ಕೆ.ಎಂ.ಸಯ್ಯದ್ ಜನ್ಮದಿನದ ಪ್ರಯುಕ್ತ ಅನಾಥ ಮಕ್ಕಳಿಗೆ ನೋಟ್‌ಬುಕ್ ವಿತರಣೆ.

ಕೊಪ್ಪಳ,ಜು,೦೨- ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷರು ಹಾಗೂ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ನಾಯಕರು, ಕೆ.ಎಂ.ಸಯ್ಯದ್ ಅವವರ ೩೫ನೇ ವರ್ಷದ ಜನ್ಮ ದಿನದ ಪ್ರಯುಕ್ತ ಜುಲೈ ೧ ರಂದು ಇಲ್ಲಿನ ಬಾಲಮಂದಿರದಲ್ಲಿ ಅನಾಥ ಮಕ್ಕಳಿಗೆ ಸಯ್ಯದ್ ಫೌಂಡೇಶನ್‌ವತಿಯಿಂದ ಉಚಿತವಾಗಿ ನೋಟ್‌ಬುಕ್ ವಿತರಣೆಮಾಡಿ ಅವರೊಂದಿಗೆ ಕೆಕ್ ಕತ್ತರಿಸಿ ತಿನಿಸುವುದರ ಮೂಲಕ ಜನ್ಮದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಾಲಮಂದಿರದ ವ್ಯವಸ್ಥಾಪಕ ರವಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ ಇಲ್ಲಿನ ಸಮಾಜ ಸೇವಕ ಕೆ.ಎಂ.ಸಯ್ಯದ್ ರವರು ತಮ್ಮ ಜನ್ಮದಿನವನ್ನು ಬಾಲಮಂದಿರದಲ್ಲಿ ಅನಾಥ ಮಕ್ಕಳೊಂದಿಗೆ ಆಚರಣೆ ಮಾಡುತ್ತಿರುವ ಅವರ ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.   ಕಾರ್ಯಕ್ರಮದಲ್ಲಿ ನ್ಯಾಯವಾದಿ ಬಿ.ಕೆ.ಹಿರೇಮಠ, ಎಸ್.ಎ.ನೂರ್‌ಭಾಷಾ, ಕೆ.ಎಂ.ಎಸ್.ವ್ಯವಸ್ಥಾಪಕ ಗೌಸ್ ಹುಸೇನಿ, ಲೆಕ್ಕಾಧಿಕಾರಿ ರಿಯಾಜುದೀನ್ ಕಿಲ್ಲೇದಾರ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:

Leave a Reply