You are here
Home > Koppal News > ಚುನಾವಣೆಯಲ್ಲಿ ಅಳಿಸಲಾಗದ ಶಾಹಿ ಬಳಕೆಗೆ ಮನವಿ

ಚುನಾವಣೆಯಲ್ಲಿ ಅಳಿಸಲಾಗದ ಶಾಹಿ ಬಳಕೆಗೆ ಮನವಿ

ಕೊಪ್ಪಳ: ಜುಲೈ ೨೨ರಂದು ಜರುಗುವ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಬಳಸಿ ಚುನಾವಣೆಗಳನ್ನು ನಿಷಪಕ್ಷಪಾತವಾಗಿ ನಡೆಯುವಂತೆ ಮಾಡಲು ನಿಯೋಜಿತ ಅಭ್ಯರ್ಥಿ ಬೀರಪ್ಪ ಅಂಡಗಿ ಚಿಲವಾಡಗಿರವರು ಜಿಲ್ಲಾಧಿಕಾರಿಗಳಿಗೆ,ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ, ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಗಂಗಾಧರ ಕಾತರಕಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ, ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರಡ್ಡಿ,ಪ್ರಧಾನ ಕಾರ್ಯದರ್ಶಿ ನಾಗಪ್ಪ ಕಾತರಕಿ ಮುಂತಾದವರು ಹಾಜರಿದ್ದರು.

Leave a Reply

Top