿಕೆಯಾಗಿರುವ ’ಶ್ರೀ ಕೃಷ್ಣದೇವರಾಯ ವೇದಿಕೆ’ಯಲ್ಲಿ ಉತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.  ಏ. ೧೧ ರಂದು ಮುಖ್ಯ ವೇದಿಕೆ ’ಶ್ರೀ ಕೃಷ್ಣದೇವರಾಯ ವೇದಿಕೆ’ ಹಾಗೂ ಆನೆಗೊಂದಿ ಗ್ರಾಮದಲ್ಲಿನ ’ವಿದ್ಯಾರಣ್ಯ ವೇದಿಕೆ’ಯಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
’ಶ್ರೀ ಕೃಷ್ಣದೇವರಾಯ ವೇದಿಕೆ ಯಲ್ಲಿನ ಕಾರ್ಯಕ್ರಮಗಳು:
  ಸಂಜೆ ೫ ರಿಂದ ೭ ಗಂಟೆ ವರೆಗೆ ಉತ್ಸವದ ಉದ್ಘಾಟನೆ ಕಾರ್ಯಕ್ರಮ ಜರುಗಲಿದ್ದು, ನಂತರ ಗಂಗಾವತಿಯ ರಘುನಾಥ ಬದಿ ಅವರಿಂದ ಕೊಳಲುವಾದನ, ಕೊಪ್ಪಳದ ಸದಾಶಿವಪಾಟೀಲ್ ರಿಂದ ಸುಗಮ ಸಂಗೀತ, ಕುಷ್ಟಗಿ ಶರಣಪ್ಪ ವಡಿಗೇರಿ ರಿಂದ ಜಾನಪದ ಗೀತೆ, ಗಂಗಾವತಿಯ ದೊಡ್ಡಯ್ಯ ವೀರಯ್ಯ ಕಲ್ಲೂರ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, ರಾಯಚೂರು ಅಂಬಯ್ಯ ನುಲಿ ಅವರಿಂದ ವಚನಗಾಯನ, ಬೆಂಗಳೂರು ಶಾಂತಿರಾವ್ ಅವರಿಂದ ವೀಣಾವಾದನ, ನೂಪುರನಾದ-ನಿಕೇತನ ತಂಡದಿಂದ ಭರತನಾಟ್ಯ, ಆನೆಗೊಂದಿ ಕುಮಾರಿ ಚಂಪಕಮಾಲ ರಿಂದ ಸುಗಮ ಸಂಗೀತ, ಗಂಗಾವತಿಯ ಮಾಸ್ ನೃತ್ಯ ಕಲಾ ಸಂಘದಿಂದ ನೃತ್ಯ ಪ್ರದರ್ಶನ, ಮರಿಯಮ್ಮನಹಳ್ಳಿ ಮಂಜವ್ವ ಜೋಗತಿ ಮತ್ತು ತಂಡದಿಂದ ಜೋಗತಿ ನೃತ್ಯ ಪ್ರದರ್ಶನ, ಕೊಪ್ಪಳದ ಮಹೇಶ್ವರಿ ನೀರಜಾ ತಂಡದಿಂದ ನೃತ್ಯ ಪ್ರದರ್ಶನ, ಬೆಂಗಳೂರು ಸುಮಾ ವಿಜಯ್ ಮತ್ತು ತಂಡದಿಂದ ಭಾರತೀಯ ನೃತ್ಯ ವೈವಿಧ್ಯ, ಭಾಗ್ಯನಗರದ ಅಂಬಿಕಾ ಉಪ್ಪಾರ ರಿಂದ ಭಾವಗೀತೆಗಳು, ಹುಲಿಹೈದರ್ ತಾಂಡಾದ ಮಂಜುಳಾ ತಂಡದಿಂದ ಲಂಬಾಣಿ ನೃತ್ಯ, ಗಂಗಾವತಿ ಮೇಘನಾ ಪರಗಿ ರಿಂದ ಜಾನಪದ ಗೀತೆಗಳು, ಯಲಬುರ್ಗಾ ಜೀವನ್‌ಸಾಬ್ ಬಿನ್ನಾಳರಿಂದ ಜಾನಪದ ಗೀತೆಗಳ ಗಾಯನ, ಚಲನಚಿತ್ರ ನಟ ಪ್ರೇಮ್ ಮತ್ತು ಚಲನಚಿತ್ರ ಹಿನ್ನೆಲೆಗಾಯಕಿ ಚೈತ್ರ ಮತ್ತು ಸಂಗಡಿಗರಿಂದ ಸಂಗೀತ ರಸ ಸಂಜೆ.  ಕಾರಟಗಿಯ ಶಾರದಾ ನೃತ್ಯ ಕಲಾನಿಕೇತನ ತಂಡದಿಂದ ದೇಶಭಕ್ತಿ ನೃತ್ಯ.  ಗಂಗಾವತಿಯ ಜಲೀಲ್ ಪಾಷಾರಿಂದ ತಬಲಾ ಸೋಲೋ, ಗಂಗಾವತಿಯ ನರಸಿಂಹಜೋಷಿ, ಕಾರಟಗಿಯ ಕೋಗಳಿ ಕೊಟ್ರೇಶ ಅವರಿಂದ ಹಾಸ್ಯ ರಸಾಯನ ಕಾರ್ಯಕ್ರಮ.  ಪರಶುರಾಮ್ ದೊಡ್ಡಮನಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ.  ವಿಜಯಪುರದ ಯಲ್ಲಪ್ಪ ಬಸಪ್ಪ ಕೋಟಗುಂಡಿ ರಿಂದ ಸುಗಮ ಸಂಗೀತ.  ನಾಗರಾಜ ಶಾವಿ ಅವರಿಂದ ಕೊಳಲುವಾದನ.  ಗಂಗಾವತಿಯ ಶಿಲ್ಪಾ ಎಂ. ಅವರಿಂದ ಭಾವಗೀತೆ.  ಆನೆಗೊಂದಿಯ ತೇಜಸ್ವಿನಿ ಅವರಿಂದ ಭರತನಾಟ್ಯ ಹಾಗೂ ಹಿರೇಜಂತಕಲ್‌ನ ಕೆ. ಮಾರೆಪ್ಪ ಅವರಿಂದ ವಯಲಿನ್ ವಾದನ ಕಾರ್ಯಕ್ರಮ ಜರುಗಲಿದೆ.  ಉದ್ಘಾಟನ ಸಮಾರಂಭದ ನಾಡಗೀತೆ ಮತ್ತು ರೈತಗೀತೆಯನ್ನು ಗಂಗಾವತಿಯ ಶ್ರೀ ಗಾನಯೋಗಿ ಗುರುಪಂಚಾಕ್ಷರ ಸಂಗೀತ ವಿದ್ಯಾಸಂಸ್ಥೆಯ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.  
