ಬೂದಗುಂಪಾ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಅಮಾನತ್ತು

 ಗಂಗಾವತಿ ತಾಲೂಕಿನ ಬೂದಗುಂಪಾ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಪದವಿಧರೇತರ ಮುಖ್ಯೋಪಾಧ್ಯಾಯ ಕನಕಪ್ಪ ಇವರು ಸಮವಸ್ತ್ರ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
          ೨೦೧೩-೧೪ನೇ ಸಾಲಿನಲ್ಲಿ ಎಸ್.ಎಸ್.ಎ. ಯೋಜನೆಯಡಿಯಲ್ಲಿ ಮಕ್ಕಳ ಸಮವಸ್ತ್ರ ಪೂರೈಕೆಗಾಗಿ ಬಿಡುಗಡೆಯಾದ ಅನುದಾನ ರೂ.೭೮೮೦೦/- ಗಳನ್ನು ನಿಗದಿತ ಸಮವಸ್ತ್ರ ವಿತರಣೆಗೆ ನಿಗದಿತ ಸಮಯದೊಳಗೆ ವಿನಿಯೋಗಿಸದೇ ತಮ್ಮ ಸ್ವಂತಕ್ಕೆ ಬ್ಯಾಂಕಿನಿಂದ ಹಣ ಸೆಳೆದುಕೊಂಡಿರುವುದಾಗಿ, ಮತ್ತು ಎಸ್.ಡಿ.ಎಂ.ಸಿ. ಖಾತೆಯಲ್ಲಿದ್ದ ಹಣ ದುರುಪಯೋಗ ಪಡಿಸಿಕೊಂಡಿದ್ದು, ಸರ್ಕಾರಿ ಹಣ ದುರುಪಯೋಗ ಮಾಡಿರುವ ಪ್ರಯುಕ್ತ  ಕರ್ನಾಟಕ ಸರ್ಕಾರಿ ಸೇವಾ ನಿಯಮ ೧೯೫೭ ರ ನಿಯಮ ೧೦(೧) ಎ ರಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.  
Please follow and like us:
error