You are here
Home > Koppal News > ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಪ್ರಕಾಶ ಕಂದಕೂರಗೆ ಪ್ರಥಮ ಸ್ಥಾನ.

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಪ್ರಕಾಶ ಕಂದಕೂರಗೆ ಪ್ರಥಮ ಸ್ಥಾನ.

ಕೊಪ್ಪಳ, ಅ.೧೨

ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಛಾಯಾಚಿತ್ರ ಸಮೂಹ ಸಂಸ್ಥೆಯ ೬ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಫರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.  ಛಾಯಾಚಿತ್ರ ಸ್ಪರ್ಧೆಯಲ್ಲಿ ಮದುವೆ ಸಂಭ್ರಮ ಮತ್ತು ಪಿಕ್ಟೋರಿಯಲ್ ಎಂಬ ಎರಡು ವಿಭಾಗಗಳನ್ನು ನೀಡಲಾಗಿತ್ತು. ರಾಜ್ಯದ ಎಲ್ಲೆಡೆಯಿಂದ ಸ್ಪರ್ಧೆಗೆ ಬಂದಿದ್ದ ೮೦ ಛಾಯಾಗ್ರಾಹಕರ ೮೦೦ ಛಾಯಾಚಿತ್ರಗಳಲ್ಲಿ ಪ್ರಕಾಶ ಕಂದಕೂರ ಅವರ ಛಾಯಾಚಿತ್ರವು ಮದುವೆ ಸಂಭ್ರಮ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ. ಸ್ಪರ್ಧೆಯಲ್ಲಿ ಸಾಗರದ ಕೆ.ಎಸ್.ರಾಜಾರಾಮ್, ಕೆ.ಚಂದ್ರಶೇಖರ, ಕಮಲಾಪುರದ ಪಂಪಯ್ಯ ಮಳಿಮಠ, ಹೊಸಪೇಟೆಯ ಶಿವಶಂಕರ ಬಣಕಾರ ಹಾಗೂ ಇಳಕಲ್‌ದ ಚಂದ್ರಶೇಖರ ಮಾಳಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ರೂ.೧೧,೦೦೦ ನಗದು, ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕವನ್ನು ಒಳಗೊಂಡಿದ್ದ ಪ್ರಶಸ್ತಿಯನ್ನು ಇಳಕಲ್‌ನಲ್ಲಿ ಭಾನುವಾರ ನಡೆದ ಸಮೂಹ ಸಂಸ್ಥೆಯ ವಾಷಿಕೋತ್ಸವ ಸಮಾರಂಭದಲ್ಲಿ ಪ್ರಕಾಶ ಕಂದಕೂರ ಗೆ ವಿತರಿಸಲಾಯಿತು.  ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಛಾಯಾಚಿತ್ರ ಸಮೂಹ ಸಂಸ್ಥೆಯ ೬ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರನ್ನು ಇಳಕಲ್‌ನಲ್ಲಿ ಭಾನುವಾರ ನಡೆದ ಸಂಸ್ಥೆಯ ವಾಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Leave a Reply

Top