ಹಿಂದುಳಿದ ವರ್ಗದವರಿಗೆ ವಿವಿಧ ಯೋಜನೆಗಳು : ಅರ್ಜಿ ಆಹ್ವಾನ

  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗೆ ಮತ್ತು ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಗಂಗಾಕಲ್ಯಾಣ ನೀರಾವರಿ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಸೇರಿದಂತೆ ನಿಗಮದ ವಿವಿಧ ಯೋಜನೆಗಳಲ್ಲಿ ಅರ್ಹ ಹಿಂದುಳಿದ ವರ್ಗಗಳ ಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
೨೦೧೩-೧೪ನೇ ಸಾಲಿನಲ್ಲಿ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರಿಗೆ ಸೌಲಭ್ಯ ದೊರೆಯದಿದ್ದಲ್ಲಿ ಪುನಃ ಅರ್ಜಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನೆ ಪರಿಗಣಿಸಲಾಗುವುದು. ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 
ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಅದರ ಉಪ ಸಮುದಾಯಗಳನ್ನು ಹೊರತುಪಡಿಸಿ) ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.೪೦,೦೦೦/-ಗಳು ಪಟ್ಟಣ ಪ್ರದೇಶದವರಿಗೆ ರೂ.೫೫,೦೦೦/-ಗಳ ಒಳಗಿರಬೇಕು, ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.೮೧,೦೦೦/-ಗಳು ಪಟ್ಟಣ ಪ್ರದೇಶದವರಿಗೆ ರೂ.೧,೦೩,೦೦೦/-ಗಳು. ಹಾಗೂ ಅರ್ಜಿದಾರರ ವಯಸ್ಸು ೧೮ ರಿಂದ ೫೫ ವರ್ಷಗಳ ಮಿತಿಯಲ್ಲಿರಬೇಕು. 
ಚೈತನ್ಯ ಸಬ್ಸಿಡಿ ಕಂ ಸಾಫ್ಟ್‌ಲೋನ್ ಯೋಜನೆ : ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಟ ರೂ.೫.೦೦ ಲಕ್ಷಗಳವರೆಗೆ ಸಾಲ ಹಾಗೂ ನಿಗಮದಿಂದ ಶೇ೨೦ರಷ್ಟು ಗರಿಷ್ಠ ರೂ.೧.೦೦ಲಕ್ಷಗಳ ಶೇಕಡ ೪ರ ಬಡ್ಡಿದರದಲ್ಲಿ ಮಾರ್ಜಿನ್ ಹಣ. ರೂ.೧.೦೦ ಲಕ್ಷಕ್ಕಿಂತ ಕಡಿಮೆ ಇರುವ ಸಾಲಕ್ಕೆ ಶೇ.೩೦ರಷ್ಟು, ಅಥವಾ ಗರಿಷ್ಟ ರೂ. ೧೦,೦೦೦/-ಗಳ ಸಹಾಯಧನ (ಸಬ್ಸಿಡಿ). 
