fbpx

ಶಾಸಕರಿಂದ ರೂ. ೨.೫ ಕೋಟಿಗಳ ಕಾಮಗಾರಿಗೆ ಭೂಮಿಪೂಜೆ.

ಕೊಪ್ಪಳ-10- , ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಅಳವಂಡಿ, ಮೋರನಹಳ್ಳಿ, ಬೈರಾಪುರ, ಭೋಚನಹಳ್ಳಿ, ಬೆಟಗೇರಿ, ಹಾಗೂ ಹನಕುಂಟಿ ಗ್ರಾಮಗಳಲ್ಲಿ ಕರ್ನಾಟಕ ಗ್ರಾಮ ಮೂಲಭೂತ ಸೌಕರ್ಯ ಅಡಿಯಲ್ಲಿ ಹಾಗೂ ಲೋಕೋಪಯೋಗಿ ಇಲಾಖೆಯ ಅನುಧಾನದಅಡಿಯಲ್ಲಿ ಸಿಸಿ ರಸ್ತೆ, ಪದವಿ ಕಾಲೇಜು ಕಟ್ಟಡ, ಶಾಲಾ ಕಟ್ಟಡ, ಗ್ರಂಥಾಲಯ, ಹಾಗೂ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ.೨.೫ ಕೋಟಿಗಳ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳು ಕೊಪ್ಪಳದ ಸರ್ವಾಂಗೀಣ ಅಭಿವೃದ್ಧಿಗೆ ರೂ. ೫೦೦ ಕೋಟಿ ಅನುಧಾನವನ್ನು ನೀಡಿದ್ದು, ಅಭಿವೃದ್ಧಿಗೆ ಹೆಚ್ಚು ಸಹಾಯಕಾರಿಯಾಗಿದೆ. ಶೀಘ್ರದಲ್ಲಿಯೇ ಅಳವಂಡಿ ಮತ್ತು ಬೆಟಗೇರಿಯ ಏತನೀರಾವರಿಗೆ ರೂ. ೮೮ ಕೋಟಿಯ ಟೆಂಡರ್ ಪರಿಕ್ರೀಯೆ ಮುಗಿದಿದ್ದು, ಬರುವ ದಿನಗಳಲ್ಲಿ ಈ ಕಾಮಗಾರಿಗಳ ಭೂಮಿಪೂಜೆ ನೇರವೇರಿಸಲಾಗುವುದು. ನುಡಿದಂತೆ ನಡೆಯುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಹಿಂದುಳಿದ ವರ್ಗ, ದಲಿತರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಕೇವಲ ೧ ವರ್ಷದಲ್ಲೇ ಈ ದೇಶದ ಪ್ರಧಾನಮಂತ್ರಿ ಜನರಿಗೆ ಹೇಳಿದ ಸುಳ್ಳು ಆಶ್ವಾಸನೆಗಳಿಂದ ಬೇಸತ್ತ ಜನತೆ ಈಗಾಗಲೇ ದೆಹಲಿ ಮತ್ತು ಬಿಹಾರದಲ್ಲಿ ತಕ್ಕ ಪಾಠ
 ಈ ಸಂದರ್ಭದಲ್ಲಿ ಕೆ.ಎಮ್.ಅಧ್ಯಕ್ಷರಾದ ವೆಂಕನಗೌಡ್ರು ಹಿರೇಗೌಡ್ರು, ಪಕ್ಷದ ಮುಖಂಡರಾದ ಈಶಪ್ಪ ಮಾದಿನೂರು, ಗ್ರಾ.ಪಂ. ಶ್ರೀಮತಿ ಪಕೀರಮ್ಮ ಜಂತ್ಲಿ, ಸುರೇಶ ಭೂಮರೆಡ್ಡಿ, ಬಸವರೆಡ್ಡೆಪ್ಪ ಹಳ್ಳಿಕೇರಿ, ಹಟ್ಟಿ ಭರಮಪ್ಪ, ನಾರಾಯಣರೆಡ್ಡಿ ಬೆಟಗೇರಿ, ಸಿದ್ದಲಿಂಗಯ್ಯ ಇನಾಮದಾರ, ಭರಮಪ್ಪ ಕಂಬಳಿ, ಗುರುಬಸವರಾಜ ಅಳವಂಡಿ, ಸುರೇಶ ದಾಸರೆಡ್ಡಿ, ನಜೀರ್, ಪರಶುರಾಮ ಭೈರಾಪುರ, ಇನ್ನೂ ಅನೇಕರು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರೆಂದು ವಕ್ತಾರ ಅಕ್ಬರಪಾಷಾ ಪತ್ರಿಕಾ ತಿಳಿಸಿದ್ದಾರೆ.

ಕಲಿಸಿದ್ದಾರೆ. ನಮ್ಮ ಅಭಿವೃದ್ಧಿ ಸಹಿಸದವರು ವಿನಾಕಾರಣ ನಮ್ಮ ಮೇಲೆ ಗೂಬೆಕುಡಿಸಲು ಪ್ರಯತ್ನಮಾಡುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನು ನೋಡುತ್ತಿದ್ದು ಬರುವ ವಿಧಾನಪರಿಷತ್ ಚುನಾವಣೆ ಹಾಗೂ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜಯಭೇರಿಗೊಳಿಸಿ ಮುಖ್ಯಮಂತ್ರಿಯವರ ಬಲವನ್ನು ಹೆಚ್ಚಿಸಲಿದ್ದಾರೆ ಎಂದು ಹೇಳಿದರು.

Please follow and like us:
error

Leave a Reply

error: Content is protected !!