ಆತ್ಮಸ್ಥೈರ್ಯದಿಂದ ಆತ್ಮಹತ್ಯೆ ತಡೆಗಟ್ಟಬಹುದು : ಡಾ|| ಕೃಷ್ಣಾ.ವಿ. ಓಂಕಾರ

 ಆತ್ಮಹತ್ಯೆಗೆ ಮುಖ್ಯವಾಗಿ ಖಿನ್ನತೆ ಮುಖ್ಯ ಕಾರಣವಾಗಿದ್ದು, ಆತ್ಮಸ್ಥೈರ್ಯದಿಂದ ಆತ್ಮಹತ್ಯೆ ತಡೆಗಟ್ಟಬಹುದಾಗಿದೆ ಎಂದು ಮನೋರೋಗ ವೈದ್ಯರಾದ ಡಾ|| ಕೃಷ್ಣಾ.ವಿ.ಓಂಕಾರ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ವಿಶ್ವದಾದ್ಯಂತ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.  
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಂಡವರು ಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆಯಿಂದ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಖಿನ್ನತೆ ಎಂಬ ರೋಗ ಇದು ವಾಸಿಯಾಗುವ ಖಾಯಿಲೆ. ಚಿಕಿತ್ಸೆಯಿಂದಾಗಲಿ ಅಥವಾ ಮಾನಸಿಕವಾಗಿ ದೈರ್ಯ ತುಂಬಿದಲ್ಲಿ ಈ ಖಾಯಿಲೆ ವಾಸಿಯಾಗುತ್ತದೆ. ಈ ಅರಿವು ಇಲ್ಲದ ಕಾರಣ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು  ಮನೋರೋಗ ವೈದ್ಯರಾದ ಡಾ|| ಕೃಷ್ಣಾ.ವಿ.ಓಂಕಾರ ಅವರು ಹೇಳಿದರು. 
ನಂತರ ಜಿಲ್ಲಾಸ್ಪತ್ರೆಯ ಮನೋ ಸಮಾಜಿಕ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅನೀಲ್ ಕೆ.ಹಳ್ಳಿಯವರು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಖಿನ್ನತೆ ಒಂದು ಜಾಗತೀಕ ಬಿಕ್ಕಟ್ಟು ಮಿಲಿಯನ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಖಿನ್ನತೆಯು ಜೀವಿತಾವಧಿಯಲ್ಲಿ ಏಳರಲ್ಲಿ ಒಬ್ಬರಿಗೆ ಬರಬಹುದು, ಇದೊಂದು ದೀರ್ಘಕಾಲಿಕ ಹಾಗೂ ಮರುಕಳಿಸುವ ಕಾಯಿಲೆ ಎಂದು ತಿಳಿಸಿದ ಅವರು, ಖಿನ್ನತೆಯಿಂದ ಝರ್ಜುರಿತನಾದ ವ್ಯಕ್ತಿ ಆದ್ದರಿಂದ ಹೊರಗೆ ಬಾರದೆ ಸಾವು ಒಂದೇ ಪರಿಹಾರ ಎಂದು ಆತ್ಮಹತ್ಯೆಗೆ ಶರಣಾಗುತ್ತಾನೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವುದು ಅತೀ ಅವಶ್ಯವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ಬಿ.ಎಸ್.ಲೋಕೇಶ ಅವರು ವಹಿಸಿದ್ದರು.  ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಾರ್ವಜನಿಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
Please follow and like us:
error