ಅರಿವು-ಶೈಕ್ಷಣಿಕ ನೇರ ಸಾಲ ಯೋಜನೆ : ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.೩.೫೦ಲಕ್ಷಗಳ ಮಿತಿಯಲ್ಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ.) ಪ್ರವೇಶ ಪಡೆದು,(೧) ಬಿ.ಇ.(ಸಿ.ಇ.ಟಿ), (೨) ಎಂ.ಬಿ.ಬಿ.ಎಸ್., (೩) ಬಿ.ಯೂ.ಎಂ.ಎಸ್., (೪) ಬಿ.ಡಿ.ಎಸ್. (೫) ಬಿ.ಎ.ಎಂ.ಎಸ್. (೬) ಬಿ.ಎಚ್.ಎಂ.ಎಸ್. (೭) ಎಂ.ಬಿ.ಎ. (೮) ಎಂ.ಟೆಕ್. (೯) ಎಂ.ಇ., (೧೦) ಎಂ.ಡಿ., (೧೧) ಪಿ.ಹೆಚ್‌ಡಿ. (೧೨) ಬಿ.ಸಿ.ಎ./ಎಂ.ಸಿ.ಎ (೧೩) ಎಂ.ಎಸ್.ಆಗ್ರ್ರಿಕಲ್ಚರ್ (೧೪)ಬಿ.ಎಸ್.ಸಿ. ನರ್ಸಿಂಗ್, (೧೫)ಬಿ.ಫಾರಂ/ಎಂ.ಫಾರಂ (೧೬) ಬಿ.ಎಸ್.ಸಿ. ಪ್ಯಾರಾ ಮೆಡಿಕಲ್ (೧೭) ಬಿ.ಎಸ್.ಸಿ. ಬಯೋ ಟೆಕ್ನಾಲಜಿ (೧೮) ಬಿ.ಟೆಕ್ (೧೯) ಬಿ.ಪಿ.ಟಿ. (೨೦) ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (೨೧)ಬಿ.ಎನ್.ಎಂ. (೨೨)ಬಿ.ಹೆಚ್.ಎಮ್. (೨೩)ಎಂ.ಡಿ.ಎಸ್. (೨೪) ಎಂ.ಎಸ್.ಡಬ್ಲ್ಯೂ (೨೫) ಎಲ್.ಎಲ್.ಎಂ. (೨೬)ಎಂ.ಎಫ್.ಎ. (೨೭) ಎಂ.ಎಸ್.ಸಿ. ಬಯೋ ಟೆಕ್ನಾಲಜಿ ಮತ್ತು (೨೮) ಎಂ.ಎಸ್.ಸಿ.(ಎ.ಜಿ.) ಕೋರ್ಸ್‌ಗಳಲ್ಲಿ ಉಚಿತ ಸೀಟ್ ಪಡೆದು ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಅವಧಿಗೆ ಶೇಕಡ ೨ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ ೧.೦೦ಲಕ್ಷಗಳ ವರೆಗೆ ಸಾಲ.
ಕಿರುಸಾಲ ಯೋಜನೆಯಲ್ಲಿ ಸೌಲಭ್ಯ : ಸ್ವ ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ, ಹಣ್ಣು, ತರಕಾರಿ ಮಾರುವವರು, ಹಾಲು ಮಾರುವವರು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇಕಡ ೪ರ ಬಡ್ಡಿ ದರದಲ್ಲಿ ಗರಿಷ್ಠ ರೂ. ೧೦೦೦೦ಸಾಲ ಹಾಗೂ ರೂ.೫೦೦೦/-ಗಳ ಸಹಾಯಧನ. ಅರ್ಜಿದಾರರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಚೈತನ್ಯ ಸ್ವಯಂ ಉದ್ಯೋಗ ನೇರಸಾಲ ಯೋಜನೆ : ಹಿಂದುಳಿದ ವರ್ಗಗಳ ಜನರು  ಸ್ವಯಂ ಉದ್ಯೋಗಕ್ಕೆ ಆರ್ಥಿಕೆ ಚಟುವಟಿಕೆ ಕೈಗೊಳ್ಳಲು ವಾರ್ಷಿಕ ಶೇ೪ರ ಬಡ್ಡಿದರದಲ್ಲಿ ರೂ.೪೦,೦೦೦/-ಸಾಲ ಮತ್ತು ಶೇ.೩೦ರಷ್ಟು ಅಥವಾ ಗರಿಷ್ಠ ರೂ.೧೦,೦೦೦/-ಗಳ ಸಹಾಯಧನ.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಸೌಲಭ್ಯದ ಯೋಜನೆಯ ಸೌಲಭ್ಯ ಪಡೆಯಲು : ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವಾರ್ಷಿಕ ಶೇ.