fbpx

ಟಿಯುಸಿಐ ಅನಿರ್ಧಿಷ್ಟ ಧರಣಿ ಮುಷ್ಕರ ಹಿಂದಕ್ಕೆ

ಟಿಯುಸಿಐ ಸಂಯೋಜಿತ ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘ ಮಾರ್ಚ್ ೧೧,೨೦೧೫ ರಿಂದ ನಡೆಸಿದ್ದ ಮುಷ್ಕರದ ಕಾರ್ಮಿಕರ ಬೇಡಿಕೆಗಳ ಕುರಿತಾದ ಆಡಳಿತ ವರ್ಗ ಹಾಗೂ ಸಂಘದ ಉಭಯ ಪಕ್ಷಗಾರರ ಮಾತುಕತೆ ನಿನ್ನೆ ೧೮-೩-೨೦೧೫ ರಂದು ಸಫಲವಾಗಿದ್ದಕ್ಕಾಗಿ, ಅನಿರ್ಧಿಷ್ಟ ಧರಣಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಯಿತು. ಮುನಿರಾಬಾದ್‌ನ ಕೇಂದ್ರ ಕಚೇರಿಯಲ್ಲಿ ಮುಖ್ಯ ಇಂಜಿನಿಯರ್ ಕರೆದ ಸಭೆಯ ಮಾತುಕತೆಯಲ್ಲಿ ಕೇಂದ್ರ ವಲಂiiದ ಮುಖ್ಯ ಇಂಜಿನಿಯರ್ ರಾದ ಮಲ್ಲಿಕಾರ್ಜುನ್ ಭೃಂಗಿ, ಮುನಿರಾಬಾದ್ ವೃತ್ತದ ಅಧೀಕ್ಷಕ ಇಂಜಿನಿಯರಾದ ಭೋಜನಾಯಕ ಕಟ್ಟಿಮನಿ, ಯರಮರಸ್ ವೃತ್ತದ ಅಧೀಕ್ಷಕ ಇಂಜಿನಿಯರಾದ ಶಿವಕುಮಾರ್, ಇವರನ್ನೊಳಗೊಂಡು ಮುನಿರಾಬಾದ್, ವಡ್ಡರಹಟ್ಟಿ, ಸಿಂಧನೂರು, ಸಿರವಾರ, ಯರಮರಸ್ ಹಾಗೂ ಬಳ್ಳಾರಿ ವಿಭಾಗಗಳ ಕಾರ್ಯಪಾಲಕ ಇಂಜಿನಿಯರ್ ಮತ್ತು ೨೩ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಇಂಜಿನಿಯರಗಳು, ಅಧಿಕಾರಿ ವರ್ಗದವರು ಭಾಗವಹಿಸಿದ್ದರು.
ಸಂಘದ ಪ್ರತಿನಿಧಿಗಳಾಗಿ ಟಿಯುಸಿಐ ರಾಜ್ಯಾಧ್ಯಕ್ಷರು ಹಾಗೂ ತು.ಭ,ನೀ.ಹಂ.ಕಾ.ಸಂಘದ ಅಧ್ಯಕ್ಷರಾದ ಆರ್.ಮಾನಸಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಟಿಯುಸಿಐ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋನಾಳ್, ಮುನಿರಾಬಾದ್ ಉಪವಿಭಾಗದ ಸಮಿತಿಯ ಗೌರವಾಧ್ಯಕ್ಷರಾದ ಎಂ.ಆರ್.ವೆಂಕಟೇಶ್, ವಡ್ಡರಹಟ್ಟ ಉಪವಿಭಾಗದ ಸದಸ್ಯರಾದ ಲೋಕೇಶ್ ನಾಯಕ ಹಾಗೂ ೨೩ ಉಪ ವಿಭಾಗಗಳ ತಲಾ ಒಬ್ಬರಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!