You are here
Home > Koppal News > ರಕ್ತದಾನದಿಂದ ಜೀವ ಉಳಿಸುವಂತ ಪುಣ್ಯ ಸಿಗುತ್ತದೆ – ಕೆ. ಎಂ. ಸೈಯದ್.

ರಕ್ತದಾನದಿಂದ ಜೀವ ಉಳಿಸುವಂತ ಪುಣ್ಯ ಸಿಗುತ್ತದೆ – ಕೆ. ಎಂ. ಸೈಯದ್.

ಕೊಪ್ಪಳ, ಡಿ.20- ರಕ್ತದಾನ ಶ್ರೇಷ್ಠವಾದ ದಾನ ರಕ್ತ ದಾನದಿಂದ ಜೀವ ಉಳಿಸುವಂತ ಪುಣ್ಯ ಸಿಗುತ್ತದೆ.
ರಕ್ತ ದಾನ ಮಾಡುವುದು, ಶಿಬಿರ ಏರ್ಪಡಿಸುವುದು ಉತ್ತಮ ಕೆಲಸವಾಗಿದೆ ಇಂತಹ ಸಾಮಾಜಿಕ
ಕಾರ್ಯಚಟುವಟಿಕೆಯಲ್ಲಿ ಯುವಕರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಾಜ
ಸೇವಾ ಕಾರ್ಯ ಮಾಡುವಲ್ಲಿ ಮುಂದಾಗಬೇಕೆಂದು ಸೈಯದ್ ಪೌಂಡೇಶನ ಅಧ್ಯಕ್ಷ ಹಾಗೂ ಕಾಂಗ್ರೇಸ್
ಮುಖಂಡ ಕೆ. ಎಂ. ಸೈಯದ್ ಹೇಳಿದರು. ಅವರು  ನಗರದ ಪಂಜುಮ ಪಲ್ಟನ್ ಓಣಿಯ ಹಜರತ್ ಪೀರಪಾಶಾ
ಖಾದ್ರಿ ಮಸಿದಿ ಆವರಣದಲ್ಲಿ ಶನಿವಾರ ಮಹ್ಮದ ಪೈಗಂಬರ್ (ಸ) ಜಷ್ನೆ ಈದ್ ಮಿಲಾದ್ ಹಬ್ಬದ
ಪೈಗಂಬರ ಜಯಂತಿ ಪ್ರಯುಕ್ತ ಮುಸ್ಲಿಂ ಯುವ ಸಂಘಟನೆಯ ಪ್ರತಿಯಿಂದ ಪ್ರಥಮ ಬಾರಿಗೆ 
ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು. ಪ್ರಥಮ
ಬಾರಿಗೆ ಜರುಗಿದ ಕೊಪ್ಪಳ ಯುವ-ಯುವಕ ಸಂಘದ ವತಿಯಿಂದ ಜರುಗಿದ ರಕ್ತದಾನ ಶಿಭಿರದಲ್ಲಿ
ನೂರಾರು ಜನ ಯುವಕರು ಸೇರಿ ರಕ್ತ ದಾನ ಮಾಡುವುದರ ಮೂಲಕ ಈ ಕಾರ್ಯಕ್ರಮ
ಯಶಸ್ವಿಗೊಳಿಸಿದಕ್ಕೆ ಕೆ.ಎಂ.ಸೈಯದ್ ಅಭಿನಂದಿಸಿದರು.  ಸಮಾರಂಭದಲ್ಲಿ ಜಿಲ್ಲಾ
ಕಾಂಗ್ರೇಸ್ ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಸೈಯದ್ ಜುಲ್ ಖಾದರ ಖಾದ್ರಿ, ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿಸದಸ್ಯ ಅಮಜದ್ ಪಟೇಲ್,
ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಬಿ ನಾಗರಳ್ಳಿ, ಅಂಜೂಮನ ಕಮಿಟಿ ಅದ್ಯಕ್ಷ ಎಂ. ಪಾಷಾ
ಕಾಟನ್, ಗೌಸಸಾಬ್ ಸರದಾರ ಅಪ್ಸರ ಸಾಬ್, ಎಂ. ಪಾಷಾ ಮಾನ್ವಿ ಸೇರಿದಂತೆ ಅನೇಕ ಜನ
ಪಾಲ್ಗೊಂಡು ಕೊಪ್ಪಳ ಯುವಕ ಸಂಘದ ವತಿಯಿಂದ ಪ್ರಥಮ ಬಾರಿಗೆ ಮಸಿದಿ ಆವರಣದಲ್ಲಿ ಜರುಗಿದ
ರಕ್ತದಾನ ಶಿಬಿರದ ಕಾರ್ಯಕ್ರಮಕ್ಕೆ ಅಪಾರ ಮೆಚ್ಚಿಗೆ ವ್ಯಕ್ತಪಡಿಸಿ ಯುವಕರಿಗೆ
ಪ್ರಶಂಸಿದರು.

Leave a Reply

Top