ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗಳ ೪೭ನೇ ಪುಣ್ಯಾರಾಧನೆ.

ಕೊಪ್ಪಳ-25- ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ದಿನಾಂಕ: ೨೭-೦೯-೨೦೧೫ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗಳ ೪೭ನೇ ಪುಣ್ಯಸ್ಮರಣೆ ಕಾರ್ಯಕ್ರಮ ನೇರವೆರಲಿದ್ದು ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ ಇವರು ವಹಿಸುವರು, ಶ್ರೀ ವೇ.ಮೂ ಶಂಭುಲಿಂಗಯ್ಯನವರು ಜುಕ್ತಿಹಿರೇಮಠ ಸೂಡಿ ಇವರ  ವಿರಚಿತವಾದ ಕಲ್ಲೂರ ಬೃಹನ್ಮಠಾಧೀಶ ಲಿಂ.ಶ್ರಿ ವಿರೂಪಾಕ್ಷೇಶ್ವರ ಸ್ವಾಮಿಗಳ ಸುಪ್ರಬಾತ, ನೂರೆಂಟು ನಾಮಾವಳಿಗಳು ಹಾಗೂ ನೂರೊಂದು ಹಿತನುಡಿಗಳ ಕೃತಿ ಬಿಡುಗಡೆ. ಶ್ರೀ ಶಿವಲಿಂಗಪ್ಪ ಗುದುಮುರಗಿ ಹಾಗೂ ಸಂಗನಾಳ ಭರಮಪ್ಪ ಶಾಸ್ತ್ರೀಗಳು ಇವರಿಂದ ಪ್ರವಚನ ಜರುಗುವುದು, ಹಾಗೂ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮತ್ತು ಬಳಗೇರಿ ಕಳಕಯ್ಯ ಮಾಸ್ತರ ಇವರಿಂದ ಸಂಗೀತ ಸೇವೆ ಜರುಗುವುದು ಕಾರಣ ಸುತ್ತಮುತ್ತಲಿನ ಗ್ರಾಮದ ಭಕ್ತರು ಬಂದು ಈ ಕಾರ್ಯಕ್ರವನ್ನು ಯಶಸ್ವಿಗೊಳಿಸಬೇಕೆಂದು ಎಸ್.ಎಮ್.ಕಂಬಳಿಮಠ ರವರು ಪತ್ರೀಕಾ ತಿಳಿಸಿದ್ದಾರೆ.
Please follow and like us:
error