೪ ಬಡ್ಡಿದರದಲ್ಲಿ ಗರಿಷ್ಠ ರೂ.೪೫೦೦೦/-ಗಳವರೆಗೆ ಸಾಲ ಹಾಗೂ ಗರಿಷ್ಠ ರೂ.೫೦೦೦/-ಗಳ ಸಹಾಯಧನ(ವಿಶ್ವಕರ್ಮ ಮತ್ತು ಅದರ ಉಪ ಪಂಗಡಗಳು ಕೈಗೊಳ್ಳುವ ಪಂಚವೃತ್ತಿಗಳಿಗೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕವಾಗಿ ಸೌಲಭ್ಯ ಒದಗಿಸುವುದರಿಂದ ಈ ವೃತ್ತಿದಾರರ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ)
ಕುಂಬಾರಿಕೆ ಅಭಿವೃದ್ದಿ ಯೋಜನೆ : ಕುಂಬಾರಿಕೆ ವೃತ್ತಿ ಅಭಿವೃದ್ದಿಗಾಗಿ ಆಧುನಿಕ ಉಪಕರಣಗಳನ್ನು ಕೊಳ್ಳಲು, ದುಡಿಮೆ ಬಂಡವಾಳಕ್ಕಾಗಿ ಶೇಕಡ ೪ರ ಬಡ್ಡಿದರದಲ್ಲಿ ಗರಿಷ್ಠ ರೂ.೨೫೦೦೦/-ಗಳ ಸಾಲ ಹಾಗೂ ರೂ.೫,೦೦೦/-ಗಳ ಸಹಾಯಧನ.
ಗಂಗಾ-ಕಲ್ಯಾಣ ಯೋಜನೆ : ವೈಯಕ್ತಿಕ ಕೊಳವೆಬಾವಿ ಯೋಜನೆ : ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಘಟಕ ವೆಚ್ಚ ರೂ.೨.೦೦ಲಕ್ಷಗಳಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್ಟು ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸುವುದು. ರೂ.೨.೦೦ಲಕ್ಷ ಗಳಲ್ಲಿ ರೂ.೧.೫೦/-ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ರೂ.೫೦,೦೦೦/-ಗಳ ಸಾಲ ಶೇ.೪ರ ಬಡ್ಡಿದರ. 
ಸಾಮೂಹಿಕ ನೀರಾವರಿ ಯೋಜನೆ : ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಕನಿಷ್ಠ ೩ ಜನರು ಹೊಂದಿರುವ ೮ ರಿಂದ ೧೫ ಎಕರೆ ಜಮೀನಿಗೆ ೦೨ ಕೊಳವೆ ಬಾವಿ, ೧೫ ಎಕರೆಗಿಂತ ಹೆಚ್ಚಿನ ಜಮೀನಿಗೆ ೦೩ ಕೊಳವೆಬಾವಿ ಕೊರೆಯಿಸಿ ಪಂಪ್ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರದ ಬಾವಿಗಳ ಮಂಜೂರು. ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ :  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್‌ಡಾಕ್ರ್ಟಲ್, ಪಿ.ಹೆಚ್.ಡಿ., ಮಾಸ್ಟರ್ ಡಿಗ್ರಿ, ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.೩.೫೦ಲಕ್ಷಗಳಂತೆ, ೦೩ ವರ್ಷಗಳ ಕೋರ್ಸ್‌ನ ಅವಧಿಗೆ,  ಗರಿಷ್ಠ ರೂ.೧೦.೦೦ಲಕ್ಷಗಳ ಬಡ್ಡಿರಹಿತ ಸಾಲ ಮಂಜೂರು ಮಾಡಲಾಗುವುದು. ಅರ್ಜಿದಾರರು ಗರಿಷ್ಠ ೩೫ ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ.೧.೪೪ಲಕ್ಷಗಳನ್ನು ಮೀರಿರಬಾರದು ಹಾಗೂ ಶೇ.೬೦ಕಿಂತ ಹೆಚ್ಚಿನ ಅಂಕಗಳಿಸಿರಬೇಕು.