ವಿದ್ಯಾರಣ್ಯ ವೇದಿಕೆಯ (ಸರ್ಕಾರಿ ಹಿ.ಪ್ರಾ.ಶಾಲೆ ಆವರಣ) ಕಾರ್ಯಕ್ರಮಗಳು : ಏ. ೧೧ ರಂದು ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಗಂಗಾವತಿಯ ಎ. ಮಂಜುಳಾ ಉಮೇಶ ರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ.  ಆನೆಗೊಂದಿ ಚಂದ್ರಕಲಾ ಭೂಮಿ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ.  ಕೊಪ್ಪಳದ ರಿದಂ ಡ್ಯಾನ್ಸ್ ಅಕಾಡೆಮಿ ಅವರಿಂದ ಶಿವತಾಂಡವ ನೃತ್ಯ.  ಭಾಗ್ಯನಗರದ ಪರಶುರಾಮ ಬಣ್ಣದ ಅವರಿಂದ ಸುಗಮ ಸಂಗೀತ.  ಚಾಮಲಾಪುರದ ಮರಿಯಪ್ಪ ಮತ್ತು ತಂಡದಿಂದ ಜಾನಪದ ಗೀತೆಗಳ ಗಾಯನ.  ಕೊಪ್ಪಳದ ಅಭಿನವ ಸಂಗೀತ ಸೇವಾಸಂಸ್ಥೆ ಅವರಿಂದ ನೃತ್ಯ ಪ್ರದರ್ಶನ.  ಹಿರೇಜಂತಕಲ್‌ನ ರಜನಿ ಆರತಿ ಮತ್ತು ತಂಡದಿಂದ ವಚನ ಗಾಯನ.  ಗಂಗಾವತಿಯ ಕರ್ನಾಟಕ ವಿಕಲಚೇತನರ ಒಕ್ಕೂಟ ತಂಡದಿಂದ ಭಾವಗೀತೆಗಳು.  ಗಂಗಾವತಿಯ ಶಿವಪ್ಪ ಹುಳ್ಳಿ ವಡ್ಡರಹಟ್ಟಿ ಅವರಿಂದ ಸುಗಮ ಸಂಗೀತ.  ಗಂಗಾವತಿ ಸದಾನಂದ ಸೇಟ್ ಎಸ್.ಜೆ. ಅವರಿಂದ ದಾಸರ ಪದ.  ಗುಂಡೂರು ಹುಸೇನ್‌ಸಾಬ್ ರಿಂದ ರಂಗಗೀತೆಗಳು.  ಭಾಗ್ಯನಗರದ ಟ್ಯಾಲೆಂಟೆಡ್ ಡ್ಯಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ಪ್ರದರ್ಶನ.  ಹುಲಗಿಯ ಶೃತಿ ಹ್ಯಾಟಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ. ರಾಮಣ್ಣ ಮಾದಿನೂರು ಅವರಿಂದ ಭಜನಾ ಪದಗಳು.  ಕೃಷ್ಣಪ್ಪ ಕುಕನೂರು ಅವರಿಂದ ಸುಗಮ ಸಂಗೀತ.  ಮುಂಡರಗಿ ವೀರಪ್ಪ ಮಾಸ್ತರ್ ಅವರಿಂದ ರಂಗ ಗೀತೆ.  ಆನೆಗೊಂದಿಯ ಸಂಗೀತ ಸಾಗರ ಕಲಾತಂಡದಿಂದ ಭಾವಗೀತೆ.  ಮೋರನಾಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ್ ಅವರಿಂದ ತೊಗಲುಗೊಂಬೆ ಪ್ರದರ್ಶನ (ರಾಮಾಯಣ) ಕಾರ್ಯಕ್ರಮಗಳು ಜರುಗಲಿವೆ.

Leave a Reply

Top