೩೮ ನೆಯ ಬೆಳಕಿನೆಡೆಗೆ ಅಮವಾಸ್ಯೆಯ ಮರುದಿನ

ಈ ಸಾರೆ ದೀಪಾವಳಿ ಅಮವಾಸ್ಯೆಯ ಮರುದಿನ ಬಲಿಪಾಡ್ಯದಂದು  ೩೮ ನೆಯ ಬೆಳಕಿನೆಡೆಗೆ
ಕೊಪ್ಪಳ:  ಸಂಸ್ಥಾನ ಶ್ರೀಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ ಜರುಗುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು ಈ ಸಾರೆ ದೀಪಾವಳಿ ಮಹಾ ಅಮವಾಸ್ಯೆಯ ನಿಮಿತ್ಯ ಅಮವಾಸ್ಯೆಯ ಮರುದಿನ ದಿನಾಂಕ ೧೪-೧೧-೨೦೧೨ ರ ಬುಧವಾರ ದಂದು ಬಲಿಪಾಡ್ಯದ ದಿನ  ಶ್ರೀಮಠದ ಕೆರೆಯ ದಡದಲ್ಲಿ ಜರುಗಲಿದೆ.
              ೩೮ ನೇ ಬೆಳಕಿನೆಡೆಗೆ  ಕಾರ್ಯಕ್ರಮಕ್ಕೆ ಪ್ರವಚನಕಾರರಾಗಿ  ಸಿದ್ಧೇಶ್ವರ ಶಾಸ್ತ್ರೀಗಳು ಹಿರೇಮಠ ಸಾ.ಬಳೂಟಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿ.ಎಸ್.ಪಾಟೀಲ ಸರಕಾರಿ ಅಭಿಯೋಜಕರು ವಹಿಸಲಿದ್ದಾರೆ. ಮುನಿರಾಬಾದನ ಶ್ರೀಮತಿ ಅಮರಗಂಗಾ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮವು ಸಹ ಜರುಗಲಿದೆ. ಈ ಕಾರ್ಯಕ್ರಮದ ಭಕ್ತಿಸೇವೆಯನ್ನು  ಕಳಕಪ್ಪ ಗುರುಬಸಪ್ಪ ವಿವೇಕಿ ಕೊಪ್ಪಳ ವಹಿಸಿರುತ್ತಾರೆ. ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.
Please follow and like us:
error