ಕುರಿ ಸಾಕಾಣಿಕೆ/ಕಂಬಳಿ ನೇಕಾರಿಕೆ ಮಾಡುವ ಕುರುಬದವರಿಗೆ ಆರ್ಥಿಕ ನೆರವು ಯೋಜನೆ : ಕುರಿ ಸಾಕಾಣಿಕೆ ಅಥವಾ ಕಂಬಳಿ ನೇಕಾರಿಕೆಯನ್ನು ಮುಖ್ಯಕಸುಬುನ್ನಾಗಿ ನಿರ್ವಹಿಸುವ ಕುರುಬ ಸಮಾಜದವರಿಗೆ ಕುರಿಗಳನ್ನು ಕೊಂಡುಕೊಳ್ಳಲು ಅಥವಾ ಕಂಬಳಿ ನೇಕಾರಿಕೆ ವೃತ್ತಿಗೆ ವಾರ್ಷಿಕ ಶೇ.೪ರ ಬಡ್ಡಿದರದಲ್ಲಿ ಗರಿಷ್ಠ ರೂ.೧.೦೦ಲಕ್ಷಗಳ ವರೆಗೆ ಸಾಲ, ಈ ಮೊತ್ತದಲ್ಲಿ ರೂ.೧೦೦೦೦/-ಗಳ ಸಹಾಯಧನ.
ಕಳ್ಳಭಟ್ಟಿ ಮತ್ತು ಅಕ್ರಮ ಮಧ್ಯತಯಾರಿಕೆಯಲ್ಲಿ ತೊಡಗಿದ್ದು, ಸಂತ್ರಸ್ಥರಾದವರಿಗೆ ಪುನರ್ವಸತಿ ಸಾಲ ಯೋಜನೆ : ಕಳ್ಳಭಟ್ಟಿ ಮತ್ತು ಅಕ್ರಮ ಮದ್ಯ ತಯಾರಿಕೆಯಲ್ಲಿ ತೊಡಗಿದ್ದ ಹಿಂದುಳಿದ ವರ್ಗಗಳ ಸಂತ್ರಸ್ಥರಿಗೆ ಪುನರ್ವಸತಿಗೆ ಅವರು ಸ್ವಯಂ ಉದ್ಯೋಗ ಕೈಗೊಳ್ಳಲು ನಿರ್ವಹಿಸುವ ಚಟುವಟಿಕೆ ಅನುಸಾರ ನಿಗಮದ ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಲ್ಲಿ ವಾರ್ಷಿಕ ಶೇ.೪ರ ಬಡ್ಡಿದರದಲ್ಲಿ ಗರಿಷ್ಠ ರೂ.೪೦೦೦೦/-ಗಳ ಸಾಲ ಹಾಗೂ ಶೇ.೩೦ರಷ್ಟು ಅಥವಾ ಗರಿಷ್ಠ ರೂ.೧೦೦೦೦/-ಗಳ ಸಹಾಯಧನ. 
ಅವಧಿಸಾಲ ಯೋಜನೆಗಳು: ಕೃಷಿವಲಯ, ಸಣ್ಣ ವ್ಯಾಪಾರ, ಸೇವಾ ವಲಯ, ಸಾರಿಗೆ ವಲಯದಲ್ಲಿ ಆಟೋರಿಕ್ಷ/ಗೂಡ್ಸ್ ಆಟೋರಿಕ್ಷ, ನ್ಯೂ ಸ್ವರ್ಣಿಮಾ, ಮೈಕ್ರೋ ಫೈನಾನ್ಸ್ ವಲಯಗಳಲ್ಲಿ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆಯಾ ವಲಯದ ಅನುಮೋದಿತ ಘಟಕ ವೆಚ್ಚದ ಮಿತಿಗೊಳಪಟ್ಟು ಗರಿಷ್ಠ ರೂ.೫.೦೦ಲಕ್ಷ ಗಳವರೆಗೆ ವಾರ್ಷಿಕ ಶೇಕಡ ೪ ರಿಂದ ೬ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗವುದು. 
