fbpx

ಅರವಿಂದ ಮಳೆಬೆನ್ನೂರ ಸಾವು ಸಮಾಜಕ್ಕೆ ಹಾನಿ ಭಾರದ್ವಾಜ.

ಕೊಪ್ಪಳ- 20- ಹೋರಾಟಗಾರರಿಗೆ ದೊಡ್ಡಶಕ್ತಿಯಾಗಿ ಸದಾ ದುಡಿಯುವ ವರ್ಗದ ಪರವಾಗಿ ಶ್ರಮಿಸುತ್ತಿದ್ದ ೮೯ ವಯಸ್ಸಿನ ಅರವಿಂದ ಮಳೆ ಬೆನ್ನೂರವರ ಸಾವು ಸಮಾಜಕ್ಕೆ ತುಂಬಿಬಾರದ ಹಾನಿಯುಂಟು ಮಾಡಿದೆಯೆಂದು ಪ್ರಗತಿಪರ ಸಂಘಟನೆಗಳ ಮುಖಂಡ ಭಾರದ್ವಾಜ ಹೇಳಿದರು.
    ತಹಶೀಲ ಕಛೇರಿಯ ಆವರಣದಲ್ಲಿ ಅಗಂನವಾಡಿ ಕಾರ್ಯಕರ್ತೆಯರ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಅರವಿಂದ ಮಳೆಬೆನ್ನೂರವರಿಗೆ ಸಂತಾಪ  ಸೂಚಕ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿದ ಬಳಿಕ ಮಾತನಾಡುತ್ತಾ ದೊಡ್ಡ ವಕೀಲರಾಗಿದ್ದ ಮಳೆಬೆನ್ನೂರ ಮನಸ್ಸು ಮಾಡಿದ್ದರೆ ಕೋಟಿಗಟ್ಟಲೆ ಸಂಪಾದಿಸಬಹುದಾಗಿತ್ತು, ಆದರೆ ಅವರು ಕಾರ್ಮಿಕರ ಸಮಸ್ಯೆಗೆ ಸಮಾಜದ ಸಮಾನತೆಗೆ ತಮ್ಮ ಬದುಕನ್ನು ಸವೆಸಿದರು ಎಂದರು.
    ನಂತರ ಮತ್ತೊಬ್ಬ ಹೋರಾಟಗಾರ ಮುಖಂಡ ಡಿ.ಎಚ್.ಪೂಜಾರರವರು ಮಳೆಬೆನ್ನೂರವರೊಂದಿಗಿನ ಹಲವಾರು ಹೋರಾಟದ ಸಂದರ್ಭಗಳನ್ನು ನೆನಪಿಸಿಕೊಂಡು ಅವರು ದುಷ್ಟ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಡುತ್ತಾ ಬಂದವರು ಎಂದು ನುಡಿದರು. ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಯವರು ತಮಗೆ ಲಂಕೇಶ ವರದಿಗಾರರಾಗಿದ್ದಾಗ ಕೇಸ್ ಬಗ್ಗೆ ಸಹಕರಿಸಿದ್ದನ್ನು ನೆನಪಿಸಿ ಅರವಿಂದ ಮಳೆಬಳೆಬೆನ್ನೂರು ಸಮಾಜಕ್ಕಾಗಿ ಮಿಡಿದವರು ದುಡಿದವರು ಮಡಿದವರು ಎಂದರು.
    ಸಭೆಯನ್ನು ಸಂಚಾಲನೆ ಮಾಡುತ್ತಾ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡ ಬಸವರಾಜ ಶೀಲವಂತರ ಮಳೆಬೆನ್ನೂರು ಹಲವಾರು ಬಾರಿ ಜೇಲುಕಂಡರು ಜಗ್ಗದೆ ತಮ್ಮ ಇಳಿವಯಸ್ಸಿನವರೆಗೆ ಹೋರಾಟದಲ್ಲಿಯೇ ಮುಂದುವರಿದವರು ಅವರ ಸಾವು ಸಮಾಜಕ್ಕೆ ದೊಡ್ಡ ಹಾನಿ ಎಂದರು. ಏಸಪ್ಪ ಶಿವಪ್ಪ ಹಡಪದ, ಶರಣಪ್ಪ ಕೊತಬಾಳ, ನನ್ನೇಸಾಬ ನೀಲಿ ಮುಂತಾದವರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!