ಕಬ್ಬರಗಿ ಗ್ರಾ.ಪಂ ಚುನಾವಣೆ ಅಧಿಸೂಚನೆ.

ಕೊಪ್ಪಳ, ಅ.೨೮ (ಕ ವಾ) ಅವಧಿ ಮುಕ್ತಾಯಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿಯ ಚುನಾವಣಾ ವೇಳಾಪಟ್ಟಿಯೊಂದಿಗೆ ಪ್ರಭಾರಿ ಜಿಲ್ಲಾಧಿಕಾರಿ ಡಾ||ಜಿ.ಎಲ್.ಪ್ರವೀಣಕುಮಾರ ಅವರು ಅಧಿಸೂಚನೆ ಹೊರಡಿಸಿದ್ದಾರೆ.
     ೧೯೯೩ ರ ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮದ ಉಪನಿಬಂಧಗಳ ಮೇರೆಗೆ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯಿತಿಯ ಪದಾವಧಿಯು ಮುಕ್ತಾಯವಾದ ಹಿನ್ನೆಲೆಯಲ್ಲಿ ತೆರವಾಗುವ ಒಟ್ಟು ೧೯ ಸದಸ್ಯ ಸ್ಥಾನಗಳನ್ನು ತುಂಬಲು,  ಚುನಾವಣೆ ನಡೆಯಲಿದೆ.  ಕಬ್ಬರಗಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಮೀಸಲಾತಿ ವಿವರ ಇಂತಿದೆ. ಕಬ್ಬರಗಿ-೦೧ ರಲ್ಲಿ ೦೪ ಸ್ಥಾನಗಳಿದ್ದು ಹಿಂ. ವರ್ಗ-ಅ, ಹಿಂ.ವರ್ಗ-ಬ, ಸಾಮಾನ್ಯ (ಮ) ಮತ್ತು ಸಾಮಾನ್ಯ.  ಕಬ್ಬರಗಿ-೦೨ ರಲ್ಲಿ ೦೨ ಸ್ಥಾನಗಳಿದ್ದು, ಪ.ಜಾತಿ ಮತ್ತು ಸಾಮಾನ್ಯ (ಮ). ಕಬ್ಬರಗಿ-೦೩ ರಲ್ಲಿ ೦೨ ಸ್ಥಾನಗಳಿದ್ದು, ಪ.ಪಂಗಡ(ಮ) ಮತ್ತು ಸಾಮನ್ಯ.  ಸೇಬಿನಕಟ್ಟೆಯಲ್ಲಿ ೦೩ ಸ್ಥಾನಗಳಿದ್ದು ಹಿಂ.ವರ್ಗ-ಅ(ಮ), ಸಾಮಾನ್ಯ(ಮ) ಮತ್ತು ಸಾಮಾನ್ಯ. ಬೀಳಗಿಯಲ್ಲಿ ೦೨ ಸ್ಥಾನಗಳಿದ್ದು, ಪ.ಪಂಗಡ(ಮ) ಮತ್ತು ಸಾಮಾನ್ಯ.  ಮನ್ನೇರಾಳ-೦೧ ರಲ್ಲಿ ೦೩ ಸ್ಥಾನಗಳಿದ್ದು ಪ.ಜಾತಿ(ಮ), ಹಿಂ.ವರ್ಗ-ಅ(ಮ) ಮತ್ತು ಸಾಮಾನ್ಯ. ಮನ್ನೇರಾಳ ಕ್ಷೇತ್ರ ಸಂಖ್ಯೆ ೦೨ ರಲ್ಲಿ ೦೩ ಸ್ಥಾನಗಳಿದ್ದು ಪ.ಪಂಗಡ, ಸಾಮಾನ್ಯ(ಮ) ಮತ್ತು ಸಾಮಾನ್ಯ(ಮ) ಮಿಸಲಾತಿ ನಿಗದಿಪಡಿಸಲಾಗಿದೆ.   
    ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ ೦೪ ಕೊನೆ ದಿನಾಂಕವಾಗಿದೆ. ನ.೦೫ ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ನ.೦೭ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕಡೆ ದಿನಾಂಕವಾಗಿದ್ದು, ನ.೧೫ ರಂದು ಮತದಾನ ನಡೆಯಲಿದೆ. ಒಟ್ಟಾರೆ ನ.೧೮ ರೊಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Leave a Reply