ಜೀವಸಂಕುಲದ ರಕ್ಷಣೆ ವನಸಿರಿಯಿಂದ ಸಾಧ್ಯ – ಕೃಷ್ಣ ಉದಪುಡಿ

ಕೊಪ್ಪಳ :  ಕೊಪ್ಪಳ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಏಕಲ್ ವಿದ್ಯಾಲಯ ಯೋಜನೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ   ಕೃಷ್ಣ ಉದಪುಡಿ ಮಾತನಾಡಿ ಸಸಿನೆಡಸುವ ಮೂಲಕ ಇಡೀ ಕೊಪ್ಪಳ ಜಿಲ್ಲೆಯಲ್ಲಿ ೨೫  ಲಕ್ಷ ಸಸಿಗಳನ್ನು ನೆಡುವ ಗುರಿಗಳನ್ನು ಹೊಂದಲಾಗಿದೆ. ಇದರಿಂದ ಜೀವ ಸಂಕುಲಗಳ ರಕ್ಷಣೆ ಸಾಧ್ಯವೆಂದು ಅಭಿಪ್ರಾಯಪಟ್ಟರು ಕೆರೆಹಳ್ಳಿ ಗ್ರಾಮದಿಂದಲೆ ಈ ಹಸಿರು ಕ್ರಾಂತಿಗೆ ಚಾಲನೆ ನಿಡಿದರು ಪ್ರತಿಯೊಂದು  ಮನೆಯಲ್ಲಿ  ಸಸಿ ನೆಡುವುದರ ಮೂಲಕ ಈ ಗ್ರಾಮವನ್ನು ಜಿಲ್ಲೆಲ್ಲಿಯೇ ಮಾದರಿ ಗ್ರಾಮವನ್ನು ಮಾಡಲು ಕರೆ ನಿಡಿದರು.   
ಈ ಕಾರ್ಯಕ್ರಮದಲ್ಲಿ ಏಕಲ್ ವಿದ್ಯಾಲಯದ ಗಿಣಗೇರಾ ಸಂಚ ಅಧ್ಯಕ್ಷರಾದ  ಗೋವಿಂದರಾಜ್ ಅವರು ಪ್ರಸ್ತಾವಿಕವಾಗಿ  ಮಾತನಾಡಿ ಏಕಲ್ ವಿದ್ಯಾಲಯದ ಪಂಚಮುಖಿ ಶಿಕ್ಷಣದ ಕುರಿತು ವಿವರಿಸುತ್ತಾ ನಮ್ಮ ಜಿಲ್ಲೆಯಲ್ಲಿ ಏಕಲ್ ವಿದ್ಯಾಲಯ ಯೋಜನೆ ೧೦ ವರ್ಷಗಳಿಂದಲೂ ಗ್ರಾಮದಲ್ಲಿ ಮಕ್ಕಳಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡುತ್ತಾ ಜೋತೆಗೆ ಪರಿಸರ ಪ್ರಜ್ಷೆ ನಿಡುವ ಸಲುವಾಗಿ ಮಗುವಿಗೊಂದು ಮರ ಊರಿಗೊಂದು ವನ ಅಭಿಯಾನವನ್ನು ಪ್ರಾರಂಭಿಸಿ   ಜಿಲ್ಲೆಯ ೧೨೦ ಗ್ರಾಮಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತೆವೆ. ಸಾಕ್ಷರ ಭಾರತ ಸ್ವಾಸ್ಥಭಾರತ,  ಸಮೃದ್ಧ ಭಾರತ, ಸಮರ್ಥ ಭಾರತ, ಎಂಬ ವಿವೇಕಾನಂದರ ಧ್ಯೆಯವನ್ನು ಕಾರ್ಯಗತಗೊಳಿಸಲು ದೆಶಾದ್ಯಂತ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಅವರು ವಿವರಿಸದರು.              
ಮುಖ್ಯ ಅತಿಥಿಗಳಾಗಿ ಮಾತನಾಡಿದ ಬಾಬು ಶೆಟ್ಟರ ಪರಿಸರ ಪ್ರೇಮಿಗಳು ಕೆರೆಹಳ್ಳಿ ಗ್ರಾಮವನ್ನು ಬೃಂದಾವನ ಗ್ರಾಮವನ್ನಾಗಿ ಮಾಡೋಣ ಎಂದು ಹೆಳುವುದರ ಮೂಲಕ ಇದಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಲು ವಿನಂತಿಸಿದರು. 
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಧರಣಿ ಪೈಪ್ ಇಂಡಸ್ಟ್ರೀಸ್ ಮಾಲಿಕರಾದ ಬಸವರಾಜ ಡಂಬಳ  ಯಶಸ್ವಿಗೆ ತನು. ಮನ ಧನ, ಸಹಕಾರ ನೀಡಿದ ಸಲುವಾಗಿ ಏಕಲ್ ವಿದ್ಯಾಲಯದ ವಿರುಪಾಕ್ಷ ಆಗೊಲಿ ಉತ್ತರ ಕರ್ನಾಟಕ ಪ್ರಶಿಕ್ಷಣ ಪ್ರಮುಖ ಅವರಿಗೆ ಅಭಿನಂದನೆ ತಿಳಿಸಿದರು. 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಕಲ್ ವಿದ್ಯಾಲಯದ ಗ್ರಾಮ ಸಮಿತಿ ಅಧ್ಯಕ್ಷರಾದ   ಸಿದ್ರಾಮಪ್ಪ ಬಟ್ಟರ ವಹಿಸಿದ್ದರು, ಶರಣಪ್ಪ ಹ್ಯಾಟಿ ಸಂಚ ಕಾರ್ಯದರ್ಶಿ, ಜಯಂತ ಪ್ರಗತಿಪರ ರೈತರು, ಯಮನೂರಪ್ಪ ಗ್ರಾ.ಪಂ ಸದಸ್ಯರು, ಮಲ್ಲಪ್ಪ ಎಮ್ ಗ್ರಾ.ಪಂ. ಸದಸ್ಯರು, ಏಕಲ್ ವಿದ್ಯಾಲಯದ ಮೌಲ್ಯಂಕನ ಪ್ರಮುಖ ಫಕೀರಪ್ಪ ಕೋರಿ, ಜಾಗರಣ ಪ್ರಮುಖ ಮಲ್ಲಪ್ಪ ಡೊಳ್ಳಿನ  ಅಚಾರ್ಯರಾದ ದೇವಮ್ಮ ಹಾಗೂ ಯುವಕ ಸಂಘದವರು ಮಹಿಳಾ ಸಮಿತಿಯವರು ವಿದ್ಯಾಲಯದ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ವಿರುಪಾಕ್ಷ  ದನಕನದೊಡ್ಡಿ, ವಂದನಾರ್ಪಣೆಯನ್ನು  ವಿಜಯಕುಮಾರ ಉತ್ತರ ಕರ್ನಾಟಕ ಮೌಲ್ಯಂಕನ ಪ್ರಮುಖರು ನಡೆಸಿದರು.    
Please follow and like us:
error

Related posts

Leave a Comment