ಅನ್ನದಾನಯ್ಯ ಪುರಾಣಿಕರಿಗೆ ಮರಣೋತ್ತರ ರಾಜ್ಯೋತ್ಸವ ನೀಡಲಿ.

ಕೊಪ್ಪಳ, ಅ. ೨೦. ಕರ್ನಾಟಕ ಏಕೀಕರಣ ಹೋರಾಟಗಾರರಾದ ಹಿರಿಯ ಸಾಹಿತಿ ಅನ್ನದಾನಯ್ಯ ಪುರಾಣಿಕರವರಿಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಲು ಯುವ ಸಂಘಟಕ ಮಂಜುನಾಥ ಜಿ. ಗೊಂಡಬಾಳ ಒತ್ತಾಯಿಸಿದರು.
ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಘೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಅನ್ನದಾನಯ್ಯ ಪುರಾಣಿಕರವರ ಶ್ರದ್ಧಾಂಜಲಿ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಚೆನ್ನಬಸವ ಸಾಹಿತ್ಯ ಮತ್ತು ಭಗೀರಥ ಸಂಶೋಧನಾ ಕೃತಿಗಳಿಗೆ ಎರಡು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಅವರು ಒಟ್ಟು ೧೬ ಕೃತಿಗಳನ್ನು ಪ್ರಕಟಿಸಿದ್ದು ಇನ್ನೂ ನಾಲ್ಕು ಕೃತಿಗಳು ಪ್ರಕಟಣೆಯ ಹಂತದಲ್ಲಿದ್ದು, ಶ್ರೀಯುತರು ಬಸವ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಗಳಾಗಿ, ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು, ಕೊಪ್ಪಳದ ವೃತ್ತ ಒಂದಕ್ಕೆ ಅವರ ಹೆಸರನ್ನು ಇಡುವದು ಹಾಗೂ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳಿಂದ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಹುಲಿಗಿಯಲ್ಲಿ ನಡೆಯುತ್ತಿರುವ ಹೈ.ಕ. ಯುವ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಅವರ ಹೆಸರನ್ನು ಇಡುವ ಕುರಿತು ಸಂಘಟಕರು ಒಪ್ಪಿಗೆ ನೀಡಿದ್ದಾರೆಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಾಹಿತಿ ಡಾ|| ಮಹಾಂತೇಶ ಮಲ್ಲನಬಗೌಡರ, ಸಾಹಿತ್ಯ, ವಕೀಲಿ ವೃತ್ತಿಗೆ ದೊಡ್ಡ ಕೊಡುಗೆ ನೀಡಿರುವ ಅವರು, ನೇರ ನಿಷ್ಠುರವಾದಿಯಾಗಿದ್ದು, ಆ ಕಾರಣಕ್ಕೆ ಅವರನ್ನು ಸದಾ ದೂರ ಇಡಲಾಗಿತ್ತು, ಅವರ ಸೇವೆ ಅಜರಾಮರ, ಅವರ ಕುಟುಂಬವೇ ಸಾಹಿತ್ಯದ ದೊಡ್ಡ ಕೊಡುಗೆ ಎಂದ ಅವರು ಜಿಲ್ಲೆಯಲ್ಲಿ ಅವರ ಕುರಿತು ಸಾಕಷ್ಟು ವಿಚಾರ ಸಂಕಿರಣಗಳು ನಡೆಯಬೇಕು ಎಂದರು.  ಈ ಸಂದರ್ಭದಲ್ಲಿ ವಿರೇಶ ಮಹಾಂತಯ್ಯನಮಠ, ಶಿವಾನಂದ ಹೊದ್ಲೂರ, ಸಿದ್ದಪ್ಪ ಹಂಚಿನಾಳ ಮಾತನಾಡಿದರು. ಸಭೆಯಲ್ಲಿ ಸದಾಶಿವಯ್ಯ ಹಿರೇಮಠ, ಶಬ್ಬೀರ ಸಿದ್ದಖಿ, ಬಸವರಾಜ ಕೊಪ್ಪಳ, ಅಜ್ಜಪ್ಪ ಚನ್ನವಡಿಯರಮಠ, ಎಂ.ಡಿ.ಹಸೇನ, ಅಮರೇಶ ಕೊಪ್ಪರದ ಇನ್ನು ಅನೇಕರಿದ್ದರು.
Please follow and like us:
error