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ: ಇಂಜಿನಿಯರಿಂಗ್, ಮೆಡಿಕಲ್, ವೆಟರ್ನರಿ, ಕಾನೂನು, ಐ.ಸಿ.ಡಬೂ.ಎ, ಸಿ.ಎ, ಹೋಟೆಲ್ ಮ್ಯಾನೇಜ್‌ಮೆಂಟ್ ಇತ್ಯಾದಿ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ವಾರ್ಷಿಕ ರೂ.೨.೫೦ ಲಕ್ಷ ಅಥವಾ ಕೋರ್ಸ್‌ನ ಅವಧಿಗೆ ಒಟ್ಟು ರೂ.೧೦.೦೦ ಲಕ್ಷ ಸಾಲ ಮಂಜೂರು. ಶೇ. ೪ರ ಬಡ್ಡಿ ದರ. ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಅವಧಿಗೆ ರೂ.೨೦.೦೦ ಲಕ್ಷ ಸಾಲ ಶೇ. ೪ರ ಬಡ್ಡಿದರ.  ಸ್ವಯಂ ಸಕ್ಷಮ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ಲಿನಿಕ್ ಸ್ಥಾಪಿಸಲು ವಕೀಲ ವೃತ್ತಿ ಆರಂಭಿಸಲು ಮೆಡಿಕಲ್ ಸ್ಟೋರ್ ಪ್ರಾರಂಭಿಸಲು ಇತ್ಯಾದಿ ಸ್ವಯಂ ಉದ್ಯೋಗ ಕೈಗೊಳ್ಳಲು ರೂ.೧೦.೦೦ ಲಕ್ಷಗಳವರೆಗೆ ಸಾಲ ಗರಿಷ್ಠ ಬಡ್ಡಿ ಶೇ.೬ ರಿಂದ ೮. 
ಮಹಿಳಾ ಸಮೃದ್ಧಿ  ಹಾಗೂ (ಎಸ್.ಹೆಚ್.ಜಿ.ಗಳ ಮೂಲಕ, ಮಹಿಳೆಯರಿಗಾಗಿ): ಹಿಂದುಳಿದ ವರ್ಗಗಳ ಮಹಿಳಾ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.೨೫,೦೦೦/-ಗಳ ಸಾಲ ಶೇ. ೫ರ ಬಡ್ಡಿ ದರ.
ಮೈಕ್ರೋ ಫೈನಾನ್ಸ್ ಸಾಲ ಯೋಜನೆ: ಹಿಂದುಳಿದ ವರ್ಗಗಳ ಸ್ವ ಸಹಾಯ ಗುಂಪುಗಳು/ಸ್ತ್ರೀ ಶಕ್ತಿ/ಪುರುಷ ಗುಂಪುಗಳು, ಸ್ವ ಶಕ್ತಿ ಗುಂಪುಗಳ ಮೂಲಕ ಆದಾಯ ತರುವಂತಹ ಆರ್ಥಿಕ ಉದ್ದೇಶಗಳಿಗೆ, ಘಟಕ ವೆಚ್ಚ ಆಧರಿಸಿ ಗರಿಷ್ಠ ಪ್ರತಿ ಫಲಾನುಭವಿಗೆ ರೂ.೨೫,೦೦೦/-ಗಳ ಸಾಲ ಶೇ. ೫ರ ಬಡ್ಡಿ ದರ.
ಈ  ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದವರು ವಾಸಿಸುತ್ತಿರುವ ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ನಿಗದಿಪಡಿಸಿದ ಉಚಿತ ಅರ್ಜಿಗಳನ್ನು ಜುಲೈ-೧೯ ರೊಳಗಾಗಿ ಸಲ್ಲಿಸಬಹುದಾಗಿದೆ.  
 ಹೆಚ್ಚಿನ ಮಾಹಿತಿಗಾಗಿ ಡಿ.ದೇವರಾಜ ಅರಸ ಅಭಿವೃದ್ದಿ ನಿಗಮ, ಜಿಲ್ಲಾಡಳಿತ ಭವನ ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೨೧೮೪೭ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Related posts

Leave a Comment