ಶದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ.

ಕೊಪ್ಪಳ-17- ಇಂದರಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮತ್ತು ಗ್ರಾಮಪಂಚಾಯತಿ ಇಂದರಗಿ ಇವರ ಸಹಕಾರದೊಂದಿಗೆ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಂiiನಿರ್ವಾಹಕ ನಿರ್ದೇಶಕರಾದ ಎಲ್. ಹೆಚ್. ಮಂಜುನಾಥ ಉದ್ಘಾಟನೆ ನೆರವೇರಿಸಿ ಗ್ರಾಮದಿಂದ ಬಂದಂತಹ ಬೇಡಿಕೆಯನ್ನು ಸ್ವೀಕರಿಸಿ ಪೂಜ್ಯ ವಿರೇಂದ್ರ ಹೆಗ್ಗಡೆಯವರು ಇಂದರಗಿ ಗ್ರಾಮದಲ್ಲಿ ಶುದ್ದ ನೀರಿನ ಘಟಕದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೊದಲು ಗ್ರಾಮದ ಕೊಳವೆಬಾವಿಯ ಕುಡಿಯುವ ನೀರಿನ ಪರೀಕ್ಷೆ ನಡೆಸಲಾಗಿ ೮೪೪ ಟಿ.ಡಿ.ಎಸ್. ಪ್ರಮಾಣ ಕಂಡುಬಂದಿದ್ದು, ಪ್ರಸ್ತುತ ಘಟಕದಿಂದ ಶುದ್ದೀಕರಣ ಗೊಂಡ ನಂತರ ವಿತರಿಸುತ್ತಿರುವ ನೀರು ೧೯ ಟಿ.ಡಿ.ಎಸ್. ಪ್ರಮಾಣ ವಿರುತ್
    ಈ ಕಾರ್ಯಕ್ರಮದಲ್ಲಿ ಸದಸ್ಯತ್ವ ಹೊಂದಿದ ಸದಸ್ಯರಿಗೆ ಮಾಸಿಕ ಪಾಸ ಮತ್ತು ನೀರಿನ ಕ್ಯಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾ. ಪಂ ಸದಸ್ಯೆ ಭಿಮವ್ವ ಕಮ್ಮಾರ, ಹೈ. ಕ ಪ್ರಾದೇಶಿಕ ನಿರ್ದೇಶಕ ಕೆ, ಬೂದೆಪ್ಪಗೌಡ, ಜಿಲ್ಲಾ ನಿರ್ದೇಶಕ ಮುರಳಿದರ, ಗ್ರಾ. ಪಂ ಅಧ್ಯಕ್ಷೆ ಮಂಜುಳಾ ಕನಕಪ್ಪ ಪೂಜಾರ, ಗ್ರಾ. ಪಂ ಮಾಜಿ ಅಧ್ಯಕ್ಷ ರಾಮಣ್ಣ ಮೂಗುತಿ, ಗ್ರಾ. ಪಂ. ಅಭಿವೃದ್ದಿ ಅಧಿಕಾರಿ ಎಂ. ವಿರುಪಣ್ಣ, ಘಟಕದ ಮೇಲ್ವಿಚಾರಕ ಅಬ್ದುಲ್ ಹೆಚ್, ಸೇವಾ ಪ್ರತಿನಿಧಿ ಪಾರ್ವತಿ, ಹಾಗೂ  ಸಂಘದ ಸದಸ್ಯರಾದ, ಊರಿನ ಗಣ್ಯರು ಉಪಸ್ಥಿತರಿದ್ದರು.

ತದೆ. ಆದ ಕಾರಣ ಗ್ರಾಮಸ್ಥ್ತರು ಇದರ ಉಪಯೋಗವನ್ನು ಪಡೆದುಕೋಳ್ಳಬೇಕು. ಮತ್ತು ಆಸ್ಪತ್ರೆಗಳಿಗೆ ವಿನಿಯೋಗಿಸುವ ಖರ್ಚನ್ನು  ಕಡಿಮೆ ಗೊಳಿಸಲು ತಿಳಿಸಿದರು. ಈ ಘಟಕದಿಂದ ನೊಂದಾವಣಿ ಮಾಡಿಕೊಂಡ ಸದಸ್ಯರಿಗೆ ಒಂದು ಲೀಟರ್ ನೀರಿಗೆ ಕೇವಲ ೧೦ ಪೈಸೆಯಂತೆ ೨೦ ಲೀಟರ್ ಕ್ಯಾನಗೆ ೨ ರೂ ನಂತೆ ವಿತರಿಸಲಾಗುವುದು. ಜೊತೆಯಲ್ಲಿ ಕಾಯಂ ಸದಸ್ಯತ್ವ ಹೊಂದುವವರಿಗೆ ಕಾರ್ಡ ಸೌಲಭ್ಯ ಸಹ ನೀಡಲಾಗುವುದು ಎಂದು ತಿಳಿಸಿದರು.

Please follow and like us:
error