ಜಾತ್ರಾ ನಿಮಿತ್ಯ ನಡೆದ ಕಣ್ಣಿನ ಉಚಿತ ತಪಾಸಣೆ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠ ಜಾತ್ರೆಯ ಅಂಗವಾಗಿ ದಿನಾಂಕ ೧೧,೧೨,೧೩ ರಂದು  ಮೂರು ದಿವಸಗಳ ಕಾಲ  ಲಯನ್ಸ ಕಣ್ಣಿನ ಆಸ್ಪತ್ರೆಯಲಿ ಕಣ್ಣಿನ ಉಚಿv ತಪಾಸಣೆ ಹಾಗೂ ಅಪರೇಶನ್  ಪರ್ಯಾಯ ಚಿಕೆತ್ಸೆ ಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ೩೦೦ ಜನರು ತಪಾಸಣೆಯನ್ನು ಹಾಗೂ ೧೫ ಜನರು ಅಪರೇಶನ್ ಚಿಕೆತ್ಸಗೆ ಒಳಗಾಗಿ ಶಿಬಿರವನ್ನು  ಸದುಪಯೋಗಪಡಿಸಿಕೊಂಡರೆಂದು ಆಸ್ಪತ್ರೆಯ ವೈದ್ಯರಾದ ಡಾ.ಜ್ಯೋತಿ ಸಂಗನಾಳ ಮಾಧ್ಯಮಕ್ಕೆ ತಿಳಿಸಿದ್ದಾರೆ. ಜಾತ್ರಾ ನಿಮಿತ್ಯವಾಗಿ ಹಮ್ಮಿಕೊಂಡ ಈ ಶಿಬಿರಕ್ಕೆ ಪೂಜ್ಯ ಶ್ರೀಗಳು ಶುಭಹರಸಿ ಆಶಿರ್ವದಿಸಿದ್ದಾರೆ.
ಜಾತ್ರೆಯಲ್ಲಿ ನೇತ್ರದಾನ ಅಭಿಯಾನ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠ ಜಾತ್ರೆಯ ಅಂಗವಾಗಿ ದಿನಾಂಕ ೧೧ ರಿಂದ ನೇತ್ರದಾನ ಅಭಿಯಾನವನ್ನು ಶ್ರೀಮಠದಲ್ಲಿ ಹಮ್ಮಿಕೊಳಲಾಗಿದೆ. ಕಳೆದ ಜಾತ್ರೆಯಲ್ಲಿ  ಈ ಜಿಲ್ಲೆಯ ಸಾವಿರಾರು ಜನರು  ಹೆಸರನ್ನು ನೊಂದಾಯಿಸಿದ್ದರು. ಈ ಸಾರೆಯು ಕೂಡಾ ಈ ಅಭಿಯಾನ ಶ್ರೀಮಠದಲ್ಲಿ  ಚಾಲನೆಯಲ್ಲಿದೆ. ಅಂಧರ ಬಾಳಿಗೆ ಬೆಳಕನ್ನು ಕೊಡುವಂತಹ  ಇಂತಹ ಅಭಿಯಾನವು ಕೊಪ್ಪಳದ ಜಾತ್ರಾ ವೈಶಿಷ್ಟ್ಯತೆಗಳಲ್ಲಿ ಒಂದಾಗಿದೆ. 
Please follow and like us:
error