ಪದವೀಧರ ಕ್ಷೇತ್ರದ ಚುನಾವಣೆ ಗೆಲವು ನಮ್ಮದು : ನಮೋಶಿ

 ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ರಾಜ್ಯದ ಯುವಕರು ಈ ಹಿಂದೆ ಆಳಿದ ಸರ್ಕಾರ ಶಿಕ್ಷಣಕ್ಕೆ ಯಾವುದೇ ಮಹತ್ವ ನೀಡಿದರನ್ನು ಮನಗಡು ನಮ್ಮ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಡಾ.ನಂಜುಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿಶೀಲ್ ನಮೋಶಿ ಹೇಳಿದರು. 
ಅವರು ನಗರದ ಬಿ.ಟಿ.ಪಾಟೀಲ್ ನಗರದಲ್ಲಿ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಈಶ್ಯಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮತಯಾನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸಕ್ತ ವರ್ಷದ ಬಜೆಟಿನಲ್ಲಿ ಶೇ.೧೫ ರಷ್ಟು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು ಇತಿಹಾಸದಲ್ಲಿ ನಮ್ಮ ಸರ್ಕಾರ ಇಷ್ಟು ಹಣವನ್ನು ಶಿಕ್ಷಣಕ್ಕಾಗಿ ಬಳಸುತ್ತಿದೆ. ರಾಜ್ಯದಲ್ಲಿ ಶಾಲಾ ಕಾಲೇಜು ಹೊಸ ಉನ್ನತ ಶಿಕ್ಷಣ ನೀಡುವಲ್ಲಿ ಮುಚ್ಚೂಣಿಯಲ್ಲಿ ಇದ್ದು ಪದವೀಧರರು ಹಾಗೂ ವಿದ್ಯಾವಂತರ ಮತದಾರರು ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅದರಲ್ಲೂ ಜೆಓಸಿ ಶಿಕ್ಷಕರ ನೇಮಕ ಮಾಡುವ ವಿಷಯದಲ್ಲಿ ನಾವು ಮಹತ್ವ ನೀಡಿ ಅವರಿಗೆ ಆದ್ಯತೆ ನೀಡುವ ಮೂಲಕ ಸರ್ಕಾರದಲ್ಲಿ ಕೆಲಸ ನಡೆಯುತ್ತಿದ್ದೆ, ಈಶಾನ್ಯ ಪದವಿಧರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವು ಗೆಲುವು ಖಚಿತ ಅವರು ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್‌ರವರು ಹಲವು ವರ್ಷಗಳಿಂದ ಸಂಘಟನೆ ಹಾಗೂ ಪದವೀಧರ ಬಗ್ಗೆ ಕಾಳಜಿವಹಿಸಿ ಕಾರ್ಯನಿರ್ವಹಿಸುವ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದ ಅವರು ಎಷ್ಟೇ ಪಕ್ಷೇತ್ರ ಅಭ್ಯರ್ಥಿಗಳು ಸ್ಪರ್ಧಿಸಿದರು ಸರಿ ನಮ್ಮಗೆ ಯಾವುದೇ ತೊಂದರೆ ನಮ್ಮ ಮತದಾರರು ನಾವು ಮಾಡಿ ಶಿಕ್ಷಣ ಕ್ಷೇತ್ರದ ಯೋಜನೆಗಳನ್ನು ಕಂಡು ಅವರು ಮೆಚ್ಚಿದ್ದಾರೆ ಎಂದು ತಿಳಿಸಿದರು. 
ಶಶೀಲ್ ನಮೋಶಿ ನೇತೃತ್ವದಲ್ಲಿ ಕೊಪ್ಪಳ ನಗರದ ಬಿ.ಟಿ.ಪಾಟೀಲ್ ನಗರದಲ್ಲಿ ಮನೆ ಮನೆಗೆ ತೇರಳಿ ಈಶಾನ್ಯ ವಲಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ತಿನ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ರ ಪರ ಮತಯಾಚನೆ ನಡೆಸಿದ ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಸುರೇಶ ದೇಸಾಯಿ, ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಮುಖಂಡರಾದ ಅಂದಾನಪ್ಪ ಅಗಡಿ, ಪಿ.ಆರ್.ಹೊಸಳ್ಳಿ ವಕೀಲರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error