fbpx

ಕರ್ಕಿಹಳ್ಳಿ : ಮತದಾನ ಜಾಗೃತಿ ಜಾಥಾ ಯಶಸ್ವಿ

 ತಾಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದಿಂದ ರವಿವಾರದಂದು ಮತದಾನ ಜಾಗೃತಿ ಜಾಥಾವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಯಶಸ್ವಿಯಾಗಿ ಏರ್ಪಡಿಸಲಾಯಿತು.
ಜಾಥಾವು ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಸಂಚರಿಸಿ ಗ್ರಾಮದ ಪ್ರಮುಖ ಓಣಿಗಳ ಮೂಲಕ ಶ್ರೀ ಪತ್ರೇಶ್ವರ ದೇವಸ್ಥಾನದ ಮಾರ್ಗವಾಗಿ ಆಗಮಿಸಿ ಗ್ರಾಮಸ್ಥರಲ್ಲಿ ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೇ ನಿರ್ಭಿತಿಯಿಂದ ಮತಚಲಾಯಿಸುವಂತೆ ಮತದಾನ ಜಾಗೃತಿ   ಮೂಡಿಸಲಾಯಿತು. 
ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೇಷಪ್ಪಯ್ಯ, ಪ್ರೌಢ ಶಾಲೆ ಶಿಕ್ಷಕರಾದ ನಿಂಗಪ್ಪ ಸದರಿ, ಆರೋಗ್ಯ ಕಾರ್ಯಕರ್ತರಾದ ಪ್ರಭುರಾಜ ಬಡಿಗೇರ,  ಶ್ರೀ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ಅಧ್ಯಕ್ಷರಾದ ಪತ್ರೆಗೌಡ ಮಾ|ಪಾ|,

ಕಾರ್ಯದರ್ಶಿ ಹನುಮೇಶ ಬಡಿಗೇರ, ಸದಸ್ಯರಾದ ಪ್ರಕಾಶ ಕುಂಬಾರ, ಗವಿಸಿದ್ದಪ್ಪ ಕುಂಬಾರ, ದೇವಪ್ಪ ಕುಂಬಾರ, ಹನುಮೇಶ ಪೂಜಾರ, ಹನುಮಂತ ಡೊಪ್ಪಿ, ಪರಶುರಾಮ ಗೋದಿ, ಮಾರುತಿ ಕುಂಬಾರ, ಮಂಜುನಾಥ ಕುಂಬಾರ, ದಿ ಆರ್ಟ್ ಆಫ್ ಲಿವ್ಹಿಂಗ್‌ನ ಯುವಾಚಾರ್ಯರಾದ ಹನುಮಂತಪ್ಪ ಕಡ್ಲೇರ್, ಪ್ರಕಾಶ ಬಡಿಗೇರ, ಸೇರಿದಂತೆ ಅನೇಕ ಯುವಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error

Leave a Reply

error: Content is protected !!