fbpx

ಡಿ.ಕೆ.ರವಿ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಪ್ರತಿಭಟನೆ

ಹೊಸಪೇಟೆ: ದಕ್ಷ,ಪ್ರಾಮಾಣಿಕ,ನಿಷ್ಠಾವಂತ ಐಎಎಸ್ ಅಧಿಕಾರಿ ಡಿ.ಕೆ.ರವಿ ಇವರ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಬುಧವಾರ ಪ್ರತಿಭಟನೆ ನಡೆಸಿತು.
ಈ ಸಾವಿನ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಾರ್ಜ್ ಇವರುಗಳ ಉದಾಸೀನ ಹೇಳಿಕೆಗಳು ಖಂಡನಾರ್ಹವಾಗಿವೆ. ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ತಾಲೂಕು ಘಟಕವು ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ವಿನೋದ್ ಕುಮಾರ್ ಹೆಚ್., ಮುಖಂಡರಾದ ಹುಲುಗಪ್ಪ ಮಡ್ಡಿ, ಕಲ್ಲಪ್ಪ, ತಿಮ್ಮರಾಜು ವಿ., ಎಂ.ವೆಂಕಟೇಶ್ವರ ರಾವ್, ಕೆ.ಶ್ಯಾಮ್, ಕೆ.ತಿರುಪಲ ಮತ್ತಿತರರು ಹಾಜರಿದ್ದರು. 
೧೯ಎಚ್‌ಪಿಟಿ೦೧
ಹೊಸಪೇಟೆಯಲ್ಲಿ ಬುಧವಾರ ನಿಷ್ಠಾವಂತ ಐಎಎಸ್ ಅಧಿಕಾರಿ ಡಿ.ಕೆ.ರವಿ ಇವರ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಪ್ರತಿಭಟನೆ ನಡೆಸಿತು. 
Please follow and like us:
error

Leave a Reply

error: Content is protected !!