ಇಂದು ಭಾಗ್ಯನಗರದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಾರಂಭ

 ಕೊಪ್ಪಳ ತಾಲೂಕಿನ ಭಾಗ್ಯನಗರ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮೀಯ ೨೧ನೇ ಜಾತ್ರಾ ಮಹೋತ್ಸವವು ಅಗಷ್ಟ ೦೨ ರಂದು ಶನಿವಾರ ಪ್ರಾರಂಭವಾಗಿ ೫ ದಿನಗಳ ವರಗೆ ವಿಜೃಂಭಣೆಯಿಂದ ಆಚರಿಸಲಾಗುವದು ಎಂದು ಶ್ರೀ ಗುರುಬಸವೇಶ್ವರ ದೇವಸ್ಥಾನ ಟ್ರಸ್ಟ ಕಮೀಟಿ ಅಧಕ್ಷ ಶಿವನಗೌಡ ಎಲ್ ಶಾಂತಗಿರಿ ತಿಳಿಸಿದ್ದಾg. 
ದೇವಸ್ಥಾನದಲ್ಲಿ ಪ್ರತಿನಿತ್ಯ  ರುದ್ರಾಭಿಷೇಕ ಜರುಗಿ ದಿನಾಂಕ ೦೬-೦೮-೨೦೧೪ರಂದು ಬುಧುವಾರ ಬೆಳಿಗ್ಗೆ ೮:೦೦ ಘಂಟೆಗೆ ಭಾಗ್ಯನಗರದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ಮೂರ್ತಿಯ ಮೆರವಣಿಗೆಯ ಮೂಲಕ ಗಂಗೆಗೆ ಹೋಗಿ ಬಂದ ನಂತರ ಅಗ್ನಿಪ್ರವೇಶ ಕಾರ್ಯಕ್ರಮ ಜರಗುವದು. 
ಶ್ರೀ ಗುರುಬಸವೇಶ್ವರ ಯುವಕ-ಯುವತಿ ಮಂಡಳದವರಿಂದ ಸಮಾಳ ಮತ್ತು  ನಂದಿಕೋಲು ಸೇವಾದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಕರಡಿಮಜಲು ನಂದಿಕೋಲು ಕುಣಿತ ಸಮಾಳಭಾಜ ಜಾತ್ರೆಯ ವಿಶೇಷ ಕಾರ್ಯಕ್ರಮಗಳಾಗಿರುತ್ತವೆ.
ಈ ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ತರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ದೇವಸ್ಥಾನ ಟ್ರಸ್ಟ ಕಮೀಟಿಯ ಅಧಕ್ಷರು ಮತ್ತು ಪದಾಧಿಕಾರಿಗಳು  ವಿನಂತಿಸಿಕೊಂಡಿದ್ದಾರೆ.
Please follow and like